--Ads--

ಒಬ್ಬ ಸಾಮಾನ್ಯ ಮನುಷ್ಯನ ಆತ್ಮಸಾಕ್ಷಿಯ ನುಡಿಗಳು

On: September 1, 2026 5:25 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಒಬ್ಬ ಸಾಮಾನ್ಯ ಮನುಷ್ಯನ ಆತ್ಮಸಾಕ್ಷಿಯ ನುಡಿಗಳು

ಇಂದು ನಾನು ಕಟ್ಟಿದ ಮನೆಯ ಮುಂಭಾಗದಲ್ಲಿ ನಿಂತಾಗ
ಜನರಿಗೆ ಕಾಣುವುದು ನನ್ನ ಐಶ್ವರ್ಯ
ನನಗೆ ಕಾಣುವುದು
ಮಣ್ಣಿನ ನೆಲದ ಮೇಲೆ ಹಾಸಿದ ಹಳೆಯ ಚಾಪೆ
ಮಳೆಯ ರಾತ್ರಿ ಸೋರುತ್ತಿದ್ದ ಛಾವಣಿ
ಅಮ್ಮ ಕೈಯಲ್ಲಿ ಹಿಡಿದಿದ್ದ ಸೀಮೆ ಎಣ್ಣೆಯ ದೀಪ
ಹಸಿವಿನಿಂದ ಮಲಗಿದ್ದ ನನ್ನ ಬಾಲ್ಯ
ಇಂದು ಜನರು ನನ್ನನ್ನು ನೋಡಿ
ಎಷ್ಟು ಬೆಳೆದಿದ್ದೀಯಾ ಎನ್ನುತ್ತಾರೆ
ನಾನು ಮೌನವಾಗಿ ನಗುತ್ತೇನೆ
ನಾನು ಬೆಳೆದಿಲ್ಲ
ನನ್ನ ಕಷ್ಟಗಳು ಫಲ ಕೊಟ್ಟಿವೆ
ಒಮ್ಮೆ ನನ್ನ ಕಾಲಿಗೆ ಚಪ್ಪಲಿ ಇರಲಿಲ್ಲ
ಇಂದು ನನ್ನ ಬಾಗಿಲಿಗೆ ಕಾರುಗಳು ಬರುತ್ತಿವೆ
ಒಮ್ಮೆ ಹೊಟ್ಟೆ ತುಂಬ ಅನ್ನ ಸಿಗುತ್ತಿರಲಿಲ್ಲ
ಇಂದು ಊಟದ ಮೇಜಿನ ಮೇಲೆ ತಟ್ಟೆಗಳು ತುಂಬಿವೆ
ಅಂದು ಹಸಿವಿನಿಂದ ಅತ್ತ ನನ್ನ ಹೊಟ್ಟೆ
ಇಂದು ತುಂಬಿದ ಹೊಟ್ಟೆಗಿಂತ
ಹೆಚ್ಚು ಸತ್ಯವನ್ನು ಕಲಿಸಿತ್ತ
ಅಂದು ಹರಿದ ಅಂಗಿ ಧರಿಸಿದ ನನ್ನ ತಂದೆ
ಇಂದು ದುಬಾರಿ ಬಟ್ಟೆ ತೊಟ್ಟ ಹಲವರಿಗಿಂತ
ಹೆಚ್ಚು ಶ್ರೀಮಂತನಾಗಿದ್ದ
ಅವರ ಜೇಬಿನಲ್ಲಿ ಹಣ ಇರಲಿಲ್ಲ
ಆದರೆ ಅವರ ಮಾತಿನಲ್ಲಿ ಮಾನವಿತ್ತು
ಅವರ ಕೈಯಲ್ಲಿ ಆಸ್ತಿ ಇರಲಿಲ್ಲ
ಅವರ ನೆತ್ತಿಯಲ್ಲಿ ಪ್ರಾಮಾಣಿಕತೆಯ ಬೆಳಕು ಇತ್ತು
ತಾಯಿ
ಅವಳು ದೇವಾಲಯಕ್ಕೆ ಹೋಗಿ
ಚಿನ್ನದ ಕಿರೀಟ ಅರ್ಪಿಸಲಿಲ್ಲ
ತನ್ನ ಹಸಿವನ್ನು ಮರೆತು
ಮಕ್ಕಳ ಹೊಟ್ಟೆ ತುಂಬಿಸಿದಳು
ಅವಳ ಕಣ್ಣೀರೇ ನನ್ನ ಮೊದಲ ಗಂಗಾಜಲ
ಅವಳ ಆಶೀರ್ವಾದವೇ ನನ್ನ ಮೊದಲ ಸಂಪತ್ತು
ಇಂದು ನಾನು ಎಷ್ಟು ಎತ್ತರಕ್ಕೆ ಬೆಳೆದರೂ
ನನ್ನ ತಲೆ ಬಾಗಲೇಬೇಕು
ಫಲಭರಿತ ಮರ ಬಾಗುತ್ತದೆ
ಬರಿದ ಮರ ಮಾತ್ರ ಎದೆಯೆತ್ತಿ ನಿಂತಿರುತ್ತದೆ ಜೀವನ ನನಗೆ ಒಂದು ದೊಡ್ಡ ಪಾಠ ಕಲಿಸಿತು
ಬಡತನ ಶಾಪವಲ್ಲ
ಬಡತನವನ್ನು ಮರೆತುಬಿಡುವುದೇ ಶಾಪ
ಹಸಿವು ನೋವಲ್ಲ
ಹಸಿವಿನ ದಿನಗಳನ್ನು ಮರೆತುಬಿಡುವುದೇ ನೋವು
ಸಂಪತ್ತು ತಪ್ಪಲ್ಲ
ಸಂಪತ್ತು ಬಂದ ಮೇಲೆ ಮನುಷ್ಯರನ್ನು ಮರೆತುಬಿಡುವುದೇ ತಪ್ಪು
ನಾನು ನನ್ನ ಊರನ್ನು ಮರೆಯುವುದಿಲ್ಲ
ನನ್ನನ್ನು ಪ್ರೀತಿಸಿದವರನ್ನು ಮರೆಯುವುದಿಲ್ಲ
ನನ್ನನ್ನು ತಿರಸ್ಕರಿಸಿದವರನ್ನೂ ಮರೆಯುವುದಿಲ್ಲ
ಅವರು ನನ್ನ ಮನಸ್ಸನ್ನು ಗಟ್ಟಿಗೊಳಿಸಿದರು
ಅವರು ನನ್ನ ಹೆಜ್ಜೆಗೆ ದಿಕ್ಕು ತೋರಿಸಿದರು
ಅವರು ನನ್ನ ಬದುಕಿಗೆ ಅರ್ಥ ಕಲಿಸಿದರು
ಇಂದು ಯಾರಾದರೂ ಅಹಂಕಾರದಿಂದ ನಡೆಯುವುದನ್ನು ನೋಡಿದಾಗ
ನನಗೆ ಮಹಾಭಾರತ ನೆನಪಾಗುತ್ತದೆ
ದುರ್ಯೋಧನನನ್ನು ಸೋಲಿಸಿದ್ದು ಭೀಮನ ಗದೆ ಅಲ್ಲ
ಅವನ ಅಹಂಕಾರ
ರಾವಣನನ್ನು ನಾಶಗೊಳಿಸಿದ್ದು ರಾಮನ ಬಾಣವಲ್ಲ
ಅವನ ದುರಭಿಮಾನ
ಮನುಷ್ಯನನ್ನು ಕೆಡಿಸುವ ಶತ್ರು ಹೊರಗಿಲ್ಲ
ಅವನೊಳಗೇ ಕುಳಿತಿರುವ ಅಹಂಕಾರ
ಎಷ್ಟೇ ದೊಡ್ಡ ಮನೆ ಕಟ್ಟಿದರೂ
ಕೊನೆಯ ನೆಲೆ ನಾಲ್ಕು ಅಡಿ ಮಣ್ಣು
ಎಷ್ಟೇ ಹಣ ಕೂಡಿಟ್ಟರೂ
ಹೊರಡುವಾಗ ಕೈ ಖಾಲಿಯೇ
ಎಷ್ಟೇ ಹೆಸರು ಮಾಡಿದರೂ
ಉಳಿಯುವುದು ಒಳ್ಳೆಯತನ ಮಾತ್ರ
ನಾನು ದೇವರಲ್ಲಿ ಬೇಡುವುದು ಧನವಲ್ಲ
ನನ್ನ ಹಳೆಯ ದಿನಗಳ ನೆನಪು
ಅಧಿಕಾರವಲ್ಲ
ನನ್ನ ತಾಯಿಯ ಕಣ್ಣೀರಿನ ಮೌಲ್ಯ
ಖ್ಯಾತಿಯಲ್ಲ
ನನ್ನ ತಂದೆಯ ಬೆವರಿನ ಗೌರವ
ನನ್ನ ಬಾಲ್ಯ ನನ್ನ ದೌರ್ಬಲ್ಯವಲ್ಲ
ಅದು ನನ್ನ ಬೇರು
ನನ್ನ ಕಷ್ಟ ನನ್ನ ಗಾಯವಲ್ಲ
ಅದು ನನ್ನ ಗುರು
ನನ್ನ ಬಡತನ ನನ್ನ ಅವಮಾನವಲ್ಲ
*ಳಅದು ನನ್ನ ಬದುಕಿನ ಮಹಾಗ್ರಂಥ
*ಳನಾಳೆ ನನ್ನ ಹೆಸರು ಮರೆತುಹೋದರೂ ಪರವಾಗಿಲ್ಲ
ನನ್ನ ಬಗ್ಗೆ ಒಂದು ಮಾತು ಉಳಿದರೆ ಸಾಕು
✍️ ಎಂಎಂ ದಾವುದ್

WhatsApp

Join Now

Telegram

Join Now

Instagram

Join Now