--Ads--

ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ ಮತ್ತು ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡರ ಅಭಿನಂದನಾ ಸಮಾರಂಭ ಮತ್ತು ನಾಡಹಣತೆಗಳು ಕೃತಿ ಬಿಡುಗಡೆ

On: June 14, 2026 3:58 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್……
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ: ಕೇಂದ್ರ ಕನ್ನಡ ಕ್ರಿಯಾ ಸಮಿತಿ

ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ ಮತ್ತು ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡರ ಅಭಿನಂದನಾ ಸಮಾರಂಭ 

ಬೆಂಗಳೂರು, ನಯನ ಸಭಾಂಗಣ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ರಾಜ್ಯಮಟ್ಟದ ಕನ್ನಡ ಜಾಗೃತಿ ಸಮಾವೇಶ ಹಾಗೂ ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡರ ಅಭಿನಂದನಾ ಸಮಾರಂಭ ಮತ್ತು ನಾಡಹಣತೆಗಳು ಕೃತಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಹಂಪಿ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ ಹಿ.ಚಿ.ಬೋರಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಡೋಜ ಮನು ಬಳಿಗಾರ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ಕನ್ನಡ ಪರ ಹೋರಾಟಗಾರ ರಾ.ನಂ.ಚಂದ್ರಶೇಖರ್, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಸಾಹಿತಿ ಡಾ.ಪದ್ಮನಿ ನಾಗರಾಜು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗೌರವಾಧ್ಯಕ್ಷ ವ.ಚ.ಚನ್ನೇಗೌಡರು, ರಾಜ್ಯಾಧ್ಯಕ್ಷ ಕೆ.ಎಸ್.ಪ್ರಭುಸ್ವಾಮಿ,ರಾಜ್ಯ ಕಾರ್ಯಾಧ್ಯಕ್ಷ ಕೆ.ಎಸ್.ಎ.ಹುಸೇನ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ನಾಡೋಜ ಮನು ಬಳಿಗಾರ್ ರವರು ಮಾತನಾಡಿ ಎಲ್ಲರು ಸೇರಿ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಶುದ್ದ ಕನ್ನಡದ ಹೃದಯ ವೈಶಾಲ್ಯವಿರುವ ವ್ಯಕ್ತಿ ವ.ಚ.ಚನ್ನೇಗೌಡರು.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಸ್ಥಾನದಲ್ಲಿ ವ.ಚ.ಚನ್ನೇಗೌಡರು ಒಂದು ರೂಪಾಯಿ ಗೌರವಧನ ಸ್ವೀಕರಿಸದೇ ಪರಿಷತ್ ನ ಸೇವೆ ಸಲ್ಲಿಸಿದರು. ಗಟ್ಟಿತನ ಪ್ರಾಮಾಣಿಕತೆ, ಕ್ರಿಯಾಶೀಲತೆವುಳ್ಳ ವ್ಯಕ್ತಿ ವ.ಚ.ಚನ್ನೇಗೌಡರು.
ಎಲ್ಲ ಕನ್ನಡ ಪರ ಹೋರಾಟಗಳಲ್ಲಿ ವ.ಚ.ಚನ್ನೇಗೌಡರು ಪ್ರಮುಖ ಪಾತ್ರವಹಿಸಿದರು.
ಹಿ.ಚಿ.ಬೋರಲಿಂಗಯ್ಯ ರವರು ಮಾತನಾಡಿ ವ.ಚ.ಚನ್ನೇಗೌಡರು ರಾಜ್ಯ ಸಾರಿಗೆ ಸಂಸ್ಥೆಯಲ್ಲಿ 39ವರ್ಷ ವೃತ್ತಿ ಸೇವೆ ಜೊತೆಯಲ್ಲಿ ಕನ್ನಡ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಅತ್ಯಂತ ಸರಳತೆ, ಘನತೆ ಇರುವ ಸಜ್ಜನಿಕೆ ಮೂಲಕ ಕನ್ನಡ ಚಳುವಳಿಯನ್ನು ಕಟ್ಟಿದವರು ವ.ಚ.ಚನ್ನೇಗೌಡರು.
ತಮಿಳಿಗರ ಸಂಗಮ ಸಾಹಿತ್ಯವನ್ನು ಆರಾಧಿಸುತ್ತಾರೆ , ಸಂಗಮ ಸಾಹಿತ್ಯದಲ್ಲಿ ಮೈಸೂರು ಮತ್ತು ಮೈಸೂರಿನ ಇತಿಹಾಸ ತಿಳಿಸುತ್ತದೆ. ಯಾವ ಸರ್ಕಾರಗಳು ನನ್ನ ತಾಯಿ ನುಡಿ ಎಂದು ಕನ್ನಡ ಭಾಷೆಯನ್ನು ರಕ್ಷಣೆ ಮಾಡಲ್ಲಿಲ, ಶಿಕ್ಷಣವನ್ನು ಉದ್ಯೋಗ ಮಾಡಿಕೊಂಡು ಕನ್ನಡವನ್ನು ಬಡವರಾಗಿ ಮಾಡುತ್ತಿದ್ದಾರೆ.
ರಾಜ್ಯ ಮತ್ತು ಕನ್ನಡ ಭಾಷೆ ಉಳಿಸಲು ಕನ್ನಡ ಪರ ಹೋರಾಟಗಾರರ ಅವಶ್ಯಕತೆ ತುಂಬ ಇದೆ. 1ನೇ ತರಗತಿಯಿಂದ 7 ನೇ ತರಗತಿವರಗೆ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕು. ಅಂಗ್ಲ ಒಂದು ಪಠ್ಯವಾಗಿ ಇದ್ದರೆ ಸಾಕು ಎಂದು ಹೇಳಿದರು.

ವೂಡೇ ಪಿ.ಕೃಷ್ಣರವರು ಮಾತನಾಡಿ ಕನ್ನಡ ಪರ ಹೋರಾಟಗಾರ ವ.ಚ.ಚನ್ನೇಗೌಡರು ಅಪ್ಪಟ ಗ್ರಾಮೀಣ ಪ್ರತಿಭೆ. ಚಿಕ್ಕ ವಯಸ್ಸಿನಿಂದಲೇ ಕನ್ನಡ ಭಾಷೆ ಕುರಿತು ಅಭಿಮಾನ, ವೃತ್ತಿ ಜೊತೆಯಲ್ಲಿ ನಾಡು, ನುಡಿಗೆ ಸದಾ ಶ್ರಮಿಸುತ್ತಿರುವ ವ.ಚ.ಚನ್ನೇಗೌಡರು ಕನ್ನಡಕ್ಕಾಗಿ ಇಡೀ ಬದುಕು ಸಾಗಿಸಿದರು.
ಕನ್ನಡವನ್ನು ಯಾರು ಪ್ರೀತಿಸುತ್ತಾರೆ ಅವರೆಲ್ಲರು ವ.ಚ.ಚನ್ನೇಗೌಡರ ಸ್ನೇಹಿತರು. ಕುವೆಂಪು ರವರು ಹೇಳಿದಂತೆ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಗಾದೆ ಮಾತಿನಂತೆ ವ.ಚ.ಚನ್ನೇಗೌಡರು ಕಲ್ಪವೃಕ್ಷದಂತೆ ಎಂದು ಹೇಳಿದರು.
ವ.ಚ.ಚನ್ನೇಗೌಡರು ಮಾತನಾಡಿ ಕನ್ನಡಕ್ಕಾಗಿ ನನ್ನ ಸಲ್ಲಿಸಿದ್ದು ಅಲ್ಪಸೇವೆ, ಅದರೆ ನನಗೆ ಸಿಕ್ಕಿದ್ದು ಕನ್ನಡಿಗರ ದೊಡ್ಡ ಪ್ರೀತಿ, ಅವರು ಋಣ ತೀರಿಸಲು ಸಾಧ್ಯವಿಲ್ಲ. ಕನ್ನಡ ಪರ ಹೋರಾಟ, ಸಂಘಟನೆಯಲ್ಲಿ ಜರಗನಹಳ್ಳಿ ಶಿವಶಂಕರ್ ರಾ.ನಂ.ಚಂದ್ರಶೇಖರ್ ರವರ ಸಹಕಾರ ನೀಡಿದ್ದಾರೆ.
ಶಿಫಾರಸ್ಸು ಮತ್ತು ಓಲೈಕೆ ಮಾಡುವವರಿಗೆ ರಾಜ್ಯ ಸರ್ಕಾರಗಳು ಪ್ರಶಸ್ತಿ ಕೊಡುತ್ತದೆ. ಕನ್ನಡ ಪರ ಹೋರಾಟಗಾರರನ್ನ ಗುರುತಿಸುವ ಕಾರ್ಯವಾಗಬೇಕು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಸಾರಿಗೆ ಸಂಸ್ಥೆಯ ನೌಕರರ ಸಮಸ್ಯೆಗಳಿಗೆ ಕೊಡಲೇ ಸ್ಪಂದಿಸಬೇಕು.
ನಮ್ಮ ಭೂಮಿಯನ್ನು ಪಡೆದ ಖಾಸಗಿ ಕಂಪನಿಗಳು ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ, ಉತ್ತರ ಭಾರತದವರಿಗೆ ಅವಕಾಶ ನೀಡುತ್ತಿದ್ದಾರೆ. ಸರೋಜಿನಿ ಮಹಿಷಿ ವರದಿ ಯಥವತ್ತ ಜಾರಿಗೆ ತನ್ನಿ ಎಂಬುದು ನಮ್ಮ ಒತ್ತಾಯ.
ಕೇಂದ್ರ ಸಚಿವ ಕುಮಾರಸ್ವಾಮಿರವರು 4ಸಾವಿರ ಎಲೆಕ್ಟ್ರಿಕಲ್ ಬಸ್ ಗಳನ್ನು ಖಾಸಗಿರವರಿಗೆ ಕೊಡಬೇಡಿ, ಸಾರಿಗೆ ಸಂಸ್ಥೆಯವರಿಗೆ ಕೊಡಿ ಎಂಬ ಮನವಿ.
ಯುವಕರಲ್ಲಿ ಶಕ್ತಿ ಇರುತ್ತದೆ , ಕನ್ನಡ ಉಳಿಸಿ, ಬೆಳಸಲು ಕನ್ನಡದ ತೇರು ಏಳೆಯುವ ಕೆಲಸ ಮಾಡಬೇಕು. ನಾಡಹಣತೆಗಳು ಪುಸ್ತಕ ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ ಮಹನೀಯರುಗಳ ಮಾಹಿತಿ ಇದೆ. ಕನ್ನಡ ತಾಯಿಯ ಸೇವೆ ಮಾಡಿದವರಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಪದಾಧಿಕಾರಿಗಳಾದ ಹೆಚ್.ಕೆ. ಸುರೇಶ್, ಶಿವಕುಮಾರ್ ಆರ್, ಎಸ್.ಜೆ.ಮೇಟಿ, ರಮೇಶ್, ಮಂಜುನಾಥ್, ರೇಖಾ ಮಾದರ ಮತ್ತು ಕನ್ನಡ ಪರ ಹೋರಾಟಗಾರರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now