ವಿಜಯ ದರ್ಪಣ ನ್ಯೂಸ್….
ಕರಾಟೆ ಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಭಾರತದ ಕೀರ್ತಿ ಬೆಳಗಲಿ : ಸೋಮತ್ತನಹಳ್ಳಿ ಚಂದ್ರು

ದೇವನಹಳ್ಳಿ : ಕರಾಟೆ ಆತ್ಮ ರಕ್ಷಣೆಗೆ ಇರುವ ಪ್ರಮುಖ ಪಂದ್ಯಾವಳಿಯಾಗಿದ್ದು, ಕಲಿಕೆಯ ಜೊತೆಗೆ ಇಂತಹ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಮಕ್ಕಳಲ್ಲಿ ಬುದ್ಧಿಶಕ್ತಿ ಏಕಾಗ್ರತೆ ಶಿಸ್ತು ಹೆಚ್ಚಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಸುವರ್ಣ ಜನಶಕ್ತಿ ವೇದಿಕೆಯ ಜಿಲ್ಲಾಧ್ಯಕ್ಷ ಸೋಮತ್ತನಹಳ್ಳಿ ಚಂದ್ರು ಅವರು ತಿಳಿಸಿರುತ್ತಾರೆ.
ದೇವನಹಳ್ಳಿ ಪಟ್ಟಣದ ಆನಂದ್ ಅವರ ಮನೆಯಲ್ಲಿ ಮಲೇಷ್ಯಾದಲ್ಲಿ ನಡೆಯುತ್ತಿರುವ ಮುಕ್ತ ಕರಾಟೆ ಚಾಂಪಿಯನ್ಶಿಪ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಭಾರತದ 6 ಜನ ಕರಾಟೆ ಪಟುಗಳಾದ ಸೂರಜ್ ಗೌಡ, ಶ್ರೀ ವರ್ಷಿಣಿ, ಪವೀಣ್, ನಿತ್ಯ, ವಿನಯ್ ಯಾದವ್, ದಿಗಂತ್ ತೆರಳುತಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು ಕನ್ನಡ ಪರ ಹೋರಾಟಗಾರರ ಮಕ್ಕಳಾಗಿ ತಾಲೂಕು ಜಿಲ್ಲೆ ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಕರಾಟೆಯ ಪಂದ್ಯಾವಳಿಗೆ ಸ್ಪರ್ಧೆ ಮಾಡಲು ತೆರುಳುತ್ತಿರುವುದು ಪ್ರಶಂಸನೀಯ. ವಿದೇಶದಲ್ಲಿ ಸ್ಪರ್ಧೆ ಮಾಡುವ ಕ್ರೀಡಾಪಟುಗಳಿಗೆ ಸುವರ್ಣ ಜನಶಕ್ತಿ ವೇದಿಕೆಯಿಂದ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸುವರ್ಣ ಜನಶಕ್ತಿ ವೇದಿಕೆ ಪದಾಧಿಕಾರಿಗಳಾದ ಗಂಗಾಧರ್, ಶ್ರೀನಿವಾಸ್ ಮೂರ್ತಿ, ಮಂಜಣ್ಣ, ರಾಜಣ್ಣ, ವರುಣ್, ಬಾಲ ಮುರಳಿ, ಹೆಮಾಂತ್, ಕ್ರೀಡಾಭಿಮಾನಿಗಳಾದ ಮುತ್ತು, ಪ್ರಶಾಂತ್, ವೆಂಕಟೇಶ್ ಇತರರು ಹಾಜರಿದ್ದರು.










