--Ads--

ತಮೋಹ ನೃತ್ಯ ಸಂಸ್ಥೆಯ ದಶಮಾನೋತ್ಸವ : ಮೋಹಿನಿ-ಭಸ್ಮಾಸುರ ವಿಶೇಷ ನೃತ್ಯ ಪ್ರದರ್ಶನ

On: September 30, 2026 4:32 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ತಮೋಹ ನೃತ್ಯ ಸಂಸ್ಥೆಯ ದಶಮಾನೋತ್ಸವ :
ಮೋಹಿನಿ-ಭಸ್ಮಾಸುರ ವಿಶೇಷ ನೃತ್ಯ ಪ್ರದರ್ಶನ

ಬೆಂಗಳೂರು : ತಮೋಹ ನೃತ್ಯ ಸಂಸ್ಥೆಯ ದಶಮಾನೋತ್ಸವ ಸಮಾರಂಭವನ್ನು ಅಕ್ಟೋಬರ್ 2, ಶುಕ್ರವಾರ ಸಂಜೆ 4-30ಕ್ಕೆ ನಗರದ ಜೆ. ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಜಾನಪದ ಗಾಯಕರಾದ ಡಾ|| ಜೋಗಿಲ ಸಿದ್ಧರಾಜು ಮತ್ತು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯೆಯಾದ ವಿದುಷಿ ಉಷಾ ಬಸಪ್ಪ ಉಪಸ್ಥಿತರಿರುತ್ತಾರೆ.

ಅಂದಿನ ಕಾರ್ಯಕ್ರಮದಲ್ಲಿ ಮೊದಲಿಗೆ ಅಕಾಡೆಮಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಮತ್ತು ಕು|| ಆದ್ಯ ಮಯ್ಯಾ ನೃತ್ಯ ಕಾರ್ಯಕ್ರಮದ ಸೂತ್ರಧಾರಿಯಾಗಿ ಹಾಗೂ ತಾನೂ ಕೂಡಾ ಪ್ರಸಿದ್ಧ ಹರಿದಾಸರ ಕೀರ್ತನೆಗಳಿಗೆ ನೃತ್ಯ ಮಾಡಲಿದ್ದಾಳೆ.

ಈ ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ನೃತ್ಯ ಸಹೋದರಿಯರಾದ ವಿದುಷಿ ಗಾಯತ್ರಿ ಮಯ್ಯ ಮತ್ತು ವಿದುಷಿ ಪವಿತ್ರಾ ಪ್ರಶಾಂತ್ ಇವರಿಂದ “ಮೋಹಿನಿ – ಭಸ್ಮಾಸುರ” ನೃತ್ಯ ರೂಪಕಗಳು ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆಯ ನಿರ್ದೇಶಕಿ ಗಾಯತ್ರಿ ಮಯ್ಯ ವಿನಂತಿಸಿದ್ದಾರೆ.

WhatsApp

Join Now

Telegram

Join Now

Instagram

Join Now