--Ads--

ಗಾಂಧಿವಾದಿ, ಶಿಕ್ಷಣ ತಜ್ಞ ಡಾ.ವೂಡೇ ಪಿ.ಕೃಷ್ಣರವರಿಗೆ ಅಭಿನಂದನಾ ಸಮಾರಂಭ

On: October 14, 2026 4:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಗಾಂಧಿವಾದಿ, ಶಿಕ್ಷಣ ತಜ್ಞ ಡಾ.ವೂಡೇ ಪಿ.ಕೃಷ್ಣರವರಿಗೆ ಅಭಿನಂದನಾ ಸಮಾರಂಭ

ಬೆಂಗಳೂರು: ಬಸವ ಭವನ ಸಭಾಂಗಣದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಆದರ್ಶ ವಠಾರ ಜನಗಳ ಸಾಂಸ್ಕೃತಿಕ ಜಾಗೃತಿ ವೇದಿಕೆ ಸಹಯೋಗದಲ್ಲಿ ಶಿಕ್ಷಣ ತಜ್ಞರು ನಾಡೋಜ , ಮಹಾತ್ಮಾ ಗಾಂಧಿ ಸೇವಾ” ಪ್ರಶಸ್ತಿ ಪುರಸ್ಕೃತ ಡಾ ವೂಡೇ ಪಿ.ಕೃಷ್ಣ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.

ಹೈಕೋರ್ಟ್ ನ್ಯಾಯ ಮೂರ್ತಿಗಳಾದ ಆರ್. ದೇವದಾಸ್ ರವರು, ಐಪಿಎಸ್ ಅಧಿಕಾರಿ ರಶ್ಮಿ , ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು, ಹಿರಿಯ ಸಾಹಿತಿ ಜಾಂಭವ ಗಂಗಾಧರ್, ವಕೀಲರಾದ ರಾಜೇಶ್, ಬಾಲಾಜಿ ತಿಮ್ಮಪುರರವರು ರವರು ಡಾ.ವೂಡೇ ಪಿ.ಕೃಷ್ಣರವರಿಗೆ ಸನ್ಮಾನಿಸಿ, ಗೌರವಿಸಿದರು.

ನ್ಯಾಯಮೂರ್ತಿಗಳಾದ ಆರ್.ದೇವದಾಸ್ ರವರು ಮಾತನಾಡಿ ಗಾಂಧಿರವರ ವಿಚಾರಧಾರೆ ಅನುಸರಿಸಿಕೊಂಡು ಬರುತ್ತಿರುವ ವೂಡೇ ಪಿ.ಕೃಷ್ಣ ಗಾಂಧಿ ತತ್ವದ ಪ್ರತಿಪಾದಕ. ಗಾಂಧಿಜೀರವರ ತತ್ವ ಬಹಳ ಸರಳ, ಅದರ ಪಾಲನೆ ಮಾಡುವುದು ಕಷ್ಟ.

ನಮ್ಮ ಮನಸ್ಸಿನಲ್ಲಿ ಸತ್ಯ, ಧರ್ಮದ ವಿಚಾರ ಆಳವಡಿಸಿಕೊಂಡರೆ ಬೇರೆ ಕೆಟ್ಟ ಚಿಂತನೆ ಬರುವುದಿಲ್ಲ. ಗಾಂಧಿಜೀರವರ ಅವರ ಬಗ್ಗೆ ಎಲ್ಲರು ತಿಳಿದುಕೊಳ್ಳತ್ತಾರೆ ಅವರಂತೆ ನಡೆಯುವುದಿಲ್ಲ. ಗಾಂಧಿಜೀರವರ ವಿಚಾರಧಾರೆಗಳನ್ನು ಅಕ್ಷರಶಃ ಪಾಲಿಸುತ್ತಿರುವ ವೂಡೇ ಪಿ.ಕೃಷ್ಣರವರ ತರಹ ಇನ್ನಷ್ಟು ಜನರು ಹುಟ್ಟಿ ಬರಬೇಕು.

ಗಾಂಧಿಜೀರವರ ಮಾಡಿರುವ ಸಾಧನೆ ಯಾರು ಮಾಡಲು ಸಾಧ್ಯವಿಲ್ಲ. ರಾಷ್ಟ್ರಪತಿ, ಪ್ರಧಾನಿ ಆಗಬಹುದಿತ್ತು ಅದರೆ ಗಾಂಧಿರವರು ಅಧಿಕಾರಕ್ಕೆ ಬಯಸಲ್ಲಿಲ ಎಂದು ಹೇಳಿದರು.

ಮಲ್ಲೇಪುರಂ ಜಿ.ವೆಂಕಟೇಶ್ ರವರು ಮಾತನಾಡಿ ಪ್ರೀತಿ ತುಂಬಿರುವ ಮನಸ್ಸು ಕಡಿಮೆಯಾಗುತ್ತಿದೆ ಇಂದು ಸಮಾಜದಲ್ಲಿ. ಬುದ್ಧಿ ಮತ್ತು ಹೃದಯ ಬುದ್ದಿ ದಾರಿ ತಪ್ಪಬಹುದು ಅದರೆ ಹೃದಯ ದಾರಿ ತಪ್ಪುವುದಿಲ್ಲ. ವೂಡೇ ಪಿ.ಕೃಷ್ಣರವರು ಹೃದಯ ಶ್ರೀಮಂತರು.ಶೈಕ್ಷಣಿಕ, ಗಾಂಧಿ ತತ್ವ, ಸಂಸ್ಕೃತಿ, ಮತ್ತು ಆಧ್ಯಾತ್ಮ ನಾಲ್ಕು ಕ್ಷೇತ್ರದಲ್ಲಿ ಸಾಧಕರು ವೂಡೇ ಪಿ.ಕೃಷ್ಣರವರು. ಗಾಂಧಿರವರ ಆದರ್ಶ ತತ್ವವನ್ನು ರಾಜ್ಯಾದ್ಯಂತ ಪ್ರಚಾರ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಡಾ.ವೂಡೇ ಪಿ.ಕೃಷ್ಣರವರು ಮಾತನಾಡಿ ಇಂದು ಸುವರ್ಣ ದಿನ 25 ವರ್ಷಗಳ ಹಿಂದೆ ಕೆಂಪೇಗೌಡ ಪ್ರಶಸ್ತಿ ಇದೇ ಜಾಗದಲ್ಲಿ ಸ್ವೀಕರಿಸಿದ್ದೇ. ಇಂದಿನ ಬೆಂಗಳೂರು ಪಾಲಿಕೆಯ ಸ್ವಾತಂತ್ರ್ಯ ಪೂರ್ವದಲ್ಲಿ ಮುನಿಸಿಪಲ್ ಕೌನ್ಸಿಲ್ ಅಧ್ಯಕ್ಷರಾಗಿ ನಮ್ಮ ತಾತನವರು ಸೇವೆ ಸಲ್ಲಿಸಿದ್ದರು ಎಂದು ತಿಳಿಸಿದರು.

ಜನರ ಪ್ರೀತಿ ಗಳಿಸಿದ ಶ್ರೀಮಂತ ವ್ಯಕ್ತಿ ನಾನು, ರಾಮಕೃಷ್ಣ ಮಠ ನಮ್ಮ ಮೇಲೆ ಪ್ರಭಾವ ಬೀರಿದೆ. ಮಹಾತ್ಮ ಗಾಂಧಿಯವರನ್ನು ನಾನು ಪಾಠ ಕಲಿತೆ, ನಾನು ಜೀವನದಲ್ಲಿ ಸುಳ್ಳು ಹೇಳುವುದಿಲ್ಲ, ಎಲ್ಲರನ್ನು ಸರಿಸಮಾನ ಕಾಣುತ್ತೇನೆ, ಯಾರಿಂದಲು ನಾನು ಏನು ಬಯಸುವುದಿಲ್ಲ ಗಾಂಧಿರವರ ಸರಳ ಸೂತ್ರ ಸತ್ಯ , ಅಹಿಂಸೆ ಮಾರ್ಗದಲ್ಲಿ ನನ್ನ ಜೀವನದಲ್ಲಿ ಆಳವಡಿಸಿಕೊಂಡು ಬಂದಿದ್ದೇನೆ, ಗಾಂಧಿರವರ ಜೀವನ ಚರಿತ್ರೆ ಅಭ್ಯಾಸ ಮಾಡಿದರೆ ಭಾರತದ ಇತಿಹಾಸ ತಿಳಿಯುತ್ತದೆ. ಗಾಂಧಿರವರ ಕುರಿತು ವಿರುದ್ದ ಮಾತನಾಡುವವರ ವಿರುದ್ದ ನಾವು ಹೋರಾಟ ಮಾಡಬೇಕು ಎಂದು ಹೇಳಿದರು.

ಎ.ಅಮೃತ್ ರಾಜ್ ರವರು ಮಾತನಾಡಿ ನಮ್ಮ ಸಂಘದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ನಾಡು, ನುಡಿ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮಹನೀಯರುಗಳ ಆದರ್ಶ ಜೀವನ ನಮ್ಮ ಜೀವನದಲ್ಲಿ ಆಳವಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now