--Ads--

ಬ್ರಾಹ್ಮಣ ಸಂಘಟನೆ ಬಲಪಡಿಸೋಣ :ಡಿ ಟಿ ಪ್ರಕಾಶ್

On: June 12, 2026 6:16 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ಬ್ರಾಹ್ಮಣ ಸಂಘಟನೆ ಬಲಪಡಿಸೋಣ :ಡಿ ಟಿ ಪ್ರಕಾಶ್

ತಾಂಡವಪುರ ಜೂನ್ 12 ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವಿವಿಧ ಜವಾಬ್ದಾರಿಯ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಣಾ ಮಾಡಲಾಯಿತು
ನಗರದ ಸರಸ್ವತಿಪುರದಲ್ಲಿರುವ ಮೈಸೂರಿನ ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವಿವಿಧ ಜವಾಬ್ದಾರಿಯ ಪದಾಧಿಕಾರಿಗಳಿಗೆ ನೇಮಕ ಪತ್ರ ನೀಡಿ ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ರವರು ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯವನ್ನ ಸಾಮಾಜಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ನೂತನ ಸಮಿತಿಯನ್ನ ರಚಿಸಲಾಗಿದೆ,
ಶಿಕ್ಷಣ ಆರೋಗ್ಯ ಉದ್ಯೋಗ, ಧಾರ್ಮಿಕ, ಸಾಂಸ್ಕೃತಿಕ ಸಾಹಿತ್ಯ ಸಹಕಾರಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ವಿಪ್ರ ಸಮುದಾಯವರಿಗೆ ಬೆನ್ನುಲುಬಾಗಿ ನಿಂತು ವಿಪ್ರರ ಪ್ರಾತಿನಿಧ್ಯಕ್ಕೆ ಸಹಕಾರ ನೀಡಲಾಗುವುದು, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಪ್ರೋತ್ಸಾಹಿಸಲು ವಿವಿಧ ಕಾರ್ಯಕ್ರಮಗಳನ್ನ ರೂಪಿಸಲಾಗುತ್ತಿದ್ದು, ಮೈಸೂರು ಜಿಲ್ಲಾ ವ್ಯಾಪ್ತಿಯ ಬ್ರಾಹ್ಮಣ ಸಂಘ ಸಂಸ್ಥೆಗಳು ಹೆಚ್ಚಿನ ಮಾಹಿತಿಗಾಗಿ 9945266832 ಸಂಪರ್ಕಿಸಬಹುದು ಎಂದರು,
2026-27 ಸಾಲಿನ ನೂತನ ಪದಾಧಿಕಾರಿಗಳ ಪಟ್ಟಿ
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ನೂತನ ಪದಾಧಿಕಾರಿಗಳದ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ರವರು ಅಧಿಕೃತವಾಗಿ ಘೋಷಣೆ ಮಾಡಿ ನೇಮಕಾತಿ ಪತ್ರಗಳನ್ನು ಪದಾಧಿಕಾರಿಗಳಿಗೆ ವಿತರಿಸಿದರು,
ಉಪಾಧ್ಯಕ್ಷರುಗಳಾಗಿ ಗೋಪಾಲ್ ರಾವ್, ಕೆ ಆರ್ ಸತ್ಯನಾರಾಯಣ್, ಎಂ ಆರ್ ಬಾಲಕೃಷ್ಣ, ಡಾಕ್ಟರ್ ಲಕ್ಷ್ಮೀದೇವಿ, ರಾಜಗೋಪಾಲ್, ಕಡಕೋಳ ಜಗದೀಶ್, ರವಿ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ವಿ ಹರೀಶ್, ಸಂಘಟನಾ ಕಾರ್ಯದರ್ಶಿಗಳಾಗಿ ಸೌಭಾಗ್ಯ ಮೂರ್ತಿ,ಎಸ್ ರಂಗನಾಥ,ಸುರೇಶ್, ಕೆ ಎಂ ನಿಶಾಂತ್, ಅಜಯ್ ಶಾಸ್ತ್ರಿ, ಕಲ್ಕೆರೆ ನಾಗರಾಜ್, ಖಚಾಂಚಿಗಳಾಗಿ ಎಂ ಎ ಸುಮ, ಮಂಜುನಾಥ, ಜಂಟಿ ಕಾರ್ಯದರ್ಶಿ ಗಳಾಗಿ ಜ್ಯೋತಿ, ಲತಾ ಬಾಲಕೃಷ್ಣ, ಅರುಣ್ ಟಿ ಎಸ್ ಹಾಗೂ ಮಾಧ್ಯಮ ಸಂಚಾಲಕರಾದ ವಿಕ್ರಮ್ ಅಯ್ಯಂಗಾರ್ ರವರನ್ನು ಆಯ್ಕೆ ಮಾಡಿ ನೇಮಕ ಪತ್ರ ವಿತರಿಸಿದರು

WhatsApp

Join Now

Telegram

Join Now

Instagram

Join Now