--Ads--

ಶಾಸಕ ದರ್ಶನ್ ರವರಿಗೆ ಸಚಿವ ಸ್ಥಾನ ನೀಡುವಂತೆ ದಲಿತ ಸಂಘಟನೆ ಆಗ್ರಹ

On: May 30, 2026 5:22 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶಾಸಕ ದರ್ಶನ್ ರವರಿಗೆ ಸಚಿವ ಸ್ಥಾನ ನೀಡುವಂತೆ ದಲಿತ ಸಂಘಟನೆ ಆಗ್ರಹ

ತಾಂಡವಪುರ ಮೇ 29 ದಕ್ಷಿಣ ಕಾಶಿ:ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ರವರಿಗೆ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡು ವಂತೆ ಕರ್ನಾಟಕ ದಲಿತ ಸಂಘರ್ಷ ತಾಲೂಕು ಸಮಿತಿ ವತಿಯಿಂದ ಒತ್ತಾಯಿಸಲಾಯಿತು.

ನಂಜನಗೂಡು ತಾಲೂಕು ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಲಿತ ಮುಖಂಡ ಮಲ್ಲ ಹಳ್ಳಿ ನಾರಾಯಣ್ ಹಾಗೂ ತಾ. ಸಮಿತಿಯ ಸಂಚಾಲಕ ಗಟ್ವವಾಡಿ ಮಹೇಶ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವರಿಷ್ಠ ರಿಗೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡ ಮಲ್ಲಳ್ಳಿ ನಾರಾಯಣ್ ಮಾತನಾಡಿ ದಿ” ಧ್ರುವನಾರಾಯಣ್ ರವರು ಕಾಂಗ್ರೆಸ್ ಪಕ್ಷದ ಅತ್ಯಂತ ನಿಷ್ಠಾವಂತ ನಾಯಕರಾಗಿದ್ದು ಪಕ್ಷಕ್ಕಾಗಿ ಸೇವೆಸಲ್ಲಿಸಿದ್ದಾರೆ.
ಪಕ್ಷವು ವಹಿಸಿದ್ದ ಎಲ್ಲಾ ಜವಾಬ್ದಾರಿ ಹುದ್ದೆಗಳನ್ನು ನಿಭಾಯಿಸಿ ನಂಜನಗೂಡು ಕ್ಷೇತ್ರ ಹಾಗೂ ರಾಜ್ಯದ
ಪ್ರವಾಸ ಮಾಡಿ ಎಲ್ಲಾ ಜಾತಿ ಧರ್ಮದ ಜನರನ್ನು ಪ್ರೀತಿಯಿಂದ ಕಂಡು ಎಲ್ಲರ ವಿಶ್ವಾಸ ಗಳಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ಮರಣ ಪಕ್ಷಕ್ಕೆ ದೊಡ್ಡ ನಷ್ಟವಾಗಿ ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತ್ತು.

ಇಂದು ರಾಜ್ಯದಲ್ಲಿ ಬಹುಮತದಿಂದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರಲು ಅವರ ಶ್ರಮವು ಕಾರಣವಾಗಿದೆ.ಇದೆಲ್ಲವನ್ನು ಪರಿಗಣಿಸಿಅವರ ತ್ಯಾಗ ನಿಷ್ಠೆಗೆ ಋಣ ತೀರಿಸಲು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಸ್ಥಳೀಯ ಶಾಸಕರಾದ ಅವರ ಪುತ್ರರಾದ ದರ್ಶನ್ ರವರಿಗೆ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ನ್ನು ಒತ್ತಾಯಿಸಿದರು.

ಕರ್ನಾಟಕರಾಜ್ಯದಲ್ಲೇ ಅತ್ಯಂತ ಕಿರಿಯಶಾಸಕನೆಂಬ
ಹೆಸರು ಪಡೆದು ತಂದೆ ನಡೆದು ಬಂದ ದಾರಿಯಲ್ಲೇ ಸಾಗಿ ಅತಿ ಕಡಿಮೆ ಅವಧಿಯಲ್ಲಿಕ್ಷೇತ್ರದ ಜನರ ಪ್ರೀತಿ ವಿಶ್ವಾಸ, ನಂಬಿಕೆ ಗಳಿಸುವುದರ ಜೊತೆಗೆ ಅಭಿವೃದ್ದಿ ಕಾರ್ಯದಲ್ಲು ತಂದೆಯಂತೆ ಹಗಲು ರಾತ್ರಿ ದುಡಿಯುತ್ತಿದ್ದಾರೆ.ಇವರ ಪ್ರಾಮಾಣಿಕ ಸೇವೆಯನ್ನುಪರಿಗಣಿಸಿ ಸಚಿವ ಸ್ಥಾನವನ್ನು ನೀಡಿದರೆ ಮುಂದಿನ ದಿನದಲ್ಲಿ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ತಾ. ಸಂಚಾಲಕ ಗಟ್ಟವಾಡಿ ಮಹೇಶ್,ಹೂವಯ ಲೋಕೇಶ್ ಸಿದ್ದರಾಜು ಬಸವರಾಜು ಮಾದೇವ ಪ್ರಸಾದ್ ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now