--Ads--

ರಾಂ.ಕೆ.ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿಗೆ ಹಾಗೂ ಮಾಗಡಿ ನಟರಾಜ್ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಆಯ್ಕೆ

On: October 1, 2026 3:57 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ರಾಂ.ಕೆ.ಹನುಮಂತಯ್ಯ ಪುಸ್ತಕ ದತ್ತಿ ಪ್ರಶಸ್ತಿಗೆ ಹಾಗೂ ಮಾಗಡಿ ನಟರಾಜ್ ಸಂಸ್ಕೃತಿ ದತ್ತಿ ಪ್ರಶಸ್ತಿಗೆ ಆಯ್ಕೆ

ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೊಡಮಾಡುವ 2025–26 ರ ಸಾಲಿನ ಸಾಹಿತಿ ರಾಂ.ಕೆ.ಹನುಮಂತಯ್ಯ ಅವರು ಸ್ಥಾಪಿಸಿರುವ ಪುಸ್ತಕ ದತ್ತಿ ಪ್ರಶಸ್ತಿ ಗೆ ಚಾಮರಾಜನಗರ ಜಿಲ್ಲೆಯ ದಿಲೀಪ್. ಎನ್ಕೆ ಅವರ ‘ತಿತ್ತಿಬ್ವಾಸನ ಟೈಟಾನ್ ವಾಚು’, ಕಥಾ ಸಂಕಲನ, ಕೊಪ್ಪಳ ಜಿಲ್ಲೆಯ ಡಾ.ಹೀರಾ ನಾಗರಾಜ್ ಅವರ ‘ಚಿನ್ನದ ನಾಡಿನ ಶರಣರು’, ಲೇಖನ ಕೃತಿ, ಹಾಸನ ಜಿಲ್ಲೆಯ ಶ್ರೀಮತಿ ಇಂದಿರಾ ನಾಡಿಗ್ ಅವರ ‘ಹಸಿಗನಸು’ ಕಾದಂಬರಿ , ಚಿಕ್ಕಬಳ್ಳಾಪುರ ಜಿಲ್ಲೆಯ ಡಿ.ಎ.ಲಕ್ಷ್ಮೀನಾಥ್ ಅವರ ‘ಹನಿ ಹನಿ ಕಾವ್ಯ ‘ ಸಂಕಲನ ಆಯ್ಕೆ ಆಗಿರುತ್ತಾರೆ.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ.ಪಾನ್ಯಂ. ನಟರಾಜ್ ಅವರಿಗೆ 78 ರ ಅಭಿನಂದನೆ ಮತ್ತು ಅವರು ನೀಡಿರುವ ಸಂಸ್ಕೃತಿ ಸೇವಾ ದತ್ತಿ ಪ್ರಶಸ್ತಿ ಗೆ ಗಾಯಕ ಆನಂದ ಮಾದಲಗೆರೆ, ಕವಯಿತ್ರಿ ಸುಮಾ ಸತೀಶ್, ಪ್ರಕಾಶಕ ಅಭಿನವ ರವಿಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಿ.ಹೇಮಾವತಿ ಸಿಸಿರಾ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಇದೇ 6 ನೇ ತಾರೀಖು ಮಂಗಳವಾರ ಸಂಜೆ 4=45 ಗಂಟೆಗೆ ಬೆಂಗಳೂರಿನ ಸನ್ಮಾನ್ ಹೋಟೆಲ್ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮಹಾರಾಣಿ ಕ್ಲಸ್ಟರ್ ಯೂನಿವರ್ಸಿಟಿಯ ಕನ್ನಡ ಪ್ರಾಧ್ಯಾಪಕ ಡಾ.ಕೆ.ವೈ.ನಾರಾಯಣಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞೆ ಡಾ.ಗೀತಾ ರಾಮಾನುಜಂ ಭಾಗವಹಿಸುವರೆಂದು ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸಿ.ಹೇಮಾವತಿ ಸಿಸಿರಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now