--Ads--

ಹಣದ ವಿಚಾರಕ್ಕೆ ಸ್ನೇಹಿತನ ಕೊಲೆ: ಇಬ್ಬರು ಬಂಧನ

On: December 29, 2024 12:42 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಹಣದ ವಿಚಾರಕ್ಕೆ ಸ್ನೇಹಿತನ ಕೊಲೆ: ಇಬ್ಬರು ಬಂಧನ

ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ: ಮೂರು ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ಹಣದ ವಿಚಾರವಾಗಿ ಗೆಳೆಯರಿಂದಲೇ ಕೊಲೆಯಾದ ಪ್ರಕರಣ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಶೆಟ್ಟಿಹಳ್ಳಿ ನಿವಾಸಿ ದೇವರಾಜು (45) ಕೊಲೆಯಾದ ವ್ಯಕ್ತಿ. ಈ ಪ್ರಕರಣವನ್ನು ಭೇದಿಸಿರುವ ಪೊಲೀಸರು, ರಾಜ್‌ಕುಮಾ‌ರ್ ಮತ್ತು ಅನಿಲ್ ಎಂಬುವರನ್ನು ಬಂಧಿಸಿದ್ದಾರೆ.

ಉದ್ಯಮಿ ದೇವರಾಜು ಮಾಡುತ್ತಿದ್ದ ವ್ಯವಹಾರದಲ್ಲಿ ರಾಜ್‌ಕುಮಾರ್ ಜೊತೆಗಾರನಾಗಿದ್ದ. ವ್ಯವಹಾರಕ್ಕೆಂದು ಸುಮಾರು 70 ಲಕ್ಷ ಹಣವನ್ನ
ರಾಜ್‌ಕುಮಾ‌ರ್, ದೇವರಾಜು ಬಳಿಯಿಂದ ಪಡೆದಿದ್ದ. ಈ ಹಣವನ್ನು ವಾಪಸ್ ಕೊಡುವಂತೆ ದೇವರಾಜು ಪದೇ ಪದೆ ಕೇಳುತ್ತಿದ್ದ. ಇದರಿಂದ ರಾಜ್ ಕುಮಾರ್, ದೇವರಾಜುನನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಅದರಂತೆ ಅಕ್ಟೋಬರ್ 14ರಂದು ದೇವರಾಜುನ ಮನೆಗೆ ಬಂದ ರಾಜ್ ಕುಮಾರ್, ಹಣ ಕೊಡುವುದಾಗಿ ಹೇಳಿ ಕಾರಿನಲ್ಲಿ ಗೌರಿಬಿದನೂರು ಕಡೆಗೆ ಕರೆದುಕೊಂಡು ಹೋಗಿ ಸ್ನೇಹಿತರ ಜೊತೆ ಸೇರಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಶವವನ್ನು ದೊಡ್ಡಬಳ್ಳಾಪುರ ಹೊರ ವಲಯದ ಇನ್ಫೋಸಿಟಿ ಯಲ್ಲಿರುವ ತನ್ನ ನಿವೇಶನದಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದ. ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಶವವನ್ನು ಗುಂಡಿಯಿಂದ ಹೊರ ತೆಗೆದು ಡ್ರಮ್‌ನಲ್ಲಿ ಹಾಕಿ ಸುಟ್ಟು ಹಾಕಿದ್ದ. ತದನಂತರ ಅರೆಬರೆಯಾಗಿ ಸುಟ್ಟ ಶವವನ್ನು ಮಧುರೆ ಕೆರೆಗೆ ಎಸೆದು ತಾನಗೇನು ಗೊತ್ತೇ ಇಲ್ಲ ಎಂಬುವಂತೆ ದೇವರಾಜು ಕುಟುಂಬಸ್ಥರೊಂದಿಗೆ ಸೇರಿ ಹುಡುಕಾಟದ ನಾಟಕವಾಡಿದ್ದ ಎಂದು ವಿವರಿಸಿದರು. ಮೃತ ದೇವರಾಜು ಕುಟುಂಬಸ್ಥರು ಅಕ್ಟೋಬರ್ 17ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆಗಿಳಿದ ಪೊಲೀಸರು, ರಾಜ್‌ಕುಮಾರ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ತಪೊಪ್ಪಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.

&&&&&&&&&&&&&&&&&&&&&&&&&&

ಹೊನ್ನ ದೀವಿಗೆ

ನೀನು ಹಚ್ಚಿದ ಬೆಳಕಲಿ
ನಡೆವೆ ನಾನು ಸುಮ್ಮನೆ
ನಿನ್ನ ಹೆಜ್ಜೆಯ ಗುರುತಲಿ
ಮರೆವೆ ನಾನು ನನ್ನನೆ

ನೊಂದ ಮನದ ಕಂಬನಿ
ನೀನೆ ತಾನೆ ಒರೆಸಿದೆ
ಬಾಳ ನೌಕೆಯ ಮುಂದಕೆ
ನೀನೆ ತಾನೆ ನಡೆಸಿದೆ

ಜೀವ ಭಾವದ ಸ್ಪಂದನೆ
ಸ್ಫುರಿಸಿದೆ ಹೊಸ ಕಲ್ಪನೆ
ಸುಪ್ತ ಮನಸಿನ ಕಾಮನೆ
ನವ ವಸಂತದ ಸೂಚನೆ

ಮೋಡ ಮುಸುಕಿದ ಹಾದಿಗೆ
ಹೊನ್ನ ದೀವಿಗೆ ತೋರಿದೆ
ದಾರಿ ಕಾಣದ ಪಥದಲಿ
ಭವ್ಯ ಸೇತುವೆ ಕಟ್ಟಿದೆ

ಬಣ್ಣ ಕಳೆದಿಹ ಲೋಕದೆ
ನೀನೆ ಬೆರಗು ತುಂಬಿದೆ
ಕಂಡ ಕನಸಿನ ತೇರಿಗೆ
ಬಂದು ಒಲವಲಿ ಸೇರಿದೆ

ರಾಧಿಕಾ ವಿಶ್ವ ನಾಥ್ ,ಮಡಿಕೇರಿ

WhatsApp

Join Now

Telegram

Join Now

Instagram

Join Now