ವಿಜಯ ದರ್ಪಣ ನ್ಯೂಸ್…..
ಕಾಂಗ್ರೆಸ್ ರಕ್ಷಿಸಿ – ಕಾರ್ಯಕರ್ತರನ್ನು ಉಳಿಸಿಕೆಪಿಸಿಸಿ ಅಧ್ಯಕ್ಷರಿಗೆ INTUC ಮುಖಂಡರ ಒತ್ತಾಯ

ಶಿಡ್ಲಘಟ್ಟ : ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿ “ಶಿಡ್ಲಘಟ್ಟ ಕಾಂಗ್ರೆಸ್ ರಕ್ಷಿಸಿ – ಕಾರ್ಯಕರ್ತರನ್ನು ಉಳಿಸಿ” ಎಂದು INTUC ಮುನೀಂದ್ರ ಒತ್ತಾಯಿಸಿದರು.
ತಾಲ್ಲೂಕಿನ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಒಡಕನ್ನು ಬಗೆಹರಿಸಿ ಕಾರ್ಯಕರ್ತರನ್ನು ಉಳಿಸಬೇಕು ಎಂದು INTUC ರಾಜ್ಯ ಸಂಘಟನಾ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ ಅವರು ಕೆಪಿಸಿಸಿ ರಾಜ್ಯ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಾದ್ಯಂತ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈಗಾಗಲೇ ಮೀಸಲಾತಿ ನಿಗದಿಯಾಗಿದ್ದು, ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಪೈಪೋಟಿ ನಡೆಸುತ್ತಿದ್ದಾರೆ ಆದರೆ ತಾಲ್ಲೂಕಿನ ಕಾಂಗ್ರೆಸ್ನಲ್ಲಿ “ಒಂದು ಮನೆಗೆ ಮೂರು ಬಾಗಿಲು’ ಎಂಬಂತೆ ಒಡಕು ಉಂಟಾಗಿದೆ ಎಂದು ಮುನೀಂದ್ರ ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಕೆಪಿಸಿಸಿ ತಕ್ಷಣ ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಉಳಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಹೈಕಮಾಂಡ್ ತಕ್ಷಣ ಸೂಕ್ತ ನಿರ್ಧಾರ ಕೈಗೊಂಡು ಎಲ್ಲರನ್ನೂ ಒಗ್ಗೂಡಿಸಿ ಶಿಡ್ಲಘಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದ್ದರೂ ಯಾವ ಕಾರ್ಯಕರ್ತರಿಗೂ ನಿಗಮ-ಮಂಡಳಿಗಳಲ್ಲಿ ಸ್ಥಾನ ಘೋಷಣೆಯಾಗಿಲ್ಲ; ಇದರಿಂದ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡು ಕೆಲಸ ಮಾಡುವಂತಾಗಿದೆ ಎಂದು ಅವರು ಹೇಳಿದರು. ಬಣ ರಾಜಕೀಯ ಆರಂಭವಾಗಿರುವುದರಿಂದ ಯಾವ ಬಣದೊಂದಿಗೆ ಗುರುತಿಸಿಕೊಳ್ಳಬೇಕು ಎಂಬುದು ಕಾರ್ಯಕರ್ತರಿಗೆ ನೋವಿನ ವಿಷಯವಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನ ಪಕ್ಷದ ಕಾರ್ಯಕರ್ತರು ನಿಷ್ಠಾವಂತರಾಗಿದ್ದು, ಪಕ್ಷದ ಮತಗಳು ಹಾಗೆಯೇ ಇವೆ ಎಲ್ಲರೂ ಒಂದಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಯಶಸ್ವಿಯಾಗುವು ದರಲ್ಲಿ ಅನುಮಾನವಿಲ್ಲ ಎಂಬುದು ಸಾರ್ವಜನಿಕರ ಮಾತಾಗಿದೆ ಎಂದು ವಿವರಿಸಿದರು.
ಮನವಿಗೆ ಸ್ಪಂದಿಸಿದ ಕೆಪಿಸಿಸಿ ಅಧ್ಯಕ್ಷರು, ಸಮಸ್ಯೆಯನ್ನು ಆದಷ್ಟು ಬೇಗ ಬಗೆಹರಿಸುವುದಾಗಿ ಭರವಸೆ ನೀಡಿದರು ಎಂದು ಮುನೀಂದ್ರ ತಿಳಿಸಿದ್ದಾರೆ.








