ಹಸಿರೆ ಉಸಿರು ಟ್ರಸ್ಟ್” ವತಿಯಿಂದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ
ವಿಜಯ ದರ್ಪಣ ನ್ಯೂಸ್….
ಹಸಿರೆ ಉಸಿರು ಟ್ರಸ್ಟ್” ವತಿಯಿಂದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ

ಶಿಡ್ಲಘಟ್ಟ : ಬೆಂಗಳೂರು ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ದಿನಾಂಕ “ಹಸಿರೆ ಉಸಿರು ಟ್ರಸ್ಟ್” ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವು ಅತ್ಯಂತ ವೈಭವದಿಂದ ಜರುಗಿತು.
ಈ ವೇದಿಕೆಯಲ್ಲಿ ಚಲನಚಿತ್ರ ನಟ ಹಾಗೂ ಗಾಯಕ ಸಿ.ಎನ್. ಮುನಿರಾಜ್ ರವರಿಗೆ ಅವರ ಕಲಾ ಸೇವೆಯನ್ನು ಪರಿಗಣಿಸಿ, ರಾಜ್ಯ ಮಟ್ಟದ “ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ” ಪ್ರಶಸ್ತಿ ನೀಡಿ ಸನ್ಮಾನದೊಂದಿಗೆ ಗೌರವಿಸಲಾಯಿತು ಕಾರ್ಯಕ್ರಮದ ಕಲಾವಿದರಾದ ಸಿ.ಎನ್.ಮುನಿರಾಜ್, ಕೃಷ್ಣ ಹಾಗೂ ಗಾಯಕಿ ಆಶಾರಾಣಿ ಅವರು ಜಂಟಿಯಾಗಿ ನಡೆಸಿಕೊಟ್ಟ ಗಾಯನ ಸುಧೆಯು ಪ್ರೇಕ್ಷಕರ ಮನ ಗೆದ್ದಿತು.

ಹಸಿರೇ ಉಸಿರು ಟ್ರಸ್ಟಿನ ಅಧ್ಯಕ್ಷ ಡಾ.ಶ್ರೀನಿವಾಸ್ ಮೂರ್ತಿ (ಬೆಟ್ಟ ಹಲಸೂರು) ಅವರ ನೇತೃತ್ವದಲ್ಲಿ ಈ ಇಡೀ ಕಾರ್ಯಕ್ರಮವು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸಲ್ಪಟ್ಟಿತ್ತು
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿಡ್ಲಘಟ್ಟ ನಗರಸಭಾ ಮಾಜಿ ಸದಸ್ಯ ಎಸ್.ಎ.ನಾರಾಯಣಸ್ವಾಮಿ, ವೈದ್ಯ ಆಂಜಿನಪ್ಪ, ರೈತ ಸಂಘದ ಅಧ್ಯಕ್ಷ ಶೆಟ್ಟಿಹಳ್ಳಿ ರವಿಪ್ರಕಾಶ್, ಮಂಜುನಾಥ್ (ಪೋಟೋ) ಹಾಗೂ ಕೀಸರ್ ವೆಂಕಟೇಶ್ ಭಾಗವಹಿಸಿ ಕಾರ್ಯಕ್ರಮಕ್ಕೆ ಅವರು ಶುಭ ಹಾರೈಸಿದರು.
