--Ads--

ತಲ್ವಾರ್ ಗೆ ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂಸಮಾಜಕ್ಕೆ ಬರುತ್ತದೆ: ಕೆ ಎಸ್ ಈಶ್ವರಪ್ಪ

On: October 2, 2023 10:52 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್

ಶಿವಮೊಗ್ಗ: ಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ರ ಗುಲಾಮರ ರೀತಿಯಾಗಿದೆ. ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಶಿವಮೊಗ್ಗದಲ್ಲಿ ಹಿಂದೂ ಸಮಾಜದ ಕಾರ್ಯಕ್ರಮವಾಗುತ್ತದೆ. ಮುಸಲ್ಮಾನರ ಕಾರ್ಯಕ್ರಮ ಕೂಡವಾಗುತ್ತಿದೆ. ಮೊನ್ನೆ ಅನಂತನ ಚತುರ್ದಶಿ ದಿನ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮಾಡಲಾಯ್ತು. ಮಕ್ಕಳು, ಮಹಿಳೆಯರು ಎಲ್ಲರೂ ಸೇರಿ ಎರಡು ಲಕ್ಷಕ್ಕೂ ಅಧಿಕ ಜನ ಸೇರಿ ಹಬ್ಬ ಮಾಡಿದರು. ಯಾವುದೇ ಗಲಾಟೆಯಾಗಲಿಲ್ಲ. ಲಕ್ಷಾಂತರ ಜನ ಸೇರಿ ಹಲವು ಕಾರ್ಯಕ್ರಮ ಮಾಡಿದರೂ ಗಲಾಟೆಯಾಗಲ್ಲ. ಆದರೆ, ನಿನ್ನೆ ಮುಸಲ್ಮಾನರ ಮೆರವಣಿಗೆಯಲ್ಲಿ ಗಲಭೆಯಾಗಿದೆ, ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು ಎಂದರು.

ಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗುತ್ತಾರೆ. ಯಾರಿಗೆ ಎಚ್ಚರ ಅದು? ಹಿಂದೂ ಸಮಾಜಕ್ಕಾ? ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ದರು ಆದರೆ ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು. ಅದು ಗೊತ್ತಿದ್ದರೂ ಇಲ್ಲಿ ದೊಡ್ಡ ಖಡ್ಗ ಹಾಕಲು ಯಾಕೆ ಬಿಟ್ಟರು? ಪೊಲೀಸನವರು ಸರ್ಕಾರಕ್ಕೆ ಹೆದರಿ ಹೋಗಿದ್ದಾರೆ. ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ. ಇದು ಸಿಎಂ, ಗೃಹ ಮಂತ್ರಿ ಹಾಗೂ ಮುಸ್ಲಿಂರಿಗೆ ಎಚ್ಚರಿಕೆ. ತಲ್ವಾರ್ ಹಿಡಿದು ಟ್ರಾಕ್ಟರಿನಲ್ಲಿ ಹೋದರೂ ಅರೆಸ್ಟ್ ಮಾಡದ ಇವರು ಪೊಲೀಸ್ ಆಗಲು ಅನ್ ಫಿಟ್. ಕಾಂಗ್ರೆಸ್ ಸರ್ಕಾರ ಮುಸ್ಲಿಂ ರ ಗುಲಾಮರ ರೀತಿಯಾಗಿದೆ ಎಂದು ಗುಡುಗಿದರು.

WhatsApp

Join Now

Telegram

Join Now

Instagram

Join Now