ವಿಜಯ ದರ್ಪಣ ನ್ಯೂಸ್…….
ಮಕ್ಕಳು ಜಾತಿ-ಮತದ ಭೇದಗಳನ್ನು ಮರೆತು ಬದುಕಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ: ಬಿ.ಆರ್.ಪಾಟೀಲ್

ಶಿಡ್ಲಘಟ್ಟ : ಮಕ್ಕಳು ಜಾತಿ-ಮತದ ಭೇದಗಳನ್ನು ಮರೆತು ಮಾನವೀಯತೆಯಿಂದ ಬದುಕಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಶಾಲೆ ಹಂತದಿಂದಲೇ ‘ನಾವೆಲ್ಲರೂ ಮೊದಲು ಭಾರತೀಯರು’ ಎಂಬ ವಿಶಾಲ ಮನೋಭಾವ ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ (ಬಿಎಂವಿ ಶಾಲೆ) ವಿದ್ಯಾಸಂಸ್ಥೆಯಲ್ಲಿ ಬಿಎಂವಿ ಎಜುಕೇಷನ್ ಟ್ರಸ್ಟ್ ಹಾಗೂ ಸಮಾಜವಾದಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಆರಂಭವಾದ ರಾಷ್ಟ್ರ ಸೇವಾ ದಳದ 8 ದಿನಗಳ ವಸತಿಸಹಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಮತ್ತು ಯುವಜನರ ಮೇಲೆ ಸಮಾಜಕ್ಕೆ ಬಹಳ ನಿರೀಕ್ಷೆಯಿದೆ ಆ ನಿರೀಕ್ಷೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದೇಶಪ್ರೇಮದ ಜತೆಗೆ ಎಲ್ಲರೂ ಒಂದೇ ಎಂಬ ಭಾವನೆಯನ್ನು ಅಳವಡಿಸಿಕೊಂಡು, ಸಾಮಾಜಿಕ ಕಳಕಳಿ ಮತ್ತು ಸೌಹಾರ್ದತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು
,ಪ್ರಜಾ ಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಮನಸ್ಥಿತಿಯನ್ನು ವಿದ್ಯಾರ್ಥಿ, ಯುವ ಜನರು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ತಹಶಿಲ್ದಾರ್ ಗಗನಸಿಂಧು ಮಾತನಾಡಿ ,ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಬಾಗವಹಿಸುವದರಿಂದ
ಸರ್ವತೋಮುಖ ಅಭಿವೃದ್ಧಿಗೆ ಪೂರಕ, ಕಲೆ, ಸಂಗೀತ ಮತ್ತು ಸಾಮಾಜಿಕ ಸೇವೆ ಹಾಗು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಟೀಮ್ ವರ್ಕ್, ಶಿಸ್ತು, ಮತ್ತು ಸೃಜನಶೀಲತೆ ಹೆಚ್ಚುತ್ತದೆ, ಇವು ಶೈಕ್ಷಣಿಕ ಒತ್ತಡವನ್ನು
ಕಡಿಮೆ ಮಾಡಿ ಆರೋಗ್ಯವನ್ನು ಸುಧಾರಿಸುತ್ತವೆ, ಜತೆಗೆ
ಸುಪ್ತ ಪ್ರತಿಭೆಗಳನ್ನು ಹೊರತರುತ್ತವೆ ಎಂದು ನುಡಿದರು.
ಈ ವೇಳೆ ಬಿಎಂವಿ ಶಾಲೆಯ ಹಿರಿಯ ವಿದ್ಯಾರ್ಥಿ ನಾಗರಾಜ್ ಅವರು ತನ್ನ ತಂದೆ ರಂಗಭೂಮಿ ಕಲಾವಿದ ಮುನಿಯಪ್ಪ ಅವರ ಸ್ಮರಣಾರ್ಥ ನಿರ್ಮಿಸಿ ಕೊಟ್ಟ ಬಯಲು ರಂಗಭೂಮಿ ಸ್ಟೀಲ್ ಚಾವಣಿಯನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಇಒ ಆರ್.ಹೇಮಾವತಿ, ಬಿಇಒ ಸಿ.ಎ.ನರೇಂದ್ರಕುಮಾರ್, ಬಿಎಂವಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್.ಕಾಳಪ್ಪ, ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಡಾ. ಎ.ಮುರಿಗೆಪ್ಪ, ಸಮಾಜವಾದಿ ಅಧ್ಯಯನ ಕೇಂದ್ರದ ಬಾಪು ಹೆದ್ದೂರ ಶೆಟ್ಟಿ,
ಜಿ.ವಿ.ಸುಂದರ್ ,ಪ್ರೊ.ಹನುಮಂತ, ತೋಟಗಾರಿಕೆ ಇಲಾಖೆ ನಿವೃತ್ತ ಹಿರಿಯ ಸಹಾಯಕ ನಿರ್ದೇಶಕ ಸಂತೆ ನಾರಾಯಣಸ್ವಾಮಿ, ಚಿದಾನಂದಮೂರ್ತಿ, ಕ್ಯಾಂಪ್ ತರಬೇತುದಾರರಾದ ಚಂದನ್ ಮಾತುಂಗೆ ,ಬಾಬಾ ಸಾಹೇಬ್ ನಡಾಫ್, ಬಿಷ್ಣತಾಪ,ಚಂದನ್ ಸಾಗರ್ ಪಾಟೀಲ್ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.










