--Ads--

11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೈ.ಎನ್.ದಾಶರಥಿ ಆಯ್ಕೆ ಘೋಷಣೆ

On: November 13, 2026 5:43 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…….

11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವೈ.ಎನ್.ದಾಶರಥಿ ಆಯ್ಕೆ ಘೋಷಣೆ

ಶಿಡ್ಲಘಟ್ಟ : ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನವೆಂಬರ್ 24ರಂದು ನಡೆಯಲಿರುವ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕನ್ನಡ ಪಂಡಿತ, ನಿವೃತ್ತ ಶಿಕ್ಷಕ ವೈ.ಎನ್.ದಾಶರಥಿ ಅವರ ಹೆಸರನ್ನು ಘೋಷಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸುವ ಸಂಬಂಧ ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದ್ದು, ಕನ್ನಡ ನಾಡು ನುಡಿ, ಭಾಷೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಹಿರಿಯರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಅದರಂತೆ ಎಲ್ಲಾ ಸದಸ್ಯರ ಒಮ್ಮತದೊಂದಿಗೆ ವೈ.ಎನ್. ದಾಶರಥಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅವರ ಹೆಸರನ್ನು ಘೋಷಿಸಲಾಗಿದೆ ಎಂದು ‌ತಿಳಿಸಿದರು.

ವೈ.ಎನ್.ದಾಶರಥಿ ಅವರು ಸುಮಾರು 38 ವರ್ಷಗಳ ಕಾಲ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಕನ್ನಡಪರ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ ,ಸುಮಾರು ಐದು ವರ್ಷಗಳ ಕಾಲ ಅಮೆರಿಕದಲ್ಲಿ ನೆಲೆಸಿದ್ದ ಸಂದರ್ಭದಲ್ಲಿಯೂ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿ, ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಕನ್ನಡದ ಕಂಪನ್ನು ಪಸರಿಸಿದ್ದಾರೆ,ಸಾಹಿತ್ಯ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಬಿ.ಎನ್. ರವಿಕುಮಾರ್ ಅವರನ್ನು ಭೇಟಿ ಮಾಡಿ ಸಮ್ಮೇಳನದ ಸಿದ್ಧತೆಗಳ ಕುರಿತು ಚರ್ಚಿಸಲಾಗಿದೆ ,ಕಸಾಪ ಸಂಪ್ರದಾಯದಂತೆ ಸಮ್ಮೇಳನಾಧ್ಯಕ್ಷರ ನಿವಾಸಕ್ಕೆ ತೆರಳಿ ಫಲ, ವೀಳ್ಯ ಹಾಗೂ ತಾಂಬೂಲ ನೀಡಿ ಅಧಿಕೃತವಾಗಿ ಆಹ್ವಾನಿಸುವ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಪಡಿಸುವಂತೆ ಶಾಸಕರಲ್ಲಿ ಕೋರಲಾಗಿದೆ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಶಾಸಕರು, ಸಮ್ಮೇಳನಾಧ್ಯಕ್ಷರಿಗೆ ತಾಂಬೂಲ ನೀಡಿ ಆಹ್ವಾನಿಸುವುದರ ಜೊತೆಗೆ ನವೆಂಬರ್-24 ರಂದು ನಡೆಯುವ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದರು.

ನವೆಂಬರ್-24ರಂದು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸಮ್ಮೇಳನ ನಡೆಯಲಿದ್ದು, ಶಾಸಕ ಬಿ.ಎನ್. ರವಿಕುಮಾರ್ ಹಾಗೂ ತಹಸೀಲ್ದಾರ್ ಗಗನಸಿಂಧು ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದೆ, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಸಾಪ ಪದಾಧಿಕಾರಿಗಳಾದ ವಿ.ಕೃಷ್ಣ ,ಸುಂದರಾಚಾರಿ, ಮುನಿನಾರಾಯಣಪ್ಪ, ಈಧರೆ ಪ್ರಕಾಶ್,ಸುಂದರ್, ಜಯಂತಿಗ್ರಾಮ ನಾರಾಯಣಸ್ವಾಮಿ, ಸತ್ಯನಾರಾಯಣ, ಮಳಮಾಚನಹಳ್ಳಿ ದೇವರಾಜ್, ಕಲಾವಿದ ಸಿ.ಎನ್.ಮುನಿರಾಜು, ರಾಮಾಂಜಿ, ಟೈಲರ್ ನರಸಿಂಹಪ್ಪ ಮುಂತಾದವರು ಹಾಜರಿದ್ದರು.

&&&&&&&&&&&&&&#

” ರಾಣಿಯ ಮದುವೆ”

“ಅಮ್ಮಾ ನಾ ಚೆನ್ನಗಿಲ್ವೇನೆ”
ಸುರೇಖಾ ಪ್ರಶ್ನೆಗೆ ಜಡೆಯ ಎಣೆಯುತ್ತಿದ್ದ ಸುಮಿತ್ರ ಕೆನ್ನೆಯನ್ನು ಮೆಲ್ಲೆಗೆ ಗಿಲ್ಲಿ ಹೀಗೆಂದರೂ
” ನನ್ನ ರಾಣಿ ಕಣೆ ನೀನು ನಿನಗೇನಾಗಿದೆ”
“ಮತ್ಯಾಕೆ ಅವರು ಹಾಗೇ ಹೋದರು ”
ಈಗ ಮಾತ್ರಾ ಸುಮಿತ್ರ ಖಿನ್ನಳಾದಳು ಅದು ಕನ್ನಡಿಯ ಪ್ರತಿಬಿಂಬದಲ್ಲಿ ಸುರೇಖಾ ಗಮನಿಸಿಯಾಳು ಅಂತ ನಗುವನ್ನು ತಂದು ಕೊಂಡು ಹೀಗೆಂದರೂ
” ನನ್ನ ರಾಣಿಯನ್ನು ರಾಜನು ಮಾತ್ರ ಮದುವೆಯಾಗುವುದು ಇಂಥವರಲ್ಲ”
ಹೌದು ಸುರೇಖಾ ಸೌಂದರ್ಯದ ಖನಿ. ಓದಿನಲ್ಲೂ ಅಷ್ಚೆ. ಪ್ರತಿ ಶಾಲೆ, ಕಾಲೇಜು, ವ್ಯಕ್ತಿತ್ವ ದೃಢಿಕರಣದಲ್ಲೂ ಅತ್ಯತ್ತಮ ಅನ್ನೋ ಮುದ್ರೆಯಡಿಯಲ್ಲಿ ಪ್ರಾಂಶುಪಾಲರ ಸಹಿ ಇರುತ್ತಿತ್ತು.
“ಅಪ್ಪ ಅಮ್ಮ ಸಾಕಿದ್ದಾರೆ ಅವರಿಷ್ಟದಂತೆ, ನಾನು ರಾಣಿಯಾಗಿದ್ದೀನಿ ಅವರು ರಾಜನ ಅರಸಲಾರರೇನು…? “
Love ಮಾಡ್ತೀಯಾ ಅನ್ನುವವರ ಮುಖಕ್ಕೆ ಹೊಡೆದಂತೆ ಉತ್ತರ ಬರುತ್ತಿತ್ತು ಅಪ್ಪನಿಗೆ ಈ ಮಾತಿನಿಂದ ಹೆಮ್ಮೆ, ಅಮ್ಮನಿಗೆ ನನ್ನ ಮಗಳು ರಾಣಿಯೇ ಎಂಬ ಬಿಮ್ಮು.
ವಯಸಾಯಿತು ರಾಜನ ಹುಡುಕುವ ಕೆಲಸ ಸುಗುಣ ಸಂಪನ್ನ ಬೇಕು, ಮಗಳನ್ನು ಅರಿತು ಬಾಳಬೇಕು ಹಾಗಂತ ಮಗಳಿಗೂ ಅತ್ತೆ ಮನೆಯ ತುಂಬಿದ ಕುಟುಂಬದ ಪಾಠ ಅಮ್ಮನಿಂದ ಪ್ರತಿನಿತ್ಯದ ಪುರಾಣ, ತುಂಬಿದ ಮನೆಯ ಸೊಬಗು ಯಾವ ಕಾವ್ಯಕೂ ಮಿಗಿಲಿಲ್ಲ. ಬಂದವರು ಮೆಚ್ಚಿದರು ಆದರೇ ಹಾಗೆಯೇ ಕಣ್ಮರೆ. ಕಾರಣ ಜಾತಕ ಫಲ ಮದುವೆಯಾದರೇ ಗಂಡನಿಗೆ ಅಲ್ಪ ಪ್ರಾಯ.
ಇದರ ಮುಂದುವರೆದ ಸರಪಳಿಯೇ ನೆನ್ನೆ ಬಂದು ಹೋದ ಸಂಬಂದ ಇದನ್ನು ಹೇಗೆತಾನೆ ಮಗಳಿಗೆ ಹೇಳಿಯಾಳು ಸುಮಿತ್ರ ಪ್ರತಿಯೊಂದು ಸಾರಿನೂ ಒಂದು ಕಾರಣ ಸುರೇಖಾ ಹಾಗೆ ಬೊಂಬೆಯಂತೆ. ಒಂದು ಚೆಲುವ ನಗು.

ಅಂಕುರ್ ಕೂಡ ಓದಿದವನು ಜತೆಗೆ ಬದುಕ ಅರಿತವನು ಯಾರೋ ಹೇಳಿದ ಮಾತು ಅಂತೆಯೇ ಸುರೇಖಾಳ ಅಪ್ಪ ಕೃಷ್ಣಯ್ಯ ಬಂದು ಹೋಗಲಿ ಅಂದಿದ್ದರು ಹಾಗೇಯೆ ಬಂದು ಹೋಗಿದ್ದರು . ಮತ್ತೆ ಎಂದಿನಂತೆ ಮಗಳ ಬಳಿಯೊಂದು ರಾಣಿಯ ಕಥೆ.

ಕೃಷ್ಣಯ್ಯ ಕೈಯಲ್ಲಿದ್ದ ಮೋಬೈಲ್ ರಿಂಗಾಣಿಸಿತು ಅತ್ತಲಿಂದ ಯಾರದೋ ದನಿ. ಕೃಷ್ಣಯ ತಟಕ್ಕನೆ ಎದ್ದರು ಆನಂದದ ಮಾರ್ಧನಿ
” ಸುಮಿತ್ರಾ ನನ್ನ ರಾಣಿಗೆ ರಾಜ ಸಿಕ್ಕಿದ ಅಂಕುರ್ ಅವನ ಹೆಸರು Date fix ಮಾಡಲು ಕರೆದಿದ್ದಾರೆ”
ಸುಮಿತ್ರ ಈಗ ಗಾಳಿಯಲ್ಲಿನ ಹಕ್ಕಿ ನನ್ನ ರಾಣಿಗೆ ರಾಜ ಸಿಕ್ಕಿದ.

ಕನ್ನಡಿ ಮುಂದಿನ ಬೊಂಬೆ ನಕ್ಕಳು, ನಾಚಿದಳು ನವಿಲೊಂದು ನರ್ತಿಸಿತು, ಕೋಗಿಲೆಗಳ ದಂಡು ರಾಗ ಮಾಲಿಕೆಯ ಸುರುವಿಟ್ಟವು.

:- ತೀರ್ಥಾನಂದ. ಹೆಚ್ ಎಲ್
ಮಡಿಕೇರಿ

WhatsApp

Join Now

Telegram

Join Now

Instagram

Join Now