--Ads--

ಸುಗಟೂರಿನಲ್ಲಿ ಶ್ರೀಚೌಡೇಶ್ವರಿ ದೇವಸ್ಥಾನದ ಮಹಾಕುಂಭಾಭಿಷೇಕ ಯಶಸ್ವಿ ಸುಸಂಪನ್ನ

On: June 25, 2026 6:22 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಸುಗಟೂರಿನಲ್ಲಿ ಶ್ರೀಚೌಡೇಶ್ವರಿ ದೇವಸ್ಥಾನದ ಮಹಾಕುಂಭಾಭಿಷೇಕ ಯಶಸ್ವಿ ಸುಸಂಪನ್ನ 

ಶಿಡ್ಲಘಟ್ಟ :ದೇಶದ ಭವ್ಯತೆಯು ಸಾಕಾರಗೊಳ್ಳ ಬೇಕಾದರೆ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಆಧುನಿಕತೆಯ ಈ ದಿನಗಳಲ್ಲಿ ಯುವ ಪೀಳಿಗೆಗೆ ನಮ್ಮ ಸಂಸ್ಕಾರ,ಸಂಸ್ಕೃತಿಯನ್ನು ಪರಿಚಯಿಸುವುದು ಅತ್ಯಗತ್ಯವಾಗಿದೆ ಎಂದು ತೊಗಟವೀರ  ಕ್ಷತ್ರಿಯ ಶ್ರ ಪುಷ್ಪಾಂಡಜ ಮಹರ್ಷಿ ಆಶ್ರಮದ ಶ್ರೀದಿವ್ಯಜ್ಞಾನಾನಂದಗಿರಿ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ನಡೆದ ಶ್ರೀಚೌಡೇಶ್ವರಿ ದೇವಸ್ಥಾನದ ಪ್ರತಿಷ್ಟಾಪನೆ, ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಅವರ ಮಾತನಾಡಿದರು.
ಸುಗಟೂರಿನ ಇಕೋ ಕ್ಲಬ್ ಶಾಲಾ ಮಕ್ಕಳು ದೇವಸ್ಥಾನದಆಹ್ವಾನ ಪತ್ರಿಕೆಯೊಂದಿಗೆ ಶ್ರೀಗಂಧದ ಸಸಿಗಳನ್ನು ಹಂಚಿ ಪರಿಸರ ಮತ್ತು ಧರ್ಮ ಎರಡನ್ನೂ ಆರಾಧಿಸಿರುವುದು  ಇಡೀ  ಸಮಾಜಕ್ಕೆ ಮಾದರಿಯಾಗಿದೆ ಎಂದು
ಪ್ರಶಂಸೆ ಮಾಡಿದರು.
ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ,
ಗ್ರಾಮೀಣ ಭಾಗಗಳಲ್ಲಿ ಇಂತಹ ಧಾರ್ಮಿಕ ಆಚರಣೆಗಳುಕೇವಲ ಪೂಜೆಗೆ ಸೀಮಿತವಾಗದೆ, ಸಮಾಜದಲ್ಲಿ ಒಗ್ಗಟ್ಟುಮತ್ತು ಸಾಮರಸ್ಯವನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ ಎಂದು ನುಡಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ಭಾರತ ದೇಶವು ಧರ್ಮ ಮತ್ತು ಸಂಸ್ಕೃತಿಯ ಭದ್ರ ಬುನಾದಿಯ ಮೇಲೆ ನಿಂತಿದೆ ಎಂದರು.
ದೇವಾಲಯದ ದಾನಿ  ಎಸ್‌ಎಲ್‌ಎನ್‌ ಟ್ರಸ್ಟ್‌ನ ಅಧ್ಯಕ್ಷ ದೇವನಹಳ್ಳಿಯ ಸಿ.ಅಶ್ವತ್ಥನಾರಾಯಣ್‌ ಮಾತನಾಡಿ, ದೇವಾಲಯಗಳನ್ನು ಸಂಸ್ಕೃತಿಯನ್ನು ಪೋಷಿಸುವ ಶಕ್ತಿ ಕೇಂದ್ರಗಳಾಗಿ ಬೆಳೆಸಬೇಕು, ಕೇವಲ ಇಟ್ಟಿಗೆ-ಕಲ್ಲುಗಳ ಕಟ್ಟಡವಾಗಿ ನೋಡದೆ ಭಕ್ತಿಬಾವ ಬಿಂಬಿಸುವ ಆಲಯಗಳಂತೆ ಬಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸುಗಟೂರು ಗ್ರಾಮಸ್ಥರು ಹಾಗು ಶ್ರೀಚೌಡೇಶ್ವರಿ
ತೊಗಟವೀರ ಕ್ಷತ್ರಿಯ ಟ್ರಸ್ಟ್ ಪದಾಧಿಕಾರಿಗಳು ಸಂಘಟಿತರಾಗಿ ದೇವಾಲಯ ಪ್ರತಿಷ್ಟಾಪನೆ, ಕುಂಭಾಬಿಷೇಕ ಕಾರ‍್ಯಕ್ರಮವು ಯಶಸ್ವಿಯಾಗಲು ಸಹಕರಿಸಿದಕ್ಕಾಗಿ ಪ್ರಶಂಸಿದರು.
ಕಾಂಗ್ರೆಸ್‌ ಮುಖಂಡ ಆಂಜಿನಪ್ಪ (ಪುಟ್ಟು) ಮಾತನಾಡಿ, ದೇವಸ್ಥಾನದ ನೆನಪಿನಲ್ಲಿ ಶಾಲಾ  ಮಕ್ಕಳು ಮನೆಮನೆಗೆ ಶ್ರೀಗಂಧದ ಸಸಿಗಳನ್ನು ನೀಡಿರುವುದು ನಮ್ಮ ಸಂಸ್ಕೃತಿಯಲ್ಲಿ ಪ್ರಕೃತಿ ಆರಾಧನೆಗೆ ಇರುವ ಉನ್ನತ ಸ್ಥಾನವನ್ನು
ನೆನಪಿಸುತ್ತದೆ,ಭೌತಿಕ ಪ್ರಗತಿಯ ಜೊತೆಗೆ ಮಾನಸಿಕ ನೆಮ್ಮದಿ ಹಾಗೂ ಸತ್ಚಿಂತನೆಗಳು ಮೂಡಲು ಧಾರ್ಮಿಕ ಕೇಂದ್ರಗಳ ಅವಶ್ಯಕತೆ ಇದೆ ಎಂದರು.
ಇದೇ ವೇಳೆಸರ್ವಶಕ್ತಿ ಶ್ರೀ ಚೌಡೇಶ್ವರಿ ದೇವಿಯ ನೂತನಶಿಲಾಬಿಂಬ ಪ್ರತಿಷ್ಠಾಪನೆ, ವಿಮಾನ ಗೋಪುರ ಹಾಗೂ  ನವಗ್ರಹ ದೇವಸ್ಥಾನದ ಮಹಾಕುಂಭಾಭಿಷೇಕ ಮಹೋತ್ಸವವು  ಭಕ್ತಿ, ಸಡಗರ ಹಾಗೂ ಪರಿಸರ ಕಾರ್ಯಕ್ರಮಗಳು ನಡೆದವು.
ವಿಮಾನ ಗೋಪುರಕ್ಕೆ ಭವ್ಯ ಮಹಾ ಕುಂಭಾಭಿಷೇಕ, ಅನ್ನಸಂತರ್ಪಣೆ ನಡೆಯಿತು, ಮೂರು ದಿನಗಳ ಕಾಲ ಯಾಗಶಾಲೆಯಲ್ಲಿ ಶೈವಾಗಮದಂತೆ ಸಾಂಗವಾಗಿ ಧಾರ್ಮಿಕ  ವಿಧಿಗಳು ನಡೆದವು.
ಗಂಗಾಪೂಜೆ, ವಾಸ್ತು ಶಾಂತಿ ಹಾಗೂ ಅಂಕುರಾರ್ಪಣೆ, ದೇವಿಯ ನೂತನ ಶಿಲಾಬಿಂಬಕ್ಕೆ ಜಲಾಧಿವಾಸ ಹಾಗೂ ಕ್ಷೀರಾಧಿವಾಸ ನೆರವೇರಿಸಲಾಯಿತು,
ವಿಗ್ರಹಕ್ಕೆ ಜೀವನ್ಯಾಸ ಮೂಡಿಸಿ,ಕಲಾಹೋಮ ಹಾಗೂ ಪೂರ್ಣಾಹುತಿಯ ನಂತರ, ಮೂಲದೇವತೆ ಮತ್ತು ವಿಮಾನ ಗೋಪುರಕ್ಕೆ  ಮಹಾಕುಂಭಾಭಿಷೇಕ ಕಾರ್ಯಕ್ರಮಗಳು ಜರುಗಿದವು.
ಸ್ವಾಮೀಜಿ ಮತ್ತುಗಣ್ಯರನ್ನು ೧೦೮ ಪೂರ್ಣ ಕಳಸ,ಕುಂಭ ಹೊತ್ತ ಸುಮಂಗಲಿಯರು, ಮಂಗಳವಾದ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ  ಗ್ರಾಮದ ರಾಜ ಬೀದಿಗಳಲ್ಲಿ ಮೆರವಣಿಗೆಯ ಮೂಲಕ
ಬರಮಾಡಿಕೊಳ್ಳಲಾಯಿತು.
ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ತೊಗಟವೀರ ಕ್ಷತ್ರಿಯ ಟ್ರಸ್ಟ್‌ನ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್,  ಉಪಾಧ್ಯಕ್ಷ ಎನ್.ಪರಮೇಶ್, ಕಾರ್ಯದರ್ಶಿ ಎಸ್.ಎನ್.ಪುರುಷೋತ್ತಮ್, ಖಜಾಂಚಿ  ಕೆ.ಪಿ.ರಾಮಸ್ವಾಮಿ, ನಿರ್ದೇಶಕ ಎಸ್.ಜಯರಾಮಯ್ಯ,ಎನ್.ನಾರಾಯಣಸ್ವಾಮಿ,ಗೋವಿಂದರಾಜು, ಸುಬ್ರಮಣಪ್ಪ, ಶಿಕ್ಷಕ  ಎಚ್‌.ಎಸ್‌.ರುದ್ರೇಶಮೂರ್ತಿ,ದೇವರಾಜು, ದಿನೇಶ್‌, ಅಶೋಕ್‌ಕುಮಾರ್‌, ನಾಗೇಶ್‌ ಹಾಗು ಸರ್ವಶಕ್ತಿ ಶ್ರೀಚೌಡೇಶ್ವರಿ ತೊಗಟವೀರ ಕ್ಷತ್ರಿಯ ಮಹಿಳಾ ಸಂಘ ಹಾಗು ಯುವಕ ಸಂಘದ
ಪದಾಧಿಕಾರಿಗಳು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now