ವಿಜಯ ದರ್ಪಣ ನ್ಯೂಸ್….
ಪಾಲಿಕೆ ಚುನಾವಣೆಗಾಗಿ ಮತ್ತು ವಿಶ್ವದ ಅತಿ ದುಬಾರಿ ಟನಲ್ ರೋಡ್ ವಿರುದ್ಧ ಸಂಘ, ಸಂಸ್ಥೆ, ಸಾರ್ವಜನಿಕರು ಧ್ವನಿ ಎತ್ತಬೇಕು-ಸಂಸದ ತೇಜಸ್ವಿ ಸೂರ್ಯ

*ಆಲ್ ಇಂಡಿಯಾ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾಗಿ ಶ್ರೀಮತಿ ವಿನುತಾ ಹರೀಶ್ ಪದಗ್ರಹಣ ಸಮಾರಂಭ*
ಬೆಂಗಳೂರು: ಗಾಯಿತ್ರಿ ವಿಹಾರ ಅರಮನೆ ಮೈದಾನದಲ್ಲಿ ಇನ್ನರ್ ವೀಲ್ ಕ್ಲಬ್ ಅಲ್ ಇಂಡಿಯಾ ಅಸೋಸಿಯೇಷನ್ ಅಧ್ಯಕ್ಷೆಯಾಗಿ ಶ್ರೀಮತಿ ವಿನುತಾ ಹರೀಶ್ ರವರು ಪದಗ್ರಹಣ ಸಮಾರಂಭ.
ಸಂಸದ ತೇಜಸ್ವಿ ಸೂರ್ಯ ಇನ್ನರ್ ವೀಲ್ ಕ್ಲಬ್ ಇಂಡಿಯಾ ಅಧ್ಯಕ್ಷೆ ಶ್ರೀಮತಿ ವಿನುತಾ ಹರೀಶ್ , ಇನ್ನರ್ ವೀಲ್ ಕ್ಲಬ್ ಶೈಲಜಾ ಭಟ್, ಸುಮಾರವಿ, ಜ್ಯೋತಿ ಮಹಿಪಾಲ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸದ ತೇಜಸ್ವಿಸೂರ್ಯರವರು ಮಾತನಾಡಿ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರಮೋದಿರವರು 12ವರ್ಷಗಳಿಂದ ಯುವ ಸಮುದಾಯದ ಒಳಿತಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಮೊದಲು 25ಸಾವಿರ ವೈದ್ಯಕೀಯ ಸೀಟುಗಳು ಇತ್ತು ಅದರೆ ನಮ್ಮ ದೇಶಕ್ಕೆ ಇದು ಸಾಲುವುದಿಲ್ಲ ಎಂದು ಹೇಳಿ ಈಗ 50ಸಾವಿರ ವೈದ್ಯಕೀಯ ಸೀಟ್ ಅವಕಾಶ ನೀಡಲಾಗಿದೆ.
ಬೆಂಗಳೂರು ಐ.ಟಿ.ತಂತ್ರಜ್ಞಾನ ಮುಂದಿದೆ. ಬೆಂಗಳೂರು ಉತ್ತಮನಗರವಾಗಿದೆ. ಕುಡಿಯುವ ನೀರು, ಉದ್ಯಾನವನ, ಉತ್ತಮ ಮೂಲಭೂತ ಸೌಲಭ್ಯವಿರುವ ಜನರು ವಾಸಿಸುವ ಉತ್ತಮ ನಗರವಾಗಿದೆ.
ಯುವ ಸಮುದಾಯ ಪರೀಕ್ಷೆ ಬರೆಯಲು ಬಹಳ ಉತ್ಸಾಹದಲ್ಲಿ ಇರುತ್ತಾರೆ. ಕೇಂದ್ರ ಸರ್ಕಾರ ಪೇಪರ್ ಲೀಕ್ ಆಗದಂತೆ ತಡೆಗಟ್ಟಲು ಬಹಳ ಎಚ್ಚರಿಕೆ ಕ್ರಮ ಕೈಗೊಂಡಿದೆ. ಪೋಷಕರು ಅತಂಕದ ಬಗ್ಗೆ ಅರವು ಇದೆ. ಪಾರದರ್ಶಕ ಮಾದರಿಯಲ್ಲಿ ಪರೀಕ್ಷೆ ನಡೆಯಲಿದೆ.
ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಭಾರತ ದೇಶದಲ್ಲಿ ವಾಸಿಸುತ್ತಿಲ್ಲ, ಹೊರ ದೇಶದಲ್ಲಿ ಇದ್ದಾನೆ. ದೇಶದ ಯುವ ಸಮುದಾಯಕ್ಕೆ ಎಲ್ಲವು ಸತ್ಯ ತಿಳಿದಿದೆ.
ನಾಗರಿಕ ಸಹಕಾರದೊಂದಿಗೆ ಸಮಸ್ಯೆಗಳು ಪರಿಹಾರ ಸಾಧ್ಯ.
ಬೆಂಗಳೂರುನಗರ ಪಾಲಿಕೆಯಲ್ಲಿ ಕಳೆದ 6ವರ್ಷಗಳಿಂದ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಇಲ್ಲ. ಸಂಘ, ಸಂಸ್ಥೆಗಳು, ಸಾರ್ವಜನಿಕರು ಲೋಕಲ್ ಬಾಡಿ ಎಲೆಕ್ಷನ್ ಮಾಡಲು ಒತ್ತಾಯಿಸಬೇಕು.

ಟನಲ್ ರೋಡ್ ಸಾರ್ವಜನಿಕರಿಗೆ ಬೇಡವಾಗಿದೆ. ವಿಶ್ವದ ಅತ್ಯಂತ ದುಬಾರಿ ವೆಚ್ಚದ 14ಸಾವಿರ ಕೋಟಿ ವೆಚ್ಚವಾಗುತ್ತಿದೆ. ಇದರ ವಿರುದ್ದ ಸಾರ್ವಜನಿಕರು ಧ್ವನಿ ಎತ್ತಬೇಕು ಎಂದು ಹೇಳಿದರು.
ಶ್ರೀಮತಿ ವಿನುತಾ ಹರೀಶ್ ರವರು ಮಾತನಾಡಿ, ಸ್ವಾಭಿಮಾನಿ, ಸ್ವಾವಲಂಭಿ ಪ್ರೀತಿ ವಿಶ್ವಾಸಕ್ಕೆ ಮಹಿಳೆಯರು ಉದಾಹರಣೆಯಾಗಿದ್ದಾರೆ.
ಸಮಾಜದ ಬದಲಾವಣೆಗೆ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಮಹಿಳೆಯರು ಸಬಲೀಕರಣಕ್ಕಾಗಿ ಇನ್ನರ್ ವೀಲ್ ಕ್ಲಬ್ ಶ್ರಮಿಸುತ್ತಿದೆ.ಯುವತಿಯರು ದೃಹಿಕವಾಗಿ ಸದೃಢವಾಗಿ ಇರಲು ರಾಜ್ಯದ 28 ಡಿಸ್ಟೀಕ್ ಗಳಲ್ಲಿ ಇನ್ನರ್ ವೀಲ್ ಕ್ಲಬ್ ಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇನ್ನರ್ ವೀಲ್ ಕ್ಲಬ್ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು.










