--Ads--

ಕನ್ನಡ ಪರಂಪರೆಯನ್ನು ಉಳಿಸಲು ಸರ್ಕಾರ ಬದ್ದವಾಗಿದೆ: ಸಚಿವ ಕೆ ಎಚ್ ಮುನಿಯಪ್ಪ 

On: April 12, 2025 6:17 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಕನ್ನಡ ಪರಂಪರೆಯನ್ನು ಉಳಿಸಲು ಸರ್ಕಾರ ಬದ್ದವಾಗಿದೆ: ಸಚಿವ ಕೆ ಎಚ್ ಮುನಿಯಪ್ಪ

ಕನಸವಾಡಿ ದೊಡ್ಡಬಳ್ಳಾಪುರ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ . ಏಪ್ರಿಲ್ 12 : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 26 ನೇ ಕನ್ನಡಸಾಹಿತ್ಯ ಸಮ್ಮೇಳನದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆಹೆಚ್ ‌ಮುನಿಯಪ್ಪ ರವರು ಭಾಗವಹಿಸಿದರು.

ನಂತರ ಮಾತನಾಡಿದ ಸಚಿವರು ಕನ್ನಡಭಾಷೆಯನ್ನು ಉಳಿಸಿ ಬೆಳೆಸಲು ಈ ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಲಿದೆ. ಕನ್ನಡದದ ದಾರ್ಶನಿಕ ಕವಿಗಳಾದ ರನ್ನ ,ಪೊಂಪ, ಕುವೆಂಪು ಹಾಗೂ ಜ್ಞಾನ ಪೀಠ ಪುರಸ್ಕೃತ ರಾದ ಮಾಸ್ತಿವೆಂಕಟೇಶ ಅಯ್ಯಂಗಾರ್, ದಾರಾಬೇಂದ್ರೆ,ಚಂದ್ರಶೇಖರ ಕಂಬಾರ ,ಕುವೆಂಪು,ಮುಂತಾದ ಕವಿಗಳು ಈ ನಾಡಿಗೆ ತನ್ನದೇ ಆದ ಕನ್ನಡ ಸೇವೆ ಮಾಡುವ ಮೂಲಕ ಅವರ ಸಾಹಿತ್ಯ ಹಾಗೂ ಕವನಗಳನ್ನು ಈ ನಾಡಿನ ಜನತೆಗೆ ಹಾಗೂ ಮುಂದಿನ ಪೀಳಿಗೆಗೆ ನೀಡಿದ್ದಾರೆ .

ಕನ್ನಡದ ಇತಿಹಾಸ ಈ ರಾಷ್ಟ್ರದ ಭಾಷೆಯಾಗಿದ್ದು ಕನ್ನಡದ ಶಾಸನಗಳು ಐತಿಹಾಸಿಕವಾಗಿ ಹೆಸರುವಾಸಿಯಾಗಿವೆ
ಈ ನೆಲ, ಜಲ,ಭಾಷೆ, ನಾಡಿಗಾಗಿ ನಾವು ಸದಾ ಜೊತೆಯಾಗಿ ಕೆಲಸಮಾಡಬೇಕಿದೆ ಎಂದರು.

ಕನ್ನಡದ ಪರಂಪರೆಯನ್ನು ಉಳಿಸಲು ನಮ್ಮ ಸರ್ಕಾರ ಬದ್ದವಾಗಿದ್ದು ಈ ಕನ್ನಡ ಸಾಹಿತ್ಯ ಪರಿಷತ್ತು ಗೆ ಎಲ್ಲಾರೀತಿಯ ಸಹಕಾರ ಹಾಗೂ ನೆರವನ್ನು ಕಲ್ಪಿಸಲು ಪ್ರಾಮಣಿಕ ಪ್ರಯತ್ನ ವನ್ನು ಮಾಡಲಾಗುವುದು ಎಂದರು.

ಪ್ರತಿಯೊಬ್ಬರಲ್ಲಿ ಕನ್ನಡದ ಬಗ್ಗೆ ಪ್ರತೀ ಬರಬೇಕು ಮತ್ತು ನಾವು ಈ ಭಾಷೆಯನ್ನು ಹೆಚ್ಚಾಗಿ ಬಳಸುವುದಲ್ಲದೆ ನಮ್ಮ ಮುಂದಿನ ಪೀಳಿಗೆಯ ಜನ ಈ ಭಾಷೆಯನ್ನು ಉಳಿಸಿ ಬೆಳೆಸಲು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದು ಸೂಕ್ತವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಟಿ.ಕೆಂಪಣ್ಣ, ಹಿರಿಯ ಸಾಹಿತಿಗಳ ಚನ್ನಬಸಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅದ್ಯಕ್ಷ ರಾಜಣ್ಣ, ತಹಶಿಲ್ದಾರ್ ವಿಭಾ ರಾಥೋಡ್, ಡಿವೈಎಸ್ಪಿ ರವಿ, ಕಾರ್ಯ ನಿರ್ವಹಣಾಧಿಕಾರಿ ಮುನಿರಾಜು,ಹಾಗೂ ಕನ್ನಡಪರ ಚಿಂತಕರಾದ ಚುಂಚೇಗೌಡ,ರಾಮಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now