ವಿಜಯ ದರ್ಪಣ ನ್ಯೂಸ್……
ಮಡಿಕೇರಿಯ ರಾಜಾಸೀಟ್ ಉದ್ಯಾನವನದಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮರದ ಕೊಂಬೆ

ಮಡಿಕೇರಿ: ಮೇಲಿನ ಚಿತ್ರಗಳಲ್ಲಿ ಕಾಣುತ್ತಿರುವುದು ಮಡಿಕೇರಿಯ ಐತಿಹಾಸಿಕ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟ್ ಉದ್ಯಾನವನದ ಒಂದು ದೃಶ್ಯ. ಉದ್ಯಾನವನದಲ್ಲಿರುವ ವಿಶ್ರಾಂತಿ ಮಂಟಪದ ಮೇಲ್ಭಾಗಕ್ಕೆ ದೊಡ್ಡ ಮರದ ಕೊಂಬೆ ಬಿದ್ದು ಬಹಳ ಸಮಯ ಕಳೆದಿದ್ದರೂ ಇದುವರೆಗೆ ತೆರವುಗೊಳಿಸಿರುವ ಲಕ್ಷಣ ಕಾಣುತ್ತಿಲ್ಲ ರಾಜಾಸೀಟ್ ಕೊಡಗಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದ್ದು, ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿದೆ.
ಈ ಪರಿಸ್ಥಿತಿ ಮುಂದುವರಿದಲ್ಲಿ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ತೋಟಗಾರಿಕೆ (ಹಾರ್ಟಿಕಲ್ಚರ್) ಇಲಾಖೆ ರಾಜಾಸೀಟ್ ಉಸ್ತುವಾರಿ ಸಮಿತಿ ಹಾಗೂ ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ಗಮನಕ್ಕೂ ಈ ವಿಷಯವನ್ನು ತಂದು ಶೀಘ್ರವಾಗಿ ಮರದ ಕೊಂಬೆಯನ್ನು ತೆರವುಗೊಳಿಸಿ ಮಂಟಪವನ್ನು ಸುರಕ್ಷಿತಗೊಳಿಸಬೇಕೆಂದು ಸಾರ್ವಜನಿಕರು ಹಾಗೂ ಕೊಡಗು ಜನ ಅಭಿವೃದ್ಧಿ ಸಮಿತಿ ಮನವಿ ಮಾಡಿವೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಪ್ರವಾಸೋದ್ಯಮದ ಹಿತದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಲಿ ಎಂಬುದು ಎಲ್ಲರ ಆಶಯವಾಗಿದೆ
ಎಂ ಎಂ ದಾವುದ್










