ಉತ್ತಮ ಮಳೆ ಬೆಳೆಯಾಗಿ ರೈತರಿಗೆ ಸಮೃದ್ಧಿ ಸಿಗಲಿ: ರಾಜೀವ್ ಗೌಡ
ವಿಜಯ ದರ್ಪಣ ನ್ಯೂಸ್…
ಉತ್ತಮ ಮಳೆ ಬೆಳೆಯಾಗಿ ರೈತರಿಗೆ ಸಮೃದ್ಧಿ ಸಿಗಲಿ: ರಾಜೀವ್ ಗೌಡ

ಶಿಡ್ಲಘಟ್ಟ : ಪುರಾಣ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯದ ಭಾಗದಲ್ಲಿ ಹೆಚ್ಚಾಗಿ ರೈತಾಪಿ ಸಮುದಾಯದವರಿದ್ದು ದೇವರ ಕೃಪೆಯಿಂದ ಈ ಬಾರಿ ಉತ್ತಮ ಮಳೆ ಬೆಳೆಯಾಗಿ ರೈತರಿಗೆ ಸಮೃದ್ಧಿ ಸಿಗಲಿ ಎಂದು ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಶುಭ ಹಾರೈಸಿದರು .
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಪುರಾಣ ಪ್ರಸಿದ್ದ ಶ್ರೀ ಬ್ಯಾಟರಾಯಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವವು ಬಹಳ ವಿಜೃಂಭಣೆಯಿಂದ ನಡೆದಿದ್ದು ರಾಜೀವ್ ಗೌಡರು ಕುಟುಂಬ ಸಮೇತ ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ಬ್ರಹ್ಮ ರಥೋತ್ಸವದ ಪೂಜಾ ಕಾರ್ಯಗಳಿಗೆ 60 ಸಾವಿರ ರೂ.ಗಳ ಮೊತ್ತದ ಚೆಕ್ ವಿತರಣೆ ಮಾಡಿ ಬ್ರಹ್ಮ ರಥೋತ್ಸವಕ್ಕೆ ಸುಗಮವಾಗಿ ನಡೆಯಲಿ ಎಂದು ಶುಭ ಕೋರಿದರು.
ಪುರಾಣ ಪ್ರಸಿದ್ಧ ಬ್ಯಾಟರಾಯಸ್ವಾಮಿ ದೇವಾಲಯದ
ಅಭಿವೃದ್ಧಿಗೆ ಹತ್ತು ಲಕ್ಷ ರೂಪಾಯಿಗಳ ಆರ್ಥಿಕ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾರಾಜೀವ್ ಗೌಡ ಮಾತನಾಡಿ, ದೈವ ಕಾರ್ಯ ಮಾಡುವುದರಿಂದ ಇಡೀ ಸಮಾಜಕ್ಕೆ ಉತ್ತಮ ಪ್ರಭಾವ ಬೀರುತ್ತದೆ. ಚಿಕ್ಕದಾಸರಹಳ್ಳಿ ಬ್ಯಾಟರಾಯ ಸ್ವಾಮಿ ಬ್ರಹ್ಮ ರಥೋತ್ಸವದಲ್ಲಿ ನಾವು ಭಾಗವಹಿಸಿ ದೇವರ ಸೇವೆ ಮಾಡಲು ಅವಕಾಶ ಕಲ್ಪಿಸಿದ ದೇವಾಲಯ ಕಮಿಟಿಯವರಿಗೆ ಧನ್ಯವಾದಗಳು ತಿಳಿಸಿದರು.
ದೇವಾಲಯ ಸಮಿತಿಯ ಅಧ್ಯಕ್ಷ ಬ್ಯಾಟರಾಯಶೆಟ್ಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಗೌಡರು ಶಾಸಕರಾಗಿ ಆಯ್ಕೆಯಾಗಿ ಈ ಕ್ಷೇತ್ರದ ಜನತೆಯಾ ಸೇವೆ ಸಲ್ಲಿಸಲು ಈ ಬ್ಯಾಟರಾಯ ಸ್ವಾಮಿ ಅವಕಾಶ ಕಲ್ಪಿಸಿಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ ಬಸವಾಪಟ್ಟಣ ಬೈರೇಗೌಡ, ಮುಖಂಡರಾದ ಮುತ್ತೂರು ವೆಂಕಟೇಶ್ , ಎಲ್.ಮಧುಸೂದನ್, ವೆಂಕಟೇಶ್, ಗೋಕುಲ್, ಮಂಜುನಾಥ್, ತೊಟ್ಲಗಾನಹಳ್ಳಿ ಮನುಗೌಡ, ವಕೀಲ ನರೇಂದ್ರ, ದೇವರಾಜ್, ಕೆ. ಮುನೇಗೌಡ, ಕಾಂಗ್ರೆಸ್ ಮುಖಂಡರು ಹಾಗು ರಾಜೀವ್ ಗೌಡರ ಅಭಿಮಾನಿಗಳು ಪಾಲ್ಗೊಂಡಿದ್ದರು.
