--Ads--

ಕಬಿನಿ ಕಟ್ಟು ನೀರು ಸಮಸ್ಯೆಗೆ 2 ದಿನದಲ್ಲಿ ಪರಿಹಾರ – ರೈತರ ಬೆಳೆ ರಕ್ಷಣೆಗೆ ಆದ್ಯತೆ : ಸಚಿವ ಚಲುವರಾಯಸ್ವಾಮಿ

On: September 3, 2026 1:39 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಕಬಿನಿ ಕಟ್ಟು ನೀರು ಸಮಸ್ಯೆಗೆ 2 ದಿನದಲ್ಲಿ ಪರಿಹಾರ – ರೈತರ ಬೆಳೆ ರಕ್ಷಣೆಗೆ ಆದ್ಯತೆ :ಸಚಿವ ಚಲುವರಾಯಸ್ವಾಮಿ

ಬೆಂಗಳೂರು, ಸೆ. 3: ರೈತರ ಬೆಳೆಗಳನ್ನು ಉಳಿಸಲು ಹಾಗೂ ವನ್ಯಜೀವಿಗಳಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಕಬಿನಿ ಜಲಾಶಯದಿಂದ ಕಟ್ಟು ಮಾದರಿಯಲ್ಲಿ ನೀರು ಹರಿಸುವ ಬಗ್ಗೆ ಎರಡು ದಿನಗಳಲ್ಲಿ ಗಂಭೀರ ಕ್ರಮ ವಹಿಸುವುದಾಗಿ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಭರವಸೆ ನೀಡಿದ್ದಾರೆ.

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳ’ದ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಿದರು.

ಸಭೆಯಲ್ಲಿ ಕಬಿನಿ ಭಾಗದ ನೀರಿನ ಕೊರತೆ ಬಗ್ಗೆ ಸದಸ್ಯರು ಪ್ರಸ್ತಾಪಿಸಿ ಕಟ್ಟು ಮಾದರಿಯಲ್ಲಿ ನೀರು ನೀಡಲು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಕೃಷಿಗೆ ಅನುಕೂಲವಾಗಲು ನಾಲ್ಕು ತಿಂಗಳವರೆಗೂ ನಾಲ್ಕು ಕಟ್ಟು ನೀರು ನೀಡಬೇಕಾಗುತ್ತದೆ. ಮೈಸೂರು ಉಸ್ತುವಾರಿ ಸಚಿವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ನದಿಗೆ ನೀರು ಬಿಡದಿದ್ದರೆ ವನ್ಯಪ್ರಾಣಿಗಳಿಗೂ ಕಷ್ಟವಾಗಲಿದೆ. ಹೀಗಾಗಿ ಇಂದು ರಾತ್ರಿಯೇ ಮುಖ್ಯ ಇಂಜಿನಿಯರ್ (CE) ಜೊತೆ ಚರ್ಚಿಸಿ, ಎರಡು ಅಥವಾ ನಾಲ್ಕು ಕಟ್ಟು ನೀರು ನೀಡುವ ಬಗ್ಗೆ ಕೇವಲ ಎರಡೇ ದಿನದಲ್ಲಿ ಸಮಸ್ಯೆ ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದರು.

ಜೊತೆಗೆ ಕಬಿನಿ ಚಾನಲ್‌ಗಳಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆ ಮಾಡಿ ನೇರವಾಗಿ ಭೂಮಿಗೆ ಹರಿಸುವಂತೆ ಹಾಗೂ ಗುಲ್ಬರ್ಗ ಭಾಗದಲ್ಲಿ ಬೆಳೆ ಉಳಿಸಲು ನೀರು ಬಿಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ನಿರ್ದೇಶನ ನೀಡಿದರು. ಮಂಡ್ಯ ಜಿಲ್ಲೆಯ ಕೌಡ್ಲೆ ಮತ್ತು ಸೋಮನಹಳ್ಳಿ ಸಬ್ ಬ್ರ್ಯಾಂಚ್‌ಗಳಿಗೂ ನೀರು ಹರಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಹೊಸ ಮಹಾಮಂಡಳಕ್ಕೆ ಕಚೇರಿ, ಗ್ರೂಪ್ ಡಿ ಸಿಬ್ಬಂದಿ ಹಾಗೂ ಅನುದಾನ ಒದಗಿಸುವಂತೆ ಸದಸ್ಯರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಯಾವುದೇ ಪೂರ್ವಸಿದ್ಧತೆ ಮತ್ತು ಲೆಕ್ಕಾಚಾರವಿಲ್ಲದೆ ಸುಮ್ಮನೆ ಅನುದಾನ ನೀಡಲು ಸಾಧ್ಯವಿಲ್ಲ. ACS ಅವರೊಂದಿಗೆ ಚರ್ಚಿಸಿ ಅಗತ್ಯ ಸಹಕಾರ ನೀಡಲಾಗುವುದು. ಸಂಘದ ಖರ್ಚು-ವೆಚ್ಚಗಳ ಸಂಪೂರ್ಣ ಮಾಹಿತಿ ನೀಡಿ, ಆರ್ಥಿಕ ಇಲಾಖೆ ಮೂಲಕ ಅನುಮೋದನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಂಘದ ಲಾಭಾಂಶವನ್ನು ಸಂಘದ ಅಭಿವೃದ್ಧಿಗೇ ಮರುಬಳಕೆ ಮಾಡಿ” ಎಂದು ಕಿವಿಮಾತು ಹೇಳಿದರು.

ಮಹಾಮಂಡಳದ ಮಹಾಸಭೆಯನ್ನು ಸೆ. 25ರೊಳಗೆ ನಡೆಸಬೇಕು ಮತ್ತು ಸಚಿವರೇ ಅಧ್ಯಕ್ಷತೆ ವಹಿಸಬೇಕು ಎಂದು ಸದಸ್ಯರು ಕೋರಿದರು. ಇದಕ್ಕೆ ಒಪ್ಪಿದ ಸಚಿವರು, ಸೆ. 25ರಂದು ಮಹಾಸಭೆ ನಡೆಸಲು ದಿನಾಂಕ ನಿಗದಿಪಡಿಸಿ ತಾವೇ ಖುದ್ದು ಭಾಗವಹಿಸುವುದಾಗಿ ತಿಳಿಸಿದರು.

ನದಿಗಳ ಹೂಳು ತೆಗೆಯುವ ಗುತ್ತಿಗೆಯನ್ನು ನೀರು ಬಳಕೆದಾರರ ಸಂಘಗಳಿಗೇ ನೀಡಬೇಕು, ಅನುದಾನವನ್ನು 2-3 ಲಕ್ಷ ರೂ.ಗೆ ಏರಿಸಬೇಕು, ಕಾಡಾ ನಿರ್ದೇಶಕರನ್ನು ಸಂಘದ ಬಾಡಿ ರಚನೆಗೆ ನೇಮಿಸಬೇಕು ಎಂಬ ಬೇಡಿಕೆಗಳನ್ನೂ ಸಚಿವರು ಆಲಿಸಿದರು.

ಸಭೆಯಲ್ಲಿ ಮಹಾಮಂಡಳದ ಉಪಾಧ್ಯಕ್ಷ ನಾಗಣ್ಣ, ರಾಜ್ಯ ಕಾರ್ಯದರ್ಶಿ ಕುಲಕರ್ಣಿ, ಕಾವೇರಿ ನೀರಾವರಿ ನಿಗಮದ MD ಮಹೇಶ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now