ಸಾಗರ ನಗರದಲ್ಲಿ ಸಾರ್ವಜನಿಕ ಬಾವಿಗಳ ಅತಿಕ್ರಮಣ: ತಲೆಕೆಡಿಸಿಕೊಳ್ಳದ ನಗರಸಭೆ

ವಿಜಯ ದರ್ಪಣ ನ್ಯೂಸ್

ಸಾಗರ ನಗರದಲ್ಲಿ ಸಾರ್ವಜನಿಕ ಬಾವಿಗಳ ಅತಿಕ್ರಮಣ ತಲೆಕೆಡಿಸಿಕೊಳ್ಳದ ಸಾಗರ ನಗರಸಭೆ

ಶಿವಮೊಗ್ಗ ಜಿಲ್ಲೆ, ಸಾಗರ : ನಗರದ ಅನೇಕ ಕಡೆ ಸುಮಾರು 60 ವರ್ಷಗಳ ಹಿಂದಿನಿಂದ ಸೇದು ಭಾವಿಗಳನ್ನು ಪುರಸಭೆಯಿಂದ ನಿರ್ಮಿಸಿ ನಿರ್ವಹಿಸಲಾಗುತ್ತಿತ್ತು .ವರದಾ ನದಿಯಿಂದ ನೀರು ಸಾಗರ ಪಟ್ಟಣಕ್ಕೆ ಸರಬರಾಜಾದರೂ ಕೂಡ ನದಿಯಲ್ಲಿ ಕೆಲವೊಮ್ಮೆ ಬರಗಾಲದ ಸಂದರ್ಭದಲ್ಲಿ ನದಿ ಬತ್ತಿದರೂ ಈ ಬಾವಿಗಳು ಸಾಗರ ನಗರದ ಜನರ ಬಾಯಾರಿಕೆಯ ದಾಹವನ್ನು ತಿರೀಸುತ್ತಿದ್ದವು.

ಪ್ರತಿ ವರ್ಷ ಬಾವಿಗಳನ್ನು ಸುತ್ತಲ ಜಾಗವನ್ನು ಸ್ವಚ್ಛಗೊಳಿಸುವ ಕೆಲಸ ಸಾಗರ ಪುರಸಭೆ ನಿರ್ವಹಿಸುತ್ತಿತ್ತು
ಆದರೆ ಸಾಗರ ನಗರಸಭೆ ಆಧಾಲಿಂದ ಇದುವರೆಗೂ ಬಾವಿ ಕಡೆ ಅಧಿಕಾರಿಗಳು ತಿರುಗಿ ನೋಡಿಲ್ಲ ಸಂಬಂಧಪಟ್ಟ ಆರೋಗ್ಯ ಅಧಿಕಾರಿ ಇತ್ತ ಸುಳಿದಿಲ್ಲ. ಈ ವರ್ಷ ಬರಗಾಲ ಬರುವುದು ಗ್ಯಾರಂಟಿಯಾಗಿದೆ ಶರಾವತಿ ನದಿಯಲ್ಲಿ ಕರೆಂಟಿಗೆ ನೀರಿಲ್ಲ ಇನ್ನು ಕುಡಿಯುವ ನೀರುಬಹಳ ಸಮಯ ಬರುವ ಹಾಗಿಲ್ಲ .

ಇನ್ನು ಸಾಗರ ನಗರ ಸಭೆ ಸಾಗರದ ವರದಾ ನದಿಯ ಗಬ್ಬು ನೀರು ಕುಡಿಸುವ ಬದಲು ಸಾಗರ ನಗರದಲ್ಲಿ ಬಾವಿಗಳ ಸರ್ವೆ ಮಾಡಿ ಆಯಾ ವಾರ್ಡಿನಲ್ಲಿ ಇರುವ ಬಾವಿಗಳನ್ನು ಅತಿಕ್ರಮಣ ದಿಂದ ತೆರವುಗೊಳಿಸಿ (ಈಗಾಗಲೇ ಕೆಲವು ಬಾವಿಗಳನ್ನು ಅಕ್ರಮವಾಗಿ ಮುಚ್ಚಿ ಕಟ್ಟಡಗಳನ್ನು ಕಟ್ಟಲಾಗಿದೆ ಎಂಬ ಮಾಹಿತಿ ಇದೆ) ಸಾಗರದ ನಗರದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಸಾಗರ ನಗರಸಭೆಯ ಅಧಿಕಾರಿಗಳು ಗಮನಹರಿಸುವರೆ? ಅಥವಾ ಲೂಟಿಯಾದ ಮೇಲೆ ಕೋಟೆ ಬಾಗಿಲು ಹಾಕಿದರು ಎಂಬ ಗಾದೆಯಂತೆ ನಡೆದುಕೊಳ್ಳುವರೇ ಕಾದುನೋಡಬೇಕಾಗಿದೆ.

–ಧರ್ಮರಾಜ್ ಜಿ ಸಾಗರ