--Ads--

“ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‍ಮನೆ ಸಹಕಾರಿ” : ಸೂದನ ಈರಪ್ಪ*

On: December 16, 2024 6:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಅರೆಭಾಷಿಕರನ್ನು ಒಟ್ಟುಗೂಡಿಸುವಲ್ಲಿ ಐನ್‍ಮನೆ ಸಹಕಾರಿ” : ಸೂದನ ಈರಪ್ಪ

ಮಡಿಕೇರಿ ಡಿ.16 :-ಅರೆಭಾಷಿಕರ ಭಾಷೆ, ಸಂಸ್ಕೃತಿ ಸಂಪ್ರದಾಯದಲ್ಲಿ ಕೊಡಗಿನ ಐನ್‍ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್‍ಮನೆಯ ಪಾತ್ರ ಅತ್ಯಂತ ವಿಶಿಷ್ಠವಾಗಿದೆ ಎಂದು ಅರೆಭಾಷೆ  ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸೂದನ ಎನ್.ಈರಪ್ಪ ಅವರು ಹೇಳಿದರು.

ಐಗೂರಿನ ಯಡವಾರೆ ಅರೆಭಾಷೆ ಗೌಡ ಸಮಾಜ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ 14 ನೇ ಅರೆಭಾಷೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಐನ್‍ಮನೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರೆಭಾಷಿಕರನ್ನು ಒಟ್ಟುಗೂಡಿಸಿ ಭಾಷೆ-ಸಂಸ್ಕøತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುವಂತಾಗಬೇಕು ಎಂದು ಹೇಳಿದರು.

ಇಂದಿನ ಯುವ ಸಮೂಹ ಸಂಸ್ಕøತಿ-ಭಾಷೆಯ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದು, ಅಕಾಡೆಮಿ ಈ ಯುವ ಸಮೂಹಕ್ಕೆ ವಿಶೇಷ ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸಲಿದೆ ಎಂದು ಸೂದನ ಈರಪ್ಪ ಅವರು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಫಿ ಬೆಳೆಗಾರ ಮೂಲೆಮಜಲು ಮುತ್ತಪ್ಪ ಅವರು ಮಾತನಾಡಿ ಅರೆಭಾಷಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೀಳರಿಮೆ ತೋರದೆ ಮುಂದಿನ ಜನಾಂಗಕ್ಕೆ ಪೂರಕವಾಗಿ ಭಾಷೆ ಮತ್ತು ಸಂಸ್ಕøತಿಯನ್ನು ಕಾಪಾಡಬೇಕು. ಇದಕ್ಕೆ ಅಕಾಡೆಮಿಯ ಸಹಾಯ ಪಡೆಯಬೇಕು ಎಂದರು.

ಯಡವಾರೆ ಅರೆಭಾಷೆ ಗೌಡ ಸಮಾಜದ ಗೌರವಾಧ್ಯಕ್ಷರು ಹಾಗೂ ವಕೀಲರಾದ ಪೊನ್ನಚ್ಚನ ಗಣಪತಿ ಅವರು ಮಾತನಾಡಿ ಹಿರಿಯರು ಕಿರಿಯರಿಗೆ ಭಾಷೆ-ಸಂಸ್ಕøತಿಯ ಬಗ್ಗೆ ತಿಳಿಹೇಳಿ, ಅರೆಭಾಷೆಯನ್ನು ಉಳಿಸಿ ಬೆಳೆಸಲು ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಗೌಡ ಸಮಾಜದ ಅಧ್ಯಕ್ಷರಾದ ಬಾರನ ಭರತ್ ಕುಮಾರ್ ಅವರು ಮಾತನಾಡಿ ಮುಂದೆ ನಮ್ಮ ಸಮಾಜದ ವತಿಯಿಂದ ಅಕಾಡೆಮಿ ಸಹಯೋಗದೊಂದಿಗೆ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ ಅರೆಭಾಷಿಕರನ್ನು ಒಟ್ಟು ಗೂಡಿಸಲು ಪ್ರಯತ್ನ ನಡೆಸುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಬಾರನ ಗ್ರೀಷ್ಮ ಭರತ್ ಅವರಿಗೆ ಚೆರಿಯಮನೆ ರಾಮಪ್ಪ ನೀಡಿದ ನಗದು ಪುರಸ್ಕಾರ ಹಾಗೂ ಹತ್ತನೆ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ನಂಗಾರು ವೈಷ್ಣವಿ ಅವರಿಗೆ ಕಾಳೇರಮ್ಮ ಸಾವಿತ್ರಿ ಅವರು ನೀಡಿದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

WhatsApp

Join Now

Telegram

Join Now

Instagram

Join Now