ವಿಜಯ ದರ್ಪಣ ನ್ಯೂಸ್…..
ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ, ಗಾಯಕಿ ಅರ್ಚನ ಉಡುಪ ರವರಿಗೆ ಸನ್ಮಾನ

ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಉಳಿಸಲು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಹಕಾರ, ಪ್ರೋತ್ಸಾಹ-ಎಸ್.ರಘುನಾಥ್

ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಗಾಯಿತ್ರಿ ಭವನದಲ್ಲಿ ಎರಡು ದಿನಗಳ ಕಾಲ ಶ್ರೀ ವಿದ್ಯಾಗಣಪತಿ ಮಹೋತ್ಸವ ಕಾರ್ಯಕ್ರಮ ಮಹಾಮಂಗಳರತಿ, ವಿಶೇಷಪೂಜೆ ವಿಪ್ರ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ರವರು , ವಿಶೇಷ ಪೂಜೆ ಸಲ್ಲಿಸಿ ವಿಪ್ರ ಸಾಧಕರಿಗೆ ಸನ್ಮಾನಿಸಿದರು.ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮೀಕಾಂತ್, ಖಜಾಂಚಿ ಸುಬ್ಬಣ್ಣ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಬಿಜೆಪಿ ಮುಖಂಡ ಪ್ರಹ್ಲಾದ್ ಬಾಬು, ದತ್ತಾತ್ರಿರವರು ಮತ್ತು ರಾಮ್ ಪ್ರಸಾದ್ ರವರು ಉಪಸ್ಥಿತರಿದ್ದರು.
ಎಸ್.ರಘುನಾಥ್ ರವರು ಮಾತನಾಡಿ ಗಣೇಶ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಂಗೀತ ಸೇವೆಯ ಜೊತೆಯಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸಲಾಗುತ್ತಿದೆ. ಮಹಾಸಭಾದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ ಇಲ್ಲಿ ಕಲಾವಿದರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಸಭಾಂಗಣ ನೀಡಲಾಗುತ್ತಿದೆ.
ಪ್ರತಿ ತಿಂಗಳು ಕೊನೆಯ ಶುಕ್ರವಾರ ನಾಡಿನ ಸಾಧಕರಿಗೆ ಸನ್ಮಾನ ಮತ್ತು ಕಲಾವಿದರಿಗೆ ಸಂಗೀತ ಸೇವೆ ಅವಕಾಶ ನೀಡಲಾಗಿದೆ. ಬ್ರಾಹ್ಮಣ ಮಹಾಸಭಾ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಉಳಿಸಲು ಸಹಕಾರ, ಪ್ರೋತ್ಸಾಹ ನೀಡುತ್ತಿದೆ.

ಎಂ.ಕೆ.ವಿಶಾಲಾಕ್ಷಿರವರು ಮಾತನಾಡಿ ಮಂತ್ರಾಲಯದ ಗುರುರಾಯರ ಕೃಪೆ, ಪ್ರೇರಣೆಯಿಂದ ಸಾಧನೆ ಮಾಡಲು ಸಾಧ್ಯವಾಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರಿಗೆ ಪಕ್ಷಭೇಧ ಮರೆತು ಸಂವಿಧಾನತ್ಮಕ ಕೆಲಸ ಮಾಡುತ್ತೇನೆ. ವಿಧಾನಸಭೆಯಲ್ಲಿ ಕಾರ್ಯದರ್ಶಿಯಾಗಿ ಮೊದಲ ಮಹಿಳಾ ಕಾರ್ಯದರ್ಶಿಯಾಗಿದ್ದೇನೆ. ಆಡಳಿತ ಕುರಿತು ಮಾತನಾಡುವುದು ಸುಲಭ ಅದರೆ ಆಡಳಿತ ನಡೆಸಲು ಹಲವಾರು ಸಮಸ್ಯೆಗಳು ಎದುರಾಗುತ್ತದೆ. ನಾನು ವಿದ್ಯಾವಂತೆಯಾಗಲು, ಆಡಳಿತ ಸೇವೆ ಸಲ್ಲಿಸಲು ನನ್ನ ಕುಟುಂಬದವರ ಸಹಕಾರ ಇದೆ ಎಂದು ಹೇಳಿದರು.
ಗಣೇಶ ಮಹೋತ್ಸವ ಸಂದರ್ಭದಲ್ಲಿ ಈ ಕೆಳಕಂಡ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು ವಿದುಷಿ ಡಾ. ಹೆಚ್.ಜಿ. ಅಮೃತವರ್ಷಿಣಿರವರು ವೇದಾಂತರತ್ನ, ವೇದಶ್ರೀ ಡಾ. ಬಿ.ಎನ್. ನಾಗರಾಜ್ ರವರು
ವೇದ ವಿದ್ವಾನ್ ಪಂ.ಡಾ. ಭೀಮಸೇನಾಚಾರ್ಯ ಅತನೂರುರವರು ವೇದ ವಿದ್ವಾನ್ ಆಗಮಶಾಸ್ತ್ರ ಪ್ರವೀಣ ಶ್ರೀ ಬಿ.ಎಸ್. ಅನಂತ ಕೃಷ್ಣ ಭಟ್,
ವಿದ್ವಾನ್ ಡಾ. ಕೆ.ಎಸ್. ಅರುಣ್ ಕುಮಾರ್ ಆಚಾರ್ಯರವರು ,ಫಾಲಚಂದ್ರ ಶಾಸ್ತ್ರೀರವರು
ವೇದ ವಿದ್ವಾನ್ ಡಾ. ವೆಂಕಟೇಶಾಚಾರ್ ಬಿ.ಆರ್. ಅಡ್ಡಗದ್ದೆ ಕೃಷ್ಣಮೂರ್ತಿ ಭಟ್ಟರು, ಪ್ರಭಾಕರ್ ಶಾಸ್ತ್ರೀರವರು ಶ್ರೀಮತಿ ಅರ್ಚನ ಉಡುಪರವರು ಶ್ರೀಮತಿ ಎಂ.ಕೆ. ವಿಶಾಲಾಕ್ಷಿರವರು ಡಾ. ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರೀರವರು ರೈಸ್ ಗ್ರೈನ್ ವೆಂಕಟೇಶ್ ರವರು ವಿದುಷಿ ಶ್ರೀಮತಿ ಸುಮಾ ಕೃಷ್ಣಮೂರ್ತಿರವರು ವಿದ್ವಾನ್ ಶ್ರೀ ಎನ್. ರಾಜ್ ಕಮಲ್ ರವರು ವಿದ್ವಾನ್ ಗಾನಕಲಾ ಶ್ರೀ ಎಸ್.ಎನ್. ಸ್ವಾಮಿರವರು ವಿದೂಷಿ ಡಾ. ಲಕ್ಷ್ಮೀ ರೇಖಾ ಅರುಣ್ ರವರು ಉಪಸ್ಥಿತರಿದ್ದರು.











