--Ads--

ಸಾವಯವ ಕೃಷಿ ಕ್ಷೇತ್ರದಲ್ಲಿ  ಶಿವನಾಪುರ ರಮೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

On: October 31, 2024 9:35 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಕೃಷಿ ಕ್ಷೇತ್ರದಲ್ಲಿ  ಶಿವನಾಪುರ ರಮೇಶ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ …

ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಕ್ಟೋಬರ್ 30: ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ  ಕೊಡ ಮಾಡುವ  2024 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾವಯವ ಕೃಷಿ ಕ್ಷೇತ್ರದಲ್ಲಿ ತೋಡಗಿಕೊಂಡಿರುವ ಶಿವನಾಪುರ ರಮೇಶ್ ಆಯ್ಕೆಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ   ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ದೇವನಹಳ್ಳಿಯಲ್ಲಿ  ನಂದಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ  ತೇಜ ನರ್ಸರಿ ನಡೆಸುತ್ತಿರುವ   ಸಾವಯವ ಕೃಷಿ ಪಂಡಿತ ಶಿವನಾಪುರ ರಮೇಶ್ ಅವರು ನಾಡಿನೆಲ್ಲಡೆ ಹಸಿರು ಹಬ್ಬಬೇಕು, ಮಣ್ಣು ಫಲವತ್ತಾಗಿರಬೇಕು’ ಎನ್ನುವ ಆಶಯದೊಂದಿಗೆ ಸಾವಯವ  ಪದ್ಧತಿಯಲ್ಲಿ  ನರ್ಸರಿಯಲ್ಲಿ  ತೋಡಗಿಸಿಕೊಂಡಿರುವ  ಶಿವನಾಪುರ ರಮೇಶ್ ಅವರು ‘ತೇಜ ನರ್ಸರಿ’ ಮೂಲಕ ನಮ್ಮ ರಾಜ್ಯದಲ್ಲಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಹೆಸರು ಮಾಡಿರುವ ಸಾವಯವ ಕೃಷಿಕರು.

1959ರಲ್ಲಿ ಜನಿಸಿರುವ ರಮೇಶ್ ಅವರು ಅಜ್ಜಿನಿಂದ ಬಳುವಳಿಯಾಗಿ ಪಡೆದ ಕೃಷಿ ಜ್ಞಾನದಿಂದ ದೊಡ್ಡ ಸಾಧನೆ ಮಾಡಿದ್ದಾರೆ. ಸಾವಯವ ಪದ್ಧತಿಯಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿ ಮಾರಾಟ ಮಾಡುವ ಹಾಗೂ ಅದೇ ಮಾದರಿಯಲ್ಲಿ ಬೆಳೆಸುವ ವಿಧಾನ ಕುರಿತು ಕೃಷಿಕರಿಗೆ ಮಾರ್ಗದರ್ಶನವನ್ನು ನೀಡುತ್ತ ಬಂದಿದ್ದಾರೆ.

ಮೂಲೆಗುಂಪಾಗುತ್ತಿದ್ದ ದೇವನಹಳ್ಳಿ ಚೊಕ್ಕೋತ ತಳಿಯನ್ನು ಮೂಲ ಸ್ವಾಧದಲ್ಲೇ ಅಭಿವೃದ್ಧಿಗೊಳಿಸಿ ವ್ಯಾಪಕ ಪ್ರಚಾರ ಹಾಗೂ ಬೆಳೆಯ ವಿಸ್ತರ್ಣಕ್ಕೆ ಕಾರಣರಾಗಿರುವ ರಮೇಶ್ ಅವರ ಪರಿಶ್ರಮ ಹಾಗೂ ಜಿಕೆವಿಕೆ, ಹೆಸರಘಟ್ಟದಲ್ಲಿನ ಕೃಷಿ ವಿಜ್ಞಾನಿಗಳಿಂದ ದೇವನಹಳ್ಳಿಯ ಚಿಕ್ಕೋತ ಭೌಗೋಳಿಕ ಸೂಚ್ಯಂಕ (ಜಿಐ) ಪಡೆದಿದ್ದು ರಾಜ್ಯ ತೋಟಗಾರಿಕಾ ಕ್ಷೇತ್ರಕ್ಕೆ ಸಂದ ದೊಡ್ಡಗೌರವವಾಗಿದೆ.

ತೇಜ ನರ್ಸರಿ ಹಣ್ಣಿನ ಗಿಡಗಳನ್ನು ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತವಾಗದೆ, ರೈತರು ತಾವು ಖರೀದಿಸುವ ಹಣ್ಣಿನ ಗಿಡವನ್ನು ಬೆಳೆಸುವ, ಮಣ್ಣಿನ ಫಲವತ್ತತೆ ಹೆಚ್ಚಿಸುವ, ಜೈವಿಕ ವಿಧಾನಗಳ ಮೂಲಕ ಕೀಟಗಳ ನಿರ್ವಹಣೆ ಸೇರಿದಂತೆ ಸಮಗ್ರ ಮಾಹಿತಿಯನ್ನು ತಿಳಿಸಿಕೊಡುವ ಮೂಲಕ ಸಾವಯವ ತೋಟಗಾರಿಕ ಕೃಷಿ ಉತ್ತೇಜಕರಾಗಿ ಕೆಲಸ ಮಾಡುತ್ತಿದ್ದಾರೆ.

ಕೃಷಿಯಿಂದ ವಿಮುಕರಾಗುತ್ತಿರುವ ಯುವ ಸಮುದಾಯವನ್ನು ಮರಳಿ ಮಣ್ಣಿನ ಕಡೆಗೆ ಬರುವಂತೆ ಮಾರ್ಗದರ್ಶನ ಮಾಡುವ ಕಾಯದಲ್ಲಿ ಸದಾ ನಿರತರು. ನಮ್ಮ ಮಣ್ಣಿನ ಫಲವತ್ತತೆ ಉಳಿದರೆ ಮಾತ್ರ ನಾಡಿನ ಪ್ರಾಣಿ, ಪಕ್ಷಿ, ಜನರ ಉಳಿವು ಎನ್ನುವ ಕಾಳಜಿಯೊಂದಿಗೆ ನಾಡಿನಲ್ಲಿ ತೋಟಗಾರಿಕೆ ಬೆಳೆ ವಿಸ್ತೀರ್ಣವಾಗಲು ಶ್ರಮಿಸುತ್ತಿದ್ದಾರೆ.

ಒಮ್ಮೆ ತೇಜ ನರ್ಸರಿಗೆ ಪ್ರವೇಶ ಮಾಡಿದರೆ ಒಂದು ಕೃಷಿ ಸಂಶೋಧನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದಾಗೆ ಆಗುತ್ತದೆ . ಯಾವ ಕಡೆ ಕಣ್ಣಾಯಿಸಿದರೂ ಹಚ್ಚ ಹಸುರಿನ ವಿವಿಧ  ತಳಿಗಳ ಗಿಡಗಳನ್ನು ನಾವು ಕಾಣಬಹುದು. ನಂದಿ ಬೆಟ್ಟಕ್ಕೆ ಹೋಗುವರು ಒಮ್ಮೆಯಾದರೂ ಈ ತೇಜ ನರ್ಸರಿಗೆ ಭೇಟಿ ಕೊಟ್ಟು  ಸಾವಯವ ಕೃಷಿ ಪದ್ಧತಿಯನ್ನು  ಕಣ್ತುಂಬಿಸಿಕೊಳ್ಳಬಹುದು.

ದೇವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಸಹಜ ಸಮೃದ್ಧ ರೈತ ಉತ್ಪಾದಕ ಸಂಸ್ಥೆಯ ಸಂಸ್ಥಾಪಕ ಟ್ರಸ್ಟಿಯಾಗಿ, ಅಧ್ಯಕ್ಷರಾಗಿ, ಜೈವಿಕ ಕೃಷಿಕ್ ಸೊಸೈಟಿ ಸಂಸ್ಥಾಪಕ ಖಜಾಂಚಿ ಹಾಗೂ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ಚಕ್ಕೋತ ಸೇರಿದಂತೆ ವಿವಿಧ ಫಲೋತ್ಪನ್ನಗಳನ್ನು ಪ್ರದರ್ಶಿಸಿ ಆರು ಸಲ ಬಹುಮಾನ ಗಳಿಸಿದ್ದಾರೆ.

ಈಗಾಗಲೇ ಇವರು ಎಂ.ಎಚ್.ಮರಿಗೌಡ ರಾಜ್ಯ ಪ್ರಶಸ್ತಿ, ಡಾ.ಜಿ.ಮಾದೇಗೌಡ ಪ್ರತಿಷ್ಠಾನದ ಸಾವಯವ ಕೃಷಿಕ ರಾಜ್ಯ ಪ್ರಶಸ್ತಿ, ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಆಸಕ್ತರು ಸಾವಯವ ಕೃಷಿ ಪದ್ಧತಿಯಲ್ಲಿ  ಗಿಡಗಳನ್ನು ಬೆಳೆಯಲು ಹೆಚ್ಚಿನ ಮಾಹಿತಿಗೆ ಶಿವನಾಪುರ ರಮೇಶ್ ಅವರನ್ನು ಸಂಪರ್ಕಿಸ ಬಹುದು.  ಮೊಬೈಲ್ ನಂಬರ್ 9845529324

WhatsApp

Join Now

Telegram

Join Now

Instagram

Join Now