ವಿಜಯ ದರ್ಪಣ ನ್ಯೂಸ್…..
ಜಗದೀಶ್ ನಾಯ್ಕ್ ರವರ ಶ್ರಮದ ನೆಲಕೆ ಧನ್ಯಧಾರೆ ಎಂಬ ಕವನ ಸಂಕಲನ ಬಿಡುಗಡೆ

ಜಗದೀಶ್ ನಾಯ್ಕ್ ರವರ ಶ್ರಮದ ನೆಲಕೆ ಧನ್ಯಧಾರೆ ಎಂಬ ಕವನ ಸಂಕಲನ ಬಿಡುಗಡೆಯ ಸಮಾರಂಭವನ್ನು ಕುಣಿಗಲ್ ಸಮೀಪದ ಭಕ್ತರಹಳ್ಳಿ ದಯಾ ಭವನದಲ್ಲಿ ಮಾರ್ಚ್ 15 ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ರಂಗ ವಿಜಯಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಾಲೂರು ವಿಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಾದ ಭಕ್ತರಹಳ್ಳಿಯ ದಯಾ ಭವನ ಮತ್ತು ಸ್ನೇಹ ಕಲಾ ಪ್ರತಿಷ್ಠಾನ ಸಹಯೋಗದಲ್ಲಿ ರಂಗ ವಿಜಯಾ ಟ್ರಸ್ಟ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ
ವೆಗೋಲಾ ಇಂಡಿಯಾ ಕಂಪನಿ ಪ್ರೈವೇಟ್ ಲಿಮಿಟೆಡ್ ನ ಮಾನವ ಸಂಪನ್ಮೂಲ ವಿಭಾಗದ ಎಜಿಎಂ ಆಗಿ ಕೆಲಸ ನಿರ್ವಹಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಗಂಗಾವಳಿ ಮೂಲದವರಾದ ಜಗದೀಶ್ ನಾಯ್ಕ್ ರವರು ಕವಿ ಹಾಗೂ ನಾಟಕಕಾರರಾಗಿ ಪರಿಚಿತರಾಗಿದ್ದಾರೆ ಅವರು ತಮ್ಮ 21 ಕವನಗಳ ಕವನ ಸಂಕಲನ ಶ್ರಮದ ನೆಲಕೆ ಧನ್ಯಧಾರೆ ಎಂಬ ಸಂಕಲನವನ್ನು ರಂಗ ವಿಜಯಾ ಟ್ರಸ್ಟ್ ಪ್ರಕಟಿಸಿ ಬಿಡುಗಡೆ ಮಾಡುತ್ತಿದೆ.
ಈ ಸಂದರ್ಭದಲ್ಲಿ ಅವರಿಗೆ 50 ವರ್ಷ ತುಂಬಿದ ಸವಿ ನೆನಪಿಗಾಗಿ ಸುಜನ 50 ಎಂದರೆ ಸುವರ್ಣ ಸಂಭ್ರಮ ಜಗದೀಶ ನಾಯಕ ಎಂಬ ಅಡಿಬರಹದಲ್ಲಿ ಅವರ ಸುವರ್ಣ ಸಂಭ್ರಮವನ್ನು ಆಚರಿಸುತ್ತಿದೆ.
ಜೊತೆಗೆ ಕವನ ಸಂಕಲನ ಬಿಡುಗಡೆ, ಸಂವಾದ, ಕವಿಗೋಷ್ಠಿ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲು ರಂಗ ವಿಜಯಾ ಸಂಸ್ಥೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ, ಎಂದು ಅವರು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಕಾವ್ಯ ಕ್ಷೇತ್ರದಲ್ಲಿ ಮತ್ತು ನಾಟಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಾ ಬಂದಿರುವ ಜಗದೀಶ ನಾಯ್ಕ್ ಅವರ ಮೊಟ್ಟ ಮೊದಲ ಕವನ ಸಂಕಲನ ಇದಾಗಿದ್ದು ಇದರ ವಿನ್ಯಾಸವನ್ನು ಖ್ಯಾತ ನಾಟಕಕಾರ ಹಾಗೂ ದ್ರಾವಿಡ ವಿಶ್ವವಿದ್ಯಾನಿಲಯದ ಜಾನಪದ ಚಿತ್ರಕಲಾ ವಿಷಯದ ಬಗ್ಗೆ ಪ್ರಬುದ್ಧ ಪ್ರಬಂದ ಮಂಡಿಸಿ ಡಾಕ್ಟರೇಟ್ ಪಡೆದಿರುವ ಡಾ. ಟಿ. ಲಕ್ಷ್ಮೀನಾರಾಯಣ್ ಮಾಡಿದ್ದಾರೆ.
ಜೊತೆಗೆ ಅವರ ಅಭಿನಂದನಾ ಗ್ರಂಥಕ್ಕೂ ಅವರೇ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಕುಣಿಗಲ್ ನ ಅನೇಕ ಮಹನೀಯರು ಲೇಖನಗಳನ್ನು ಬರೆದಿದ್ದಾರೆ. ಈ ಕಾರ್ಯಕ್ರಮ ಮಾರ್ಚ್ 15 ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೂ ನಡೆಯಲಿದೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಮ್ಮ ನಾಡಿನ ಹೆಮ್ಮೆಯ ಏಳು ಭಾಷೆಗಳ ನಟರಾದ ಶರತ್ ಲೋಹಿತಾಶ್ವ, ಹಾಸ್ಯ ನಟರಾಗಿ ತಮ್ಮದೇ ಛಾಪನ್ನು ಮೂಡಿಸಿರುವ ತಬಲ ನಾಣಿ ಹಾಸ್ಯ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಖ್ಯಾತರಾದ ಗೀತಾ ರಾಘವೇಂದ್ರ ಹಾಗೂ ಮಂಜು ದೊಡ್ಡಿರಪ್ಪ ಮುಂತಾದವರು ಭಾಗವಹಿಸಲಿದ್ದಾರೆ, ಎಂದು ರಂಗ ವಿಜಯಾ ಟ್ರಸ್ಟ್ ತಿಳಿಸಿದೆ.
ಹತ್ತು ಹಲವು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕವಿಯೊಂದಿಗೆ ಸಂವಾದ, ಕವಿತಾ ವಾಚನ, ರಂಗ ವಿಜಯಾ ಟ್ರಸ್ಟ್ ನ ವತಿಯಿಂದ ಪ್ರಾರಂಭವಾಗುತ್ತಿರುವ ಕಾಮಿಡಿ ಕಟ್ಟೆ ಯುಟ್ಯೂಬ್ ಚಾನೆಲ್ ನ ಮೊದಲ ಕಂತನ್ನು ಆ ದಿನ ಬಿಡುಗಡೆ ಮಾಡಲಾಗುವುದು. ಇದೇ ರೀತಿಯ ಅನೇಕ ಕಾರ್ಯಕ್ರಮಗಳು ಆ ದಿನ ನಡೆಯಲಿದೆ ಎಂದು ಮಾಲೂರು ವಿಜಿ ತಿಳಿಸಿದ್ದಾರೆ.







