ವಿಜಯ ದರ್ಪಣ ನ್ಯೂಸ್….
ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ ಮೊದಲ ಸ್ಥಾನಕ್ಕೇರಿಸುವ ಗುರಿಯನ್ನು ಶಿಕ್ಷಕರು ಸಾಕಾರಗೊಳಿಸಿ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಶಿಡ್ಲಘಟ್ಟ ತಾಲ್ಲೂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಅಮೂಲ್ಯವಾಗಿದೆ ಎಂದು ಶಾಸಕ ಬಿ.ಎನ್. ರವಿಕುಮಾರ್ ತಿಳಿಸಿದರು.
ಮೇಲೂರಿನ ತಮ್ಮ ಗೃಹ ಕಚೇರಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಶೈಕ್ಷಣಿಕವಾಗಿ
ಮೊದಲ ಸ್ಥಾನಕ್ಕೇರಿಸುವ ಗುರಿಯನ್ನು ಸಾಕಾರಗೊಳಿಸಿ
ಲು ಸರ್ಕಾರಿ ಶಾಲಾ ಶಿಕ್ಷಕರು ಪ್ರಾಮಾಣಿಕವಾಗಿ ಸಹಕರಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರಲ್ಲಿ ಜ್ಞಾನ, ಮೌಲ್ಯಗಳು ಹಾಗೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಶಿಕ್ಷಕರಲ್ಲಿ ಗುಂಪುಗಾರಿಕೆಗೆ ಅವಕಾಶ ಇರಬಾರದು ಪರಸ್ಪರ ಸಹಕಾರ, ಸಮನ್ವಯ ಹಾಗೂ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಈ ವೇಳೆ ಸರ್ಕಾರಿ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಶಾಸಕ ರವಿಕುಮಾರ್ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ,ತಾಲ್ಲೂಕು ಕಾರ್ಯದರ್ಶಿ ಕೆಂಪೇಗೌಡ, ಗೌರವಾಧ್ಯಕ್ಷ ಅಕ್ಕಲರೆಡ್ಡಿ, ಉಪಾಧ್ಯಕ್ಷರಾದ ಎಂ.ಮಂಜುನಾಥ್, ನರಸಿಂಹ ರೆಡ್ಡಿ, ನಿಕಟ ಪೂರ್ವ ಅಧ್ಯಕ್ಷರಾದ ಸಿ.ಎಂ.ಮುನಿರಾಜು,ಬಿ. ಆರ್.ನಾರಾಯಣಸ್ವಾಮಿ, ಸರಸ್ವತಮ್ಮ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಂದರ ಚಾರಿ, ಕಾರ್ಯದರ್ಶಿ ನಾಗರಾಜ್, ಖಜಾಂಚಿ ಬಾಲಚಂದ್ರ, ಉಪಾಧ್ಯಕ್ಷ ಸುದರ್ಶನ್, ಲಕ್ಷ್ಮಿಕಾಂತಮ್ಮ, ಸಹ ಕಾರ್ಯದರ್ಶಿ ಪದ್ಮಾವತಮ್ಮ, ಸದಸ್ಯರಾದ ಸುರೇಶ್, ಪಿಳ್ಳಣ್ಣ, ಸುಮಾ, ಶಿಕ್ಷಕರಾದ ಅಹಲ್ಯಾ, ತಿರುಮಲೇಶ್, ವೇಣುಗೋಪಾಲ್, ಅನ್ಸರ್ ಪಾಷಾ, ಸಿ.ಆರ್.ಪಿ ಮಂಜುನಾಥ್, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಗಜೇಂದ್ರ, ಕಾರ್ಯದರ್ಶಿ ನರಸಿಂಹರಾಜು ಮುಂತಾದವರು ಹಾಜರಿದ್ದರು.










