--Ads--

ವಿಜೃಂಭಣೆಯಿಂದ ನಡೆದ ಅಕ್ಕನ ಬಳಗದ ವಜ್ರ ಮಹೋತ್ಸವ…..

On: May 25, 2024 6:23 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ವಿಜೃಂಭಣೆಯಿಂದ ನಡೆದ ಅಕ್ಕನ ಬಳಗದ ವಜ್ರ ಮಹೋತ್ಸವ…..

ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ

ವಿಜಯಪುರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ : ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗ ವಜ್ರ ಮಹೋತ್ಸವ ಕಾರ್ಯಕ್ರಮ 351ನೇ ಮಾಸಿಕ ಶಿವಾನುಭವ ಗೋಷ್ಠಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ನೂತನ ಪದಾಧಿಕಾರ ಸ್ವೀಕಾರ ಸಮಾರಂಭವನ್ನು ಪಟ್ಟಣದ ಶ್ರೀ ನಗರೇಶ್ವರ ಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ಏರ್ಪಡಿಸಲಾಗಿತ್ತು .

ಅಕ್ಕನ ಬಳಗ ಅರಿವಿನ ಮನೆಯಿಂದ ವೀರಗಾಸೆ ತಂಡ ಮತ್ತು ಕಳಸ ಕುಂಭ ಗಳೊಂದಿಗೆ ಶ್ರೀ ಶ್ರೀಗಳು ರವರನ್ನು ಕಳಸ ಕುಂಭ ಗಳೊಂದಿಗೆ ಬರಮಾಡಿಕೊಂಡು ಇಷ್ಟ ಲಿಂಗ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ಎ ಎಸ್ ವಿ . ಎನ್ ವಿ ಸಂಘದ ಅಧ್ಯಕ್ಷ ಎಸ್ ಪ್ರಕಾಶ್ ನೆರವೇರಿಸಿದರು.

ಗೌರವ ಕಾರ್ಯದರ್ಶಿ ಮ.ಸುರೇಶ್ ಬಾಬು ಟ್ರಸ್ಟ್ ಬೆಳೆದು ಬಂದ ವರದಿಯನ್ನು ಮಂಡಿಸಿದರು. ಟ್ರಸ್ಟ್ ನ ಅಧ್ಯಕ್ಷ ಸಿ. ಬಸಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಎ. ಎಸ್‌ವಿ ಎನ್ ವಿ ಸಂಘದ ಗೌರವಕಾರ್ಯದರ್ಶಿ ಎಂ ಎಸ್ ಕೃಷ್ಣಮೂರ್ತಿ ಖಜಾಂಚಿ ಎಂ ಶಂಕರ್ ಟ್ರಸ್ಟನ ಗೌರವಾಧ್ಯಕ್ಷ ಪಿ ಚಂದ್ರಪ್ಪ ಉಪಾಧ್ಯಕ್ಷ ಅಂಬಾ ಭವಾನಿ ಬಸವರಸಪ್ಪ ನಿಯೋಜಿತ ಅಧ್ಯಕ್ಷ ವಿ ಅನಿಲ್ ಕುಮಾರ್ ಭಾಗವಹಿಸಿದ್ದರು

ಇದೆ ಸಂದರ್ಭದಲ್ಲಿ ಶ್ರೀಮತಿ ಭಾನುಮತಿ ರೇಣುಕಾ ರುದ್ರಪ್ಪ ಮಹಾದಾನಿ ಕೆ.ಸಿ.ಜಯಕುಮಾರ್ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ  ಎಚ್ಎಸ್ ರುದ್ರೇಶ್ ಮೂರ್ತಿ ಸಿ.ಭಾಸ್ಕರ್ ಮಹಿಳಾ ಸಂಘದ ಅಧ್ಯಕ್ಷ ಲೀಲಾವತಿ ರುದ್ರಮೂರ್ತಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತ್ತು.

ಅಮೆರಿಕ ನಿವಾಸಿಗಳಾದ ಕುಮಾರಿ ಗ್ರೀಷ್ಮ ಅಶೋಕ್ ಮತ್ತು ಕುಮಾರಿ ಆದ್ಯ ಅಶೋಕ್ ಸ್ವಾಗತ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು. ಟ್ರಸ್ಟ್ ನೂತನ ಅಧ್ಯಕ್ಷರಾಗಿ ವಿ.ಅನಿಲ್ ಕುಮಾರ್ ತಂಡದವರು ಅಧಿಕಾರ ವಹಿಸಿಕೊಂಡರು.

ಶ್ರೀ ಮದ್ವಿ ಭೂತಿಪುರ ಸಂಸ್ಥಾನ ಮಠಾಧೀಶರಾದ ಷ.ಬ್ರ ಶ್ರೀ ಡಾ. ಮಹಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

WhatsApp

Join Now

Telegram

Join Now

Instagram

Join Now