--Ads--

ಯೋಗ ಭಾರತ ದೇಶದ ಭಾಗ್ಯ: ಜೀಮಾರಹಳ್ಳಿ ರಂಗಸ್ವಾಮಿ

On: March 24, 2026 1:48 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಯೋಗ ಭಾರತ ದೇಶದ ಭಾಗ್ಯ: ಜೀಮಾರಹಳ್ಳಿ ರಂಗಸ್ವಾಮಿ

ತಾಂಡವಪುರ ಮಾರ್ಚ್ 24 ಯೋಗ ಭಾರತ ದೇಶದ ಭಾಗ್ಯ ಮನುಷ್ಯನಿಗೆ ಯೋಗ ಆರೋಗ್ಯ ಭಾಗ್ಯವನ್ನು ವೃದ್ಧಿಗೊಳಿಸಲಿದೆ ಎಂದು ಸುತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಜೀಮಾರಳ್ಳಿ ರಂಗಸ್ವಾಮಿ ರವರು ಅಭಿಪ್ರಾಯ ವ್ಯಕ್ತಪಡಿಸಿದರು

ಅವರು ಇಂದು ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಶ್ರೀ ಕ್ಷೇತ್ರ ಸುತ್ತೂರು ಜೆಎಸ್ಎಸ್,ಮೊರಾರ್ಜಿ ದೇಸಾಯಿ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯೋಗ ಹಾಗೂ ಆಯುಷ್ ಇಲಾಖೆ ವತಿಯಿಂದ ಆಯೋಜಿಸಿದ್ದ ಯೋಗ ಮಹೋತ್ಸವ 2026 ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಸುತ್ತೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಜಿ ಮಾರಹಳ್ಳಿ ರಂಗಸ್ವಾಮಿ ರವರು ಜೂನ್ 21ನೇ ತಾರೀಕು ದೇಶದಾದ್ಯಂತ ಆಚರಿಸುವ ವಿಶ್ವ ಯೋಗ ದಿನ ಅಂಗವಾಗಿ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಇನ್ನು 89 ದಿನಗಳು ಉಳಿದಿರುವ ಮುಂಚಿತವಾಗಿಯೇ ದೇಶಿಯ ಯೋಗ ಮಹತ್ವ ಕುರಿತು ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ನಮ್ಮ ಭಾರತ ದೇಶ ನೂರಾರು ನಿದರ್ಶನಗಳಿಗೆ ಕಾರಣವಾಗಿರುವ ಶ್ರೇಷ್ಠ ದೇಶವಾಗಿರುವ ದೇಶದಲ್ಲಿ ನಾವೆಲ್ಲ ಜನಿಸಿರುವುದೇ ನಮ್ಮ ಪುಣ್ಯ ಭಾರತ ದೇಶದಲ್ಲಿ ಜನಿಸಿದ ಈ ಯೋಗ ದೇಶವಿದೇಶದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದೆ ಅಂತ ಯೋಗದ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ವಿಶ್ವದಾದ್ಯಂತ ಆಚರಿಸುವ ಯೋಗ ದಿನಾಚರಣೆ ಪ್ರಯುಕ್ತವಾಗಿ ಶ್ರೀ ಕ್ಷೇತ್ರದಲ್ಲಿ ಶ್ರೀಗಳ ಆಶೀರ್ವಾದದಿಂದ ಈ ಕಾರ್ಯಕ್ರಮ ನಮ್ಮ ಸುತ್ತೂರಿನಲ್ಲಿ ನಡೆಯುತ್ತಿರುವುದು ನಮ್ಮ ಸೌಭಾಗ್ಯವೇ ಸರಿ.

ಯೋಗ ನಮ್ಮ ಭಾರತ ದೇಶದ ಸನಾತನ ಕಲೆಯಿದು ಇಂದು ಹಲವಾರು ರೋಗರು ಜನಗಳಿಗೆ ಮನುಷ್ಯರು ತುತ್ತಾಗಿ ತಮ್ಮ ತಮ್ಮ ಜೀವನವನ್ನು ಅತಿ ಚಿಕ್ಕ ವಯಸ್ಸಿಗೆ ಕೊನೆಗೊಳಿಸಿಕೊಳ್ಳುತ್ತಿರುವುದು ಪ್ರತಿನಿತ್ಯ ನಾವೆಲ್ಲ ಕಾಣುತ್ತಿದ್ದೇವೆ ಅದಕ್ಕೆ ಮುಖ್ಯವಾಗಿ ಇಂದಿನ ಆಹಾರ ಪದ್ಧತಿ , ಜೀವನದ ರೀತಿ ನೀತಿಗಳಿಂದ ಹಾಗಾಗಿ ಯೋಗ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ಎಂದು ಸಹಸ್ರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜ ಹಿರಿಯರು ತಿಳಿಸಿಕೊಟ್ಟಿರುವ ಈ ಯೋಗವನ್ನ ಪ್ರತಿನಿತ್ಯ ಪ್ರತಿಯೊಬ್ಬರು ಮಾಡುವುದರಿಂದ ಆರೋಗ್ಯವಾಗಿ ಮಾನಸಿಕವಾಗಿ ದೈಹಿಕವಾಗಿ ಸದೃಢವಾಗಿ ಮಾನವ ಸಂಪನ್ಮೂಲ ಭೂಮಿಯ ಮೇಲೆ ಸ್ಥಿರವಾಗಿ ಇರಬಹುದು.

ನಮ್ಮ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜಕುಮಾರ್ ಅವರು ಕೂಡ ಅವರ ಜೀವಿತ ಕಾಲಾವಧಿಯವರೆಗೂ ಯೋಗವನ್ನ ಅಭ್ಯಾಸ ಮಾಡಿ ಪ್ರತಿದಿನ ಆರೋಗ್ಯವಾಗಿ ಚೈತನ್ಯಪೂರ್ಣವಾಗಿ ಇದ್ದದ್ದಕ್ಕೆ ಕಾರಣ ಅವರು ಯೋಗದ ಮೇಲಿದ್ದ ಪ್ರೀತಿ ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಯುವ ಜನರು ಎಲ್ಲ ನಾಗರಿಕ ಬಂಧುಗಳು ಪ್ರತಿನಿತ್ಯ ನಮ್ಮ ದೇಶಿಯ ಕಲೆ ಯೋಗವನ್ನು ಮಾಡುವುದರ ಮುಖಾಂತರ ಆರೋಗ್ಯ ಸುಧಾರಣೆ ಸಾಧ್ಯ.

ಕಾರ್ಯಕ್ರಮದಲ್ಲಿ 500ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದು ಇದರೊಟ್ಟಿಗೆ ಜೆಎಸ್ಎಸ್ ನ ರಿಜಿಸ್ಟರ್ಗಳಾದ ಡಾ. ಬಿ ಮಂಜುನಾಥ್, ಜೆಎಸ್ಎಸ್ ಕೋರ್ಡಿನೇಟರ್ ಆದ ಜಿ ಎಲ್ ತ್ರಿಪುರಾಂತಕ, ಉಪಸ್ಥಿತರಿದ್ದರು

WhatsApp

Join Now

Telegram

Join Now

Instagram

Join Now