--Ads--

ಪುಕ್ಕಟ್ಟೆ ಪ್ರಚಾರಕ್ಕೆ ಶಾಸಕರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಬಿಡಿ : ರಾಜ್ಯ ಒಕ್ಕಲಿಗರ ಒಕ್ಕೂಟದ ಉಪಾಧ್ಯಕ್ಷ ಪಿ.ಎನ್.ರಘುನಾಥರೆಡ್ಡಿ

On: July 24, 2026 4:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

 ಪುಕ್ಕಟ್ಟೆ ಪ್ರಚಾರಕ್ಕೆ ಶಾಸಕರ ವಿರುದ್ಧ ಹೇಳಿಕೆಗಳನ್ನು ನೀಡುವುದನ್ನು ಬಿಡಿ : ರಾಜ್ಯ ಒಕ್ಕಲಿಗರ ಒಕ್ಕೂಟದ ಉಪಾಧ್ಯಕ್ಷ ಪಿ.ಎನ್.ರಘುನಾಥರೆಡ್ಡಿ

ಶಿಡ್ಲಘಟ್ಟ : ಶಾಸಕ ರಾಜಕೀಯ ವಿರೋಧಿಗಳಿಂದ ಪೇಮೆಂಟ್ ಪಡೆದು ಆಧಾರರಹಿತ ಸುಳ್ಳು ಆರೋಪ ಮಾಡಿರುವುದು ರಾಜಕೀಯ ಪ್ರೇರಿತ ಹಾಗೂ ಭಾಗ್ಯನಗರ (ಬಾಗೇಪಲ್ಲಿ) ಜನರ ಶಾಂತಿ ಕದಡುವ ಉದ್ದೇಶದಂತಿದೆ ಸಮುದಾಯದ ಜನಪ್ರಿಯ ಶಾಸಕ ಸುಬ್ಬಾರೆಡ್ಡಿ ವಿರುದ್ಧ ಯಾವುದೋ ಸಂಘಟನೆಯ
ವ್ಯಕ್ತಿ ಸಾರ್ವಜನಿಕವಾಗಿ ಮಾನಹರಣ-ಭೂ ಕಬಳಿಕೆ ಆರೋಪ ಮಾಡಿರುವುದು ಪೂರ್ವನಿಯೋಜಿತ ಷಡ್ಯಂತರ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ
ಎಂದು ರಾಜ್ಯ ಒಕ್ಕಲಿಗರ ಒಕ್ಕೂಟದ ಉಪಾಧ್ಯಕ್ಷ ಪಿ.ಎನ್. ರಘುನಾಥರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ ,
ಭಾಗ್ಯಾನಗರ (ಭಾಗೇಪಲ್ಲಿ) ಕ್ಷೇತ್ರಕ್ಕೆ ಸಂಬಂದವೇ ಇಲ್ಲದ ಬರೀ ರೋಲ್ ಕಾಲ್ ಮತ್ತು ಬ್ಲಾಕ್ ಮಾಡುವುದನ್ನೆ ವೃತ್ತಿಯನ್ನಾಗಿಸಿಕೊಂಡಿರುವ ಬೇಜವಾಬ್ದಾರಿ ವ್ಯಕ್ತಿಯು ಮೂರು ಬಾರಿ ಶಾಸಕರಾಗಿರುವ ಎಸ್‌.ಎನ್.ಸುಬ್ಬಾರೆಡ್ಡಿ ಅವರ ವಿರುದ್ಧ ನೀಡಿರುವ ಹೇಳಿಕೆ ಅವಿವೇಕದಿಂದ ಕೂಡಿದ್ದು, ಇದನ್ನು ಒಕ್ಕಲಿಗ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.

ಶಾಸಕರು ಅಕ್ರಮಗಳನ್ನು ಮಾಡಿರುವ ನಿಖರವಾದ ದಾಖಲೆ ಇದ್ದರೆ ಸರ್ಕಾರ ಅಥವಾ ಲೊಕಾಯುಕ್ತದಿಂದ ತನಿಖೆ ಮಾಡಿಸಲಿ, ಇಲ್ಲಾ ಬಹಿರಂಗ ಚರ್ಚೆಯಲ್ಲಿ ಸಾಬೀತು ಪಡಿಸಲಿ, ಆರೋಪ ಮಾಡಿದಾಕ್ಷಣ ಅದು ಸತ್ಯವಲ್ಲ ಅದಕ್ಕೆ ಆಧಾರಗಳು ನೀಡಬೇಕಾಗುತ್ತದೆ
ಆತನ ಭಾಷೆಯ ಬಳಕೆಯನ್ನು ಗೊತ್ತಾಗಲಿದೆ ಆತನೆಷ್ಟು ಅಯೋಗ್ಯ ಎಂಬುದು ಎಂದು ಅವರು ಕಿಡಿಕಾರಿದರು.

ಇಂತಹ ಆಧಾರರಹಿತ ಆರೋಪಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳು ಮುಂದುವರಿಯದಂತೆ ನಿಲ್ಲಿಸಬೇಕು ಇಲ್ಲದಿದ್ದರೆ ಆತನ ಹಿನ್ನೆಲೆ, ಹಿಂದಿನಿಂದ ಬೆಂಬಲ ನೀಡುತ್ತಿರುವ ಕುತಂತ್ರಿಗಳ ದುರುದ್ದೇಶ ಬಿಚ್ಚಿಡಬೇಕಾಗುತ್ತದೆ. ಸಮುದಾಯದ ಪರವಾಗಿ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ತೀವ್ರ ಹೋರಾಟ ನಡೆಸಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

WhatsApp

Join Now

Telegram

Join Now

Instagram

Join Now