ವಿಜಯ ದರ್ಪಣ ನ್ಯೂಸ್…..
ಅಕ್ಟೋಬರ್ 22ರಂದು ಸಂಗೀತ ನೃತ್ಯವೈಭವ -2026

ರಾಮನಗರ : ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ರಾಮನಗರದ ನ್ಯೂ ಎಕ್ಸ್ ಫರ್ಟ್ ಕಾಲೇಜು ಸಹಯೋಗದಲ್ಲಿ 22ನೇ ಅಕ್ಟೋಬರ್ 2026ರಂದು ಬೆಳಗ್ಗೆ 10.30ಕ್ಕೆ ಸಂಗೀತ ನೃತ್ಯವೈಭವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಸಾಲುಮರದ ನಿಂಗಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭ ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್, ನ್ಯೂ ಎಕ್ಸ್ ಫರ್ಟ್ ಕಾಲೇಜು ಪ್ರಾಂಶುಪಾಲ ಡಾ. ಡಿ.ಆರ್. ರವಿಕುಮಾರ್, ಪ್ರಗತಿಪರ ರೈತ ಮಹಿಳೆ ಶಾಂತಮ್ಮ ವೈ.ಸಿ. ಅತಿಥಿಗಳಾಗಿ ಪಾಲ್ಗೊಳ್ಳುವರು.
ಸಂಸ್ಕೃತಿ ಚಿಂತಕ, ಸಾಹಿತಿ ಡಾ. ಎಂ. ಬೈರೇಗೌಡ ಉಪನ್ಯಾಸ ನೀಡುವರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಉಷಾ ಬಸಪ್ಪ ಉಪಸ್ಥಿತರಿರುವರು.
ಕಾರ್ಯಕ್ರಮದ ಅಂಗವಾಗಿ ಚನ್ನಪಟ್ಟಣದ ರಾಮಚಂದ್ರ ಮತ್ತು ತಂಡದ ಸುಗಮ ಸಂಗೀತ, ರಾಮನಗರದ ಮಂಜುಳ ರವಿಕುಮಾರ್ ತಂಡದ ಸಮೂಹ ನೃತ್ಯ, ಮಾಗಡಿಯ ಶಾಂತಲ ಬಿ.ಎಚ್. ತಂಡದ ಶಾಸ್ತಿçÃಯ ನೃತ್ಯ, ಚನ್ನಪಟ್ಟಣದ ಬಿ. ಸಿದ್ಧರಾಜಯ್ಯ ತಂಡದ ವಚನ ಗಾಯನ, ಹಾಗೂ ಹಾರೋಹಳ್ಳಿಯ ಎನ್. ಜ್ಯೋತಿ ತಂಡವು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಡುವರು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.











