ಅದ್ದೂರಿಯಾಗಿ ಜರುಗಿದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತೆ ಲಲಿತಾ ಜಿ.ಟಿ ದೇವೇಗೌಡರ ಅಭಿನಂದನಾ ಸಮಾರಂಭ
ತಾಂಡವಪುರ ಜೂನ್ 12 ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಲಿತಾ ಜಿ.ಟಿ. ದೇವೇಗೌಡ ಅವರಿಗೆ ಗೌರವಪೂರ್ವಕ ಅಭಿನಂದನೆ ಸಲ್ಲಿಸಲಾಯಿತು. ಅವರ ಕೌಟುಂಬಿಕ ಮತ್ತು ಸಾಮಾಜಿಕ ಜೀವನ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.
ಮುಕ್ತವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ನಡೆದ ಲಲಿತಾಭಿನಂದನಾ ಸಮಾರಂಭದಲ್ಲಿ ವಿವಿಧ ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಶ್ರೀಗಳ ದಿವ್ಯ ಸಾನಿದ್ಯದೊಂದಿಗೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಹಾಗೂ ಪ್ರಗತಿಪರ ಕೃಷಿಕರಾದ ಡಾ.ಕವಿತಾ ಮಿಶ್ರ ಸೇರಿದಂತೆ ಹಲವ ಉಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.ಶಾಸಕ ಜಿ.ಟಿ. ದೇವೇಗೌಡ ದಂಪತಿಯನ್ನು ಅಭಿಮಾನಪೂರ್ವಕವಾಗಿ ಸನ್ಮಾನಿಸಲಾಯಿತು.
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೆನಪಿನ ಸುರಳಿ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ಲಲಿತಕ್ಕ ಸರಳತೆ ಮತ್ತು ಎಲ್ಲರೊಂದಿಗೆ ಅನ್ಯೋನ್ಯತೆಯಿಂದ ಬೆರೆಯುವಂತ ಗುಣಗಳ ಗುಣಗಾನ ಮಾಡಿ ಜಿ.ಟಿ. ದೇವೇಗೌಡರ ರಾಜಕೀಯ ಬೆಳವಣಿಗೆಯಲ್ಲಿ ಲಲಿತಕ್ಕನ ಪ್ರೇರಣೆ ಮತ್ತು ಪ್ರೋತ್ಸಾಹ ಅಗಾಧವಾಗಿದೆ ಎಂದರು.
ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರಬೇಕೆಂದರೆ ಹೆಚ್ಚು, ಹೆಚ್ಚು ಮಾತಾಡಬೇಕು. ಮಾತಾಡದಿದ್ದರೆ ಹಿಂದೆ ತಳ್ಳಿಬಿಡಿತ್ತಾರೆ. ಸುಳ್ಳೋ ನಿಜವೋ ಮಾತಾಡುತ್ತಿರಬೇಕು. ಸಹಕಾರ ಕ್ಷೇತ್ರದಲ್ಲಿರುವ ಲಲಿತಕ್ಕ ಅವರು ಹೆಚ್ಚು ಮಾತಾಡಬೇಕು. ಆ ದಿಕ್ಕಿನಲ್ಲಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.
ಅಭಿನಂದನಾ ಭಾಷಣ ಮಾಡಿದ ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ. ಕೃಷ್ಣೇಗೌಡ, ಲಲಿತಕ್ಕನಿಗೆ ಪ್ರಶಸ್ತಿ ಬಂದ ನೆಪದಲ್ಲಿ ಅಭಿನಂದನೆ ಏರ್ಪಡಿಸಿರುವುದು ಒಂದು ನೆಪ. ಕವಿ ಕುವೆಂಪು ಹೇಳಿದಂತೆ ಮನೆ ಮನೆಯ ತಪಸ್ವಿನಿಯರಾದ ಗೃಹಣಿಯರನ್ನು ಗೌರವಿಸಲು ಈ ಸಮಾರಂಭ ಆಯೋಜಿಸಿದ್ದೇವೆ.
ಎಲ್ಲಾ ರಾಜಕಾರಣಿಗಳ ಮನೆಯಲ್ಲಿರುವಂತ ಬೇಗುದಿಯನ್ನು ಲಲಿತಕ್ಕ ಕೂಡ ಎದುರಿಸಿದ್ದಾರೆ. ತಾಳ್ಮೆಯ ಮಾತನಿಂದ ಮನೆಗೆ ಬಂದ ಎಲ್ಲರನ್ನೂ ಸೌಜನ್ಯದಿಂದ ಸಂಭಾಳಿಸುವ ಗುಣ ನನಗೆ ಇಷ್ಟ. ವಯಸ್ಸಿನಲ್ಕಿ ನನಗಿಂರ ಚಿಕ್ಕವರಾದರೂ ಅಕ್ಕ ಎನ್ನುತ್ತೇನೆ ಅಕ್ಕ ಎನ್ನುವ ಪದ ಯೋಗ್ಯತೆ ಮತ್ತು ಅರ್ಹತೆಗೆ ಪಾತ್ರವಾದದ್ದು.
ಇದೇ ವೇಳೆ ಕೃಷಿ ಸಾಧಕಿ ಡಾ.ಕವಿತಾ ಮಿಶ್ರಾ ಮಾತನಾಡಿ, ಹೆಣ್ಣು ಮಗಳು ಸಮಾಜದಲ್ಲಿ ಸಾಧಿಸಲು ಸುಲಭದಲ್ಲಿ ಬಿಡುವುದಿಲ್ಲ.ಬಹಳಷ್ಟು ನಿರೀಕ್ಷಿಸಲ್ಪಟ್ಟವರು ಹೆಣ್ಣು ಮಕ್ಕಳು.ಎಲ್ಲ ಸವಾಲುಗಳ ನಡುವೆ ಸಾಧಿಸಿದ ಲಲಿಕ್ಕನವರು ಸಹಕಾರ ಬ್ಯಾಂಕ್ ಆರಂಭಿಸಿ ಹೆಣ್ಣು ಮಕ್ಕಳಿಗೆ ದಾರಿದೀಪವಾಗಿದ್ದಾರೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಲಲಿತಾ ಜಿ.ಟಿ.ದೇವೇಗೌಡ ಅಳಿಲು ಸೇವೆ ಮಾಡಿದ ನನಗೆ ಅಪಾರವಾದ ಪ್ರೀತಿ ಗೌರವ ದೊರೆತಿದೆ. ಅದಕ್ಕೆ ಋಣಿಯಾಗಿರುತ್ತೇನೆ ಎಂದ ಅವರು ಜಿ.ಟಿ. ದೇವೇಗೌಡ ಅವರನ್ನು ವಿವಾಹದ ದಿನದಿಂದ ಇಲ್ಲಿಯವರೆಗೂ ಸಾಮಾಜಿಕ ಬದುಕಿನ ಪ್ರಮುಖ ಘಟನಾವಳಿಗಳನ್ನು ಸ್ಮರಿಸಿದರು.
ಆದಿಚುಂಚನಗಿರಿ ಮಠದ ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಮುಕ್ತಿದಾನಂದಜೀ ಮಹಾರಾಜ್, ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಮುಖಂಡ ಹರದನಳ್ಳಿ ವಿಜಯ್, ಸೌಮ್ಯ ಮುಂತಾದವರಿದ್ದರು. ಲೇಖಕ ಹಾಲತಿ ಸೋಮಶೇಖರ್ ಸ್ವಾಗತಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಚೂಡಾಮಣಿ ನಿರುಪಮಾ ರಾಜೇಂದ್ರ ಮತ್ತು ತಂಡದಿಂದ ನೃತ್ಯ ಸಂಭ್ರಮ ವೈಭವ ನೆರವೇರಿತು.
*ಗದ್ಗಿತರಾದ ಜಿ.ಟಿ.ದೇವೇಗೌಡ*
ಬಾಕ್ಸ್: ಲಲಿತಾಭಿನಂದನ ಸಮಾರಂಭದಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ಗದ್ಗಿತರಾಗಿ ಕಣ್ಣಿರಿಟ್ಟರು. ಮಾತು ಆರಂಭಿಸುವಾಗಲೇ ದುಃಖಿತರಾದ ಅವರು, ನನ್ನ ಪತ್ನಿ ಒಂದು ದಿನ ಸುಖಪಟ್ಟಿಲ್ಲ. ಸಿನಿಮಾ ನೋಡಲಿಲ್ಲ. ಹೊರಗಡೆ ಹೋಗಲಿಲ್ಲ. ಕೃಷ್ಣೇಗೌಡರ ಬರೆದದ್ದನ್ನು ಓದಿದ ಮೇಲೆ ಅವಳ ಇಷ್ಟು ಕಷ್ಟಪಡುತ್ತಿದ್ದಾಳೆ ಅನಿಸಿತು.
ತಂದೆಯವರನ್ನು ಕಳೆದುಕೊಂಡ ಬಳಿಕ ತುಂಬಾ ತೊಂದರೆ ಅನುಭವಿಸಿದೆ. ಅವತ್ತಿಂದ ಸಾಲದಲ್ಲಿಯೇ ಬದುಕಿದೆ. ಹಿಂದೆ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದವರಿಗೂ ಒಳ್ಳೆಯದು ಮಾಡಿದ್ದೇನೆ. ಯಾವತ್ತೂ ಯಾರನ್ನೂ ದ್ವೇಷ ಮಾಡಿಲ್ಲ. ಬಡವರ ಕಣ್ಣೀರು ಒರೆಸುವುದು ದೇವರ ಕೆಲಸವೆಂದು ಮಾಡುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ ಎಂದು ಹೇಳಿದರು