ತಂದೆ ತಾಯಿ ಸೇವೆ ಮಾಡುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಕರ್ತವ್ಯ : ಶ್ರೀ ಶ್ರೀ ಮಂಗಳಾನಂದನಾಥಸ್ವಾಮೀಜಿ 

ವಿಜಯ ದರ್ಪಣ ನ್ಯೂಸ್……

ತಂದೆ ತಾಯಿ ಸೇವೆ ಮಾಡುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಕರ್ತವ್ಯ : ಶ್ರೀ ಶ್ರೀ ಮಂಗಳಾನಂದನಾಥಸ್ವಾಮೀಜಿ

 

ಶಿಡ್ಲಘಟ್ಟ : ತಂದೆ ತಾಯಿಗಿಂತ ಮಿಗಿಲಾದ ದೇವರಿಲ್ಲ ಅವರ ಸೇವೆಗೈದರೆ ಪರಮೇಶ್ವರನು ಮೆಚ್ಚಲಿದ್ದು ಅವರ ಮಾರ್ಗದರ್ಶಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಕರ್ತವ್ಯ ಎಂದು ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀ ಶ್ರೀ ಮಂಗಳಾನಂದನಾಥಸ್ವಾಮೀಜಿ ತಿಳಿಸಿದರು.

ನಗರದ ಹನುಮಂತಪುರ ಗೇಟ್‌ನಲ್ಲಿರುವ ಬಿ.ಜಿ.ಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಮಾತಾ ಪಿತೃ ವಂದನಾ” ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಮಾತನಾಡಿದರು.

ದೈಹಿಕ ಶುದ್ದಿ ಜತೆಗೆ ಮಾನಸಿಕ ಶುದ್ದಿ ಕೂಡ ಪ್ರತಿ ಮಗುವಿನ ತಂದೆ- ತಾಯಂದಿರು ಕೂಡ ತಮ್ಮ ಮಕ್ಕಳಿಗೆ ಮಾಡಿರುತ್ತಾರೆ ಆ ಋಣವನ್ನು ತೀರಿಸುವುದು ಪ್ರತಿ ಮಗುವಿನ ಕರ್ತವ್ಯ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವುದೇ ನಮ್ಮ ಸಂಸ್ಥೆಯ ಮೂಲ ಉದ್ದೇಶ ಎಂದು ಹೇಳಿದರು.

ಯಾವ ತಾಯಿಯು ತನ್ನ ಮಗುವಿನ ಮಲ ಮೂತ್ರವನ್ನು ಸ್ವಚ್ಛ ಮಾಡಲು ಹಿಂಜರಿಯುವುದಿಲ್ಲ, ಬೇಸರ ಮಾಡಿಕೊಂಡಿಲ್ಲ ಮಗುವಿನ ದೇಹ ಮತ್ತು ಮನಸ್ಸು ಎರಡನ್ನೂ ಸ್ವಚ್ಛಗೊಳಿಸುವವರೆಂದರೆ ಅದು ತಾಯಿ ಮಾತ್ರ ಎಂದರು.
ನಾವು ಚಿಕ್ಕವರಾಗಿದ್ದಾಗ ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಚ್ಛಗೊಳಿಸುವ ಹೆತ್ತವರ ಋಣವನ್ನು ನಾವು ಎಂದಿಗೂ ಮರೆಯಬಾರದು ಅವರು ನಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳಬೇಕು, ಅವರು ತೋರಿದ ಮಾರ್ಗದಲ್ಲಿ ನಡೆಯುವುದರಿಂದ ಅವರ ಋಣ ತೀರುತ್ತದೆ ಎಂದರು.

 

ನಗರಸಭೆ ಪೌರಾಯುಕ್ತೆ ಜಿ.ಅಮೃತ ಗೌಡ ಮಾತನಾಡಿ,
ವಿದ್ಯಾರ್ಥಿಗಳು ಮೊಬೈಲ್ ಅಥವಾ ಇತರೆ ಆಕರ್ಷಣೆಗಳಿಗೆ ಒಳಗಾಗದೆ ಓದಿನ ಮೇಲೆ ಮಾತ್ರ ಗಮನ ಹರಿಸಬೇಕು ,
ನಾವು ಪಡೆದ ಶಿಕ್ಷಣ ಮಾತ್ರ ನಮ್ಮ ಉತ್ತಮ ಬದುಕನ್ನು ರೂಪಿಸಬಲ್ಲದು ,ಉತ್ತಮ ಮತ್ತು ಉನ್ನತ ಸ್ಥಾನಮಾನ ತಂದುಕೊಡಬಲ್ಲದು ಹಾಗಾಗಿ ಎಲ್ಲರೂ ಕೂಡ ಉತ್ತಮ ಶಿಕ್ಷಣ ಪಡೆದುಕೊಳ್ಳಿ ಎಂದು ಅವರು ಮನವಿ ಮಾಡಿದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎನ್.ಶಿವರಾಮ ರೆಡ್ಡಿ ಮಾತನಾಡಿ,ಯಾವುದನ್ನು ಕಲಿಯ ಬಾರದು, ತಿಳಿದುಕೊಳ್ಳಬಾರದೆಂಬ ವಿವೇಚನೆ ನಿಯಂತ್ರಣದಲ್ಲಿ ಇರುವುದಿಲ್ಲ ಈ ಹಂತದಲ್ಲಿ ಹೆತ್ತವರು, ಶಿಕ್ಷಕರಿಂದ ಉತ್ತಮ ಮಾರ್ಗದರ್ಶನ, ತಿಳಿವಳಿಕೆ ದೊರೆತರೆ ಅವರು ಬದುಕಿನಲ್ಲಿ ಎಂದಿಗೂ ಹಾದಿ ತಪ್ಪುವುದಿಲ್ಲ ಎಂದರು.

ಹದಿ ಹರೆಯದ ವಯಸ್ಸಿನ ಮಕ್ಕಳ ಮನಸ್ಸು ಚಂಚಲವಾಗಿರುತ್ತದೆ ನೋಡಿದ್ದೆಲ್ಲವನ್ನೂ ಕೇಳಿದ್ದೆಲ್ಲವನ್ನೂ ತಿಳಿದುಕೊಳ್ಳುವ, ಅನುಭವಿಸುವ ಆತುರ ಕಾತುರ ಇರಲಿದೆ ಯಾವುದನ್ನು ಕಲಿಯಬೇಕು ಎಂಬುದನ್ನು ತಿಳಿದುಕೊಳ್ಳಬೇಕು
ಎಂದು ಹೇಳಿದರು.

ಈ ವೇಳೆ ಎಸೆಸೆಲ್ಸಿ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು, ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳು ಭಾವುಕರಾದರು,ಶ್ರೀಗಳು ಎಲ್ಲಾರಿಗೂ ಆಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ SJCIT ಪ್ರಾಂಶುಪಾಲ ಟಿ.ರಾಜು ,ಬಿಜಿಎಸ್ ಪ್ರಾಂಶುಪಾಲ ಕೆ.ಮಹದೇವ್‌, ಮಠದ ಭಕ್ತ ಜೆ.ಎಸ್.ವೆಂಕಟಸ್ವಾಮಿ ಹಾಜರಿದ್ದರು.