--Ads--

ಟೆಕ್ಸ್ ಟೈಲ್ ನಿಗಮದ ನಿರ್ದೇಶಕರಾಗಿ  ಕೆ .ಗುಡಿಯಪ್ಪ, ಯಾಸ್ಮೀನ್‌ ತಾಜ್  ನೇಮಕ

On: November 13, 2026 2:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಟೆಕ್ಸ್ ಟೈಲ್ ನಿಗಮದ ನಿರ್ದೇಶಕರಾಗಿ ಕೆ.ಗುಡಿಯಪ್ಪ, ಯಾಸ್ಮೀನ್‌ ತಾಜ್  ನೇಮಕ

 

ಶಿಡ್ಲಘಟ್ಟ : ಕೋಚಿಮುಲ್‌ ಮಾಜಿ ಅಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಗುಡಿಯಪ್ಪ ಅವರಿಗೆ ಬೆಳಗಾವಿ ಟೆಕ್ಸ್‌ಟೈಲ್ಸ್ ಮೂಲಸೌಕರ್ಯ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ,

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಯಾಸ್ಮಿನ್ ತಾಜ್‌ಗೆ ಹಟ್ಟಿ ಚಿನ್ನದ ಗಣಿ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ .

ರಾಜ್ಯ ಸರಕಾರವು ನಾನಾ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಕರು, ಸದಸ್ಯರ ನೇಮಕ ಮಾಡಿ ಆದೇಶಿಸಿದ್ದು, ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಇಬ್ಬರುಕಾಂಗ್ರೆಸ್ಸಿಗರಿಗೆ ನಿಗಮದಲ್ಲಿ ನಿರ್ದೇಶಕ ಸ್ಥಾನ ದೊರೆತಿದ್ದು ಕಾಂಗ್ರೆಸ್ ಪಾಳಯದಲ್ಲಿ ಸಂತಸ ಮನೆ ಮಾಡಿದೆ.

ಈ ಮಧ್ಯೆ ರಾಜೀವ್‌ ಗೌಡ ಬಣದಲ್ಲಿ ಗುರುತಿಸಿಕೊಂಡಿರುವ ಕೆ.ಗುಡಿಯಪ್ಪ ಹಾಗು ಯಾಸ್ಮಿನ್‌ತಾಜ್‌ಗೆ ಅವರುಗಳಿಗೆ ನಿಗಮದಲ್ಲಿ ನಿರ್ದೇಶಕ ಸ್ಥಾನ ದೊರೆತಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ.

ಕೆಪಿಸಿಸಿ ಸಂಯೋಜಕರು ಹಾಗು ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್ ಗೌಡ ಮಾತನಾಡಿ, ಈ ನೇಮಕದಿಂದ ಪಕ್ಷದ ಸಂಘಟನೆಗೆ ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ಬರಲಿದೆ ನಿಷ್ಠಾವಂತ ಕಾಂಗ್ರೆಸ್ಸಿಗರಿಗೆ ಸಿಕ್ಕ ಗೌರವ ಕೂಡ ಇದು ಎಂದು ಹೇಳಿದರು,

ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಿದ್ದು, ಉಳಿದವರಿಗೂ ಪಕ್ಷದಲ್ಲಿ ಹಾಗೂ ನಿಗಮ, ಮಂಡಳಿ, ಪ್ರಾಧಿಕಾರದಲ್ಲಿ ಅವಕಾಶ ಸಿಗುವ ಆಶಾಭಾವನೆಯಿದೆ ಸೂಕ್ತ ಅವಕಾಶ ಕೊಟ್ಟ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

WhatsApp

Join Now

Telegram

Join Now

Instagram

Join Now