--Ads--

ಆರ್.ಎಸ್.ಎಸ್ ನವರು ಹಿಂದೂಗಳಲ್ಲ, ಹಿಂದುತ್ವ ವಾದಿಗಳು: ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ

On: June 16, 2026 5:48 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಆರ್.ಎಸ್.ಎಸ್ ನವರು ಹಿಂದೂಗಳಲ್ಲ, ಹಿಂದುತ್ವ ವಾದಿಗಳು: ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ

ತಾಂಡವಪುರ ಜೂನ್ 16 ಆರ್.ಎಸ್.ಎಸ್ ನವರು ಹಿಂದೂಗಳಲ್ಲ, ಹಿಂದುತ್ವ ವಾದಿಗಳು, ಧರ್ಮದ ಹೆಸರಿನಲ್ಲಿ ಏನು ಬೇಕಾದರು ಮಾಡಬಹುದಾ? ಗೃಹ ಸಚಿವ ಪ್ರಿಯಾಂಕ ಖರ್ಗೆ ಆರ್.ಎಸ್.ಎಸ್ ನೋಂದಣಿ ಮಾಡಿಸಬೇಕೆಂದಿರುವುದು ಕಾನೂನು ಪ್ರಕಾರ ಸರಿಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದರು.

ಅವರು ಮಂಗಳವಾರ ಸಚಿವರಾದ ನಂತರ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಮಾಧ್ಯಮದವರೊಂದಿಗೆ ಸಚಿವರು ಮಾತನಾಡುತ್ತಾ ಆರ್.ಎಸ್.ಎಸ್ ಯಾಕೆ ನೋಂದಣಿ ಮಾಡಿಸಬಾರದು? ದೇಶದಲ್ಲಿ ಎಲ್ಲರಿಗೂ ಒಂದೇ ಕಾನೂನು. ಆರ್.ಎಸ್.ಎಸ್ ಗೆ ಬೇರೆ ಕಾನೂನು ಇಲ್ಲ, ಆರ್.ಎಸ್.ಎಸ್ ಸಾಂಸ್ಕೃತಿಕ ಸಂಘಟನೆ ಎಂದು ಹೇಳಿಕೊಂಡರು ವಾಸ್ತವವಾಗಿ ರಾಜಕೀಯ ಸಂಘಟನೆ. ಬಿಜೆಪಿಯ ಪರವಾಗಿ ಕೆಲಸ ಮಾಡುವ ಸಂಸ್ಥೆ, ಹಾಗಾಗಿ ಆರ್.ಎಸ್.ಎಸ್ ದೇಶದ ಕಾನೂನುಗಳನ್ನು ಪಾಲಿಸಬೇಕು ಮತ್ತು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಆರ್.ಎಸ್.ಎಸ್ ದೇಶದ ಎಲ್ಲಾ ಕಡೆ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಬೆಲೆ ಬಾಳುವ ಕಟ್ಟಡಗಳನ್ನು ಹೊಂದಿದೆ. ಇದೆಲ್ಲವೂ ಎಲ್ಲಿಂದ ಬಂತು ಎಂಬು ಗೊತ್ತಾಗಬೇಕಿದೆ. ಹಾಗಾಗಿ ಆರ್.ಎಸ್.ಎಸ್ ಸಂಘ ನೋಂದಣಿ ಮಾಡಿಸಲಿ ಎಂದು ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ .ಅದರಲ್ಲಿ ತಪ್ಪೇನಿದೆ.?
ಧರ್ಮದ ಹೆಸರಿನಲ್ಲಿ ಏನು ಬೇಕಾದ್ರೂ ಮಾಡಬಹುದಾ?
ಒಂದು ಸಂಸ್ಥೆ ದೇಶ ಎರಡು ಒಂದೇ ಅಲ್ಲ.ಒಂದು ಸಂಸ್ಥೆಯ ವ್ಯವಹಾರದ ಬಗ್ಗೆ ತಿಳಿಯಬೇಕಾದರೆ ನೋಂದಣಿ ಮಾಡಿಸಬೇಕು. ದೇಶದ ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾಕ್ಟರ್ ಬಿ ಜೆ ವಿಜಯ್ ಕುಮಾರ್ ನಗರಸಭೆ ಸದಸ್ಯ g ಗೋಪಿ ಮುಖಂಡರದ ಶಿವಣ್ಣ ಮೋಡ ಮಾಜಿ ಅಧ್ಯಕ್ಷ ರಾಜೀವ್ ಸೇರದಂತೆ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now