--Ads--

ಶ್ರೀ ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಯಶಸ್ವಿಯಾಗಿ ನಡೆದ “ಹೆಣ್ಣು ಹುಟ್ಟಿದಾ ಮನೆ ಹೊನ್ನಾಗಲಿ” ಕಾರ್ಯಕ್ರಮ

On: March 24, 2026 3:38 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶ್ರೀ ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಯಶಸ್ವಿಯಾಗಿ ನಡೆದ “ಹೆಣ್ಣು ಹುಟ್ಟಿದಾ ಮನೆ ಹೊನ್ನಾಗಲಿ” ಕಾರ್ಯಕ್ರಮ

ಶ್ರೀ ಮಹಾ ತಪಸ್ವಿ ಫೌಂಡೇಶನ್(ರಿ)ಹರಿಹರ
ವತಿಯಿಂದ  ಮಾರ್ಚ್ ತಿಂಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಂಸ್ಥೆಯ ವತಿಯಿಂದ ವಿಶಿಷ್ಟ  ವಿನೂತನ ಅಭಿಯಾನವನ್ನು ಆಯೋಜಿಸಲಾಗಿತ್ತು.

“ಹೆಣ್ಣು ಹುಟ್ಟಿದಾ ಮನೆ ಹೊನ್ನಾಗಲಿ”ಎಂಬ ಶೀರ್ಷಿಕೆ ಅಡಿಯಲ್ಲಿ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳ ವರೆಗೆ ಜನಿಸಿದ ನವಜಾತ ಹೆಣ್ಣು ಶಿಶುವಿಗೆ ಒಂದು ತಿಂಗಳಿಗೆ ಆಗುವಷ್ಟು ಪ್ರತಿಷ್ಠಿತ ಹಿಮಾಲಯ ಕಂಪೆನಿಯ ಆರೋಗ್ಯ ಪೋಷಣ ಕಿಟ್ ಹಾಗೂ “ಅಬಿನಂದನಾ ಪತ್ರ” ವನ್ನು  ಫಲಾನುಭವಿಗಳಿಗೆ ಉಚಿತವಾಗಿ ನೀಡುವ ಮೂಲಕ “ಹೆಣ್ಣು ಹುಟ್ಟಿದಾ ಮನೆ ಹೊನ್ನಾಗಲಿ ” ಎಂದು ತಾಯಿ ಮತ್ತು ಮಗುವನ್ನು ಹರಸಿ ಹಾರೈಸಲಾಯಿತು.

ಈ ಒಂದು ಸುಂದರ ಅಭಿಯಾನಕ್ಕೆ ಇಂದು ಬೆಂಗಳೂರು ನಗರ ಶಾಖೆಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಸಮಾಜಮುಖಿ ಕೆಲಸಕ್ಕೆ ಕೈಜೋಡಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ತಿಳಿಸಲಾಯಿತು. ಬೆಂಗಳೂರಿನ ರಾಜಾಜಿನಗರದ ನಾಗರಾಜ ಸ್ಮಾರಕ ಹೆರಿಗೆ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ವಿನೂತನವಾಗಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತಾದಿಕಾರಿಗಳು ಹಾಗೂ ಅರವಳಿಕೆ ತಜ್ಞರಾದ ಆರ್.ಶ್ವೇತ, ಪ್ರಸೂತಿ ತಜ್ಞರಾದ ಸೌಮ್ಯರಾಣೆ, ಮಕ್ಕಳ ತಜ್ಞರಾದ ಪ್ರಸಾದ್ ಅವರು ಹಾಗೂ ಶ್ರೀ ಮಹಾತಪಸ್ವಿ ಫೌಂಡೇಶನ್ನಿನ ಬೆಂಗಳೂರು ಶಾಖೆಯ ಅಧಿಕಾರಿಗಳು ಜೊತೆಗೂಡಿ ಕಾರ್ಯಕ್ರಮವನ್ನು ವಿನೂತನವಾಗಿ ಯಶಸ್ವಿಗೊಳಿಸಲಾಯಿತು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಡಿಸಿಎಂ ಡಿ.ಕೆ.ಶಿವಕುಮಾರ್  ಯುವಕರಿಗೆ ಸ್ಪೂರ್ತಿ, ಪ್ರೇರಣೆಯಾಗಿದ್ದಾರೆ: ಮಂಜುನಾಥಗೌಡ 

ಸ್ತ್ರೀ ಶಕ್ತಿಯ ಮತ ಒಲಿಸಿಕೊಂಡರೆ ಗೆಲುವು ಸುಲಭ: ಡಾ.ಬೈರಮಂಗಲ ರಾಮೇಗೌಡ

ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾಲಯ ಮತ್ತು ಮಾಹೆಯ ಡ್ಯುಯಲ್ ಪಿಎಚ್ಡಿ ಕಾರ್ಯಕ್ರಮ ಮತ್ತು ಸಂಶೋಧನಾ ಶ್ರೇಷ್ಠತೆಯ ಉಪಕ್ರಮದೊಂದಿಗೆ ಭಾರತ-ಆಸ್ಟ್ರೇಲಿಯಾ ಶೈಕ್ಷಣಿಕ

Samsung ತನ್ನ ಪ್ರಮುಖ ಹೊಸತನ ಮತ್ತು ಶಿಕ್ಷಣ ಕಾರ್ಯಕ್ರಮವಾದ Samsung Solve for Tomorrow ಐದನೇ ಆವೃತ್ತಿಯನ್ನು ಘೋಷಿಸಿದೆ. 

ಬಿಟ್‌ಡೆಲ್ಟಾ ಇಂಡಿಯಾ ವಿಶ್ವದ ಅತಿದೊಡ್ಡ ಕ್ರಿಪ್ಟೋ ಮಾರುಕಟ್ಟೆಗಾಗಿ ಸಾಂಸ್ಥಿಕ ದರ್ಜೆಯ ವರ್ಚುವಲ್ ಡಿಜಿಟಲ್ ಅಸೆಟ್ (VDA) ಮೂಲಸೌಕರ್ಯವನ್ನು ಪ್ರಾರಂಭಿಸಿದೆ.

ಭಾರತದಲ್ಲಿನ ಸ್ಯಾಮ್ಸಂಗ್ ಆರ್ & ಡಿ ಸಂಸ್ಥೆಗಳು ಮೊಬೈಲ್ ನಾವೀನ್ಯತೆಯ ಭವಿಷ್ಯವನ್ನು ಸಹ-ಸೃಷ್ಟಿಸಲು ಸ್ಟಾರ್ಟ್ಅಪ್ಗಳನ್ನು ಆಹ್ವಾನಿಸುತ್ತವೆ.