--Ads--

ಡಿ .ಕೆ.ಶಿ  ಮುಖ್ಯಮಂತ್ರಿ ಆಗಲಿ ಎಂದು ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಗೆ ರಾಜೀವ್ ಗೌಡ ಅರಿಕೆ

On: May 30, 2026 5:42 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಡಿ .ಕೆ.ಶಿ  ಮುಖ್ಯಮಂತ್ರಿ ಆಗಲಿ ಎಂದು ತಿರುಪತಿ ಶ್ರೀವೆಂಕಟೇಶ್ವರ ಸ್ವಾಮಿಗೆ ರಾಜೀವ್ ಗೌಡ ಅರಿಕೆ

ಶಿಡ್ಲಘಟ್ಟ : ರಾಜ್ಯ ರಾಜಕಾರಣದ ಕಾಂಗ್ರೆಸ್ ಪಕ್ಷದ ಮಾಸ್ಟರ್ ಮೈಂಡ್ ಟ್ರಬಲ್ ಶೂಟರ್ ಹಾಗೂ ನನ್ನ ರಾಜಕೀಯ ಗುರುಗಳು, ಹಾಲಿ ಉಪಮುಖ್ಯಮಂತ್ರಿಗಳು ಆದ “ಡಿ.ಕೆ. ಶಿವಕುಮಾರ್ ಅಣ್ಣನವರು ರಾಜ್ಯದ ಮುಖ್ಯಮಂತ್ರಿ” ಆಗಬೇಕೆಂದು ತಿರುಮಲ ತಿರುಪತಿ ಶ್ರೀ ವೆಂಕಟರಮಣಸ್ವಾಮಿ ದೇವರಲ್ಲಿ ಹರಕೆ ಇಟ್ಟುಕೊಂಡಿದ್ದು, ಅದರಂತೆ ಇಂದು ಶ್ರೀವಾರಿ ಬೆಟ್ಟಕ್ಕೆ ಭೇಟಿ ನೀಡಿ ಮೆಟ್ಟಿಲುಗಳನ್ನು ಹತ್ತುವ ಮುಖಾಂತರ ಕಾಲ್ನಡಿಗೆ ಜಾತಾ ನಡೆಸಿ ಹೆಜ್ಜೆ ಹೆಜ್ಜೆಗೂ ಹರಕೆ ಹೊತ್ತು ಅಧಿಕಾರ ಸ್ವೀಕಾರಕ್ಕೆ ಯಾವುದೇ ವಿಘ್ನಗಳು ನಡೆಯದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ ಸನ್ನಿಧಾನಕ್ಕೆ ಭೇಟಿ ನೀಡಿದೆವು ಎಂದು ಕೆಪಿಸಿಸಿ ಸಂಯೋಜಕರಾದ ರಾಜೀವ್ ಗೌಡ ಹಾಗು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷೆ ಸಹನಾರಾಜೀವ್ ಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ವೇಳೆ ಹರಕೆಯ ಪ್ರತಿಥಿಯಂತೆ ಕೇಶ ಮುಡಿ ಕೊಡುವ ಮೂಲಕ ಭಗವಂತನಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.ವಿಶೇಷ ಪೂಜೆ ಸಲ್ಲಿಸಲು ಪಲ್ಲಕ್ಕಿ ಉತ್ಸವ ಹಾಗು ಪೂಜಾ ಕೈಂಕರ್ಯಗಳನ್ನು ನಡೆಸಿ ನನ್ನ ಗುರುಗಳಾದ ಡಿ.ಕೆ. ಶಿವಕುಮಾರ್ ರವರು ತಮ್ಮ ಅಧಿಕಾರ ಅವಧಿಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮಾಡೆಲ್ ರಾಜ್ಯವಾಗಿ ತಮ್ಮ ಕನಸಿನ ಗ್ರೇಟರ್ ಬೆಂಗಳೂರು ನಿರ್ಮಾಣದಂತೆ, ಗ್ರೇಟರ್ ಕರ್ನಾಟಕವಾಗಲಿ ತಮ್ಮ ರಾಜಕೀಯ ಹೆಜ್ಜೆಗೆ ಯಾವುದೇ ಕೇಡು ಆಗದಿರಲಿ ಎಂದು ಕೋರಿದೆವು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೂ ಅತಿ ಹೆಚ್ಚಿನ ಅನುದಾನ ನೀಡಿ ನಮ್ಮ ಕ್ಷೇತ್ರವು ಉತ್ಯುನ್ನತ ಮಟ್ಟಕ್ಕೆ ತಲುಪಲು  ಸಹಕಾರ ಇರಲಿ ಎಂದು ಕೋರಿದೆ ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now