ವಿಜಯ ದರ್ಪಣ ನ್ಯೂಸ್….
ಕನ್ನಡ ಶಾಲೆ ಉಳಿವಿಗಾಗಿ ಕರವೇ ಸ್ವಾಭಿಮಾನಿ ಸೇನೆ ಅಭಿಯಾನ :ರಾಜ್ಯ ಉಪಾಧ್ಯಕ್ಷೆ ಅನುರಾಧ

ದೇವನಹಳ್ಳಿ, ಮೇ 25: ಕನ್ನಡ ಶಾಲೆಗಳ ಉಳಿವಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಪ್ರತಿ ಕನ್ನಡ ಶಾಲೆಗೆ ಭೇಟಿ ನೀಡಿ ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ ಪ್ರಾರಂಭಿಸಲಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಅನುರಾಧ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸಂಘಟನೆಯ ವತಿಯಿಂದ ಕನ್ನಡ ಶಾಲೆ ಉಳಿಸಿ ಅಭಿಯಾನ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷ ನಿಂಗರಾಜ್ ಗೌಡ್ರು ಅವರ ಜನ್ಮದಿನದ ಅಂಗವಾಗಿ ನಾಳೆಯಿಂದ ಕನ್ನಡ ಶಾಲೆ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಳ್ಳಿಗಳಲ್ಲಿನ ಸರಕಾರಿ ಶಾಲೆಗಳು ಉಳಿಯಬೇಕು. ಕನ್ನಡ ನಾಡು, ನೆಲ, ಜಲ ಉಳಿವಿಗೆ ಪ್ರತಿಯೊಬ್ಬ ಕನ್ನಡಿಗರು ಧ್ವನಿಗೂಡಿಸಬೇಕು. ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವುದು ಒಂದೇ ಮಾರ್ಗವಲ್ಲ. ಬದಲಿಗೆ ಶಾಲೆಗಳಿಗೆ ತಮ್ಮ ಕೈಲಾದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ನೆರವು ನೀಡಬೇಕು ಎಂದರು.
ಇತ್ತೀಚೆಗೆ ದೂರದ ಹೆಣ್ಣುಮಕ್ಕಳು ಶಾಲೆಗಳಿಗೆ ಹೋಗಿ ಬರುವುದೇ ಸವಾಲಾಗಿದೆ. ದೂರದ ಶಾಲೆಗಳಿಗೆ ಹೆಣ್ಮಕ್ಕಳನ್ನು ಕಳಿಸುವುದೇ ಭಯವಗುತ್ತದೆ. ಹೆಣ್ಣು ಮಕ್ಕಳಿಗೆ ಭದ್ರತೆ ಇಲ್ಲ. ನಮ್ಮ ಊರು ನಮ್ಮ ಶಾಲೆ ಉಳಿಯಬೇಕು. ರಾಜ್ಯದಾದ್ಯಂತ ತೀರ ಹಿಂದುಳಿದಿರುವ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಆದ್ಯತೆಯ ಮೆರೆಗೆ ಶಾಲೆಗೆ ಸುಣ್ಣಬಣ್ಣ ಬಳಿಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದೇವನಹಳ್ಳಿಯಲ್ಲಿ 6 ಶಾಲೆಗಳನ್ನು ಗುರುತಿಸಲಾಗಿದ್ದು ಶಾಲೆಗಳಿಗೆ ಸುಣ್ಣ ಬಣ್ಣ ಬಳಿಯುವ ತೀರ್ಮಾನ ಕೈಗೊಂಡಿದ್ದು, ಆ ಕಾರ್ಯ ಮಂಗಳವಾರ ದಿಂದ ಪ್ರಾರಂಭವಾಗಲಿದೆ ಎಂದರು.
ಇದೆ ವೇಳೆ ಕರವೇ ಸ್ವಾಭಿಮಾನಿ ಸೇನೆ ದೇವನಹಳ್ಳಿ ತಾಲೂಕು ಅಧ್ಯಕ್ಷ ಮುಕುಂದ, ಮಹಿಳಾ ಅಧ್ಯಕ್ಷೆ ಲತಾ, ಪದಾಧಿಕಾರಿಗಳಾದ ವೆಂಕಟೇಶ್, ಚೌಡಮ್ಮ, ರಘು, ಶ್ರೀನಿವಾಸ್, ರತ್ನಮ್ಮ, ಇಂದಿರಾ, ಗೀತಾ, ಮಧು, ತ್ಯಾಗರಾಜ್, ಮ್ಯಾಥ್ಯು ಮುನಿಯಪ್ಪ ಇದ್ದರು.










