--Ads--

ಮೀನುಗಾರರಿಗೆ ಸಲಕರಣೆ ಕಿಟ್ ವಿತರಣೆ ಮಾಡಿದ ಶಾಸಕ ದರ್ಶನ್ ಧ್ರುವನಾರಾಯಣ್

On: April 13, 2026 3:39 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಮೀನುಗಾರರಿಗೆ ಸಲಕರಣೆ ಕಿಟ್ ವಿತರಣೆ ಮಾಡಿದ ಶಾಸಕ ದರ್ಶನ್ ಧ್ರುವನಾರಾಯಣ್

ಸಾರ್ವಜನಿಕರಿಂದ ಅಹವಾಲು ಸ್ವೀಕರಣೆ ಮೀನುಗಾರರಿಗೆ ಸಲಕರಣೆ ಕಿಟ್ ವಿತರಣೆ ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳ ಜೊತೆ ಸಭೆ

ತಾಂಡವಪುರ ಏಪ್ರಿಲ್ 13 ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಂಜನಗೂಡು ತಾಲೂಕು ಪಂಚಾಯತ್ ಸಭಾಂಗಣದಲ್ಲಿ 2025-26ನೇ ಸಾಲಿನ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣಾ ಕಾರ್ಯಕ್ರಮ ಅಮ್ಮಿಕೊಳ್ಳಲಾಗಿತ್ತು ಕ್ಷೇತ್ರದ ಜನಪ್ರಿಯ ಯುವ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಭಾಗವಹಿಸಿ,20 ಫಲಾನುಭವಿಗಳಿಗೆ ಕಿಟ್ಟುಗಳನ್ನು ವಿತರಿಸಲಾಯಿತು. ಈ ಸಲಕರಣೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಮತ್ತಷ್ಟು ಬಲವಾಗುವಂತೆ ತಿಳಿಸಿದರು.

ಜೊತೆಗೆ ಎಂದಿನಂತೆ ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಜನತಾ ದರ್ಶನದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು, ಮುಖಂಡರು ಹಾಗೂ ಕಾರ್ಯಕರ್ತರ ಅಹವಾಲುಗಳು ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಸ್ವೀಕರಿಸಿ, ಪ್ರತಿಯೊಬ್ಬರ ಸಮಸ್ಯೆಯನ್ನು ಆತ್ಮೀಯವಾಗಿ ಆಲಿಸಿ, ಜನಸಾಮಾನ್ಯರ ತುರ್ತು ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಗ್ಯಾಸ್ ಸಿಲೆಂಡರ್ ಸಮಸ್ಯೆ ಬಗ್ಗೆ ಶಾಸಕರಿಗೆ ಮತ್ತು ತಹಸಿದ್ದಾಲ್ ರವರಿಗೆ ಹಲವಾರು ದೂರುಗಳು ಫೋನ್ ಮೂಲಕ ತಿಳಿಸಿದರು ಇದರ ಬಗ್ಗೆ ಚರ್ಚಿಸಲು ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳ ಜೊತೆ ಚರ್ಚಿಸಲಾಯಿತು ದೇಶಾದ್ಯಂತ ಕಾಣಿಸಿಕೊಂಡಿರುವ ಗ್ಯಾಸ್ ಸಿಲೆಂಡರ್ ಸಮಸ್ಯೆ ನಮ್ಮ ತಾಲ್ಲೂಕಿನಲ್ಲಿ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಇಂದು ನಂಜನಗೂಡು ನಗರದ ಶಾಸಕರ ಕಚೇರಿಯಲ್ಲಿ ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳೊಂದಿಗೆ ತಹಸಿಲ್ದಾರ್ ಮತ್ತು ಶಾಸಕರು ಸಭೆ ನಡೆಸಿ ಮಾಹಿತಿಯನ್ನು ತಿಳಿದುಕೊಂಡರು

ಗ್ಯಾಸ್ ಸಮಸ್ಯೆ ಉಂಟಾಗಿರುವುದು ಉಂಟು ಸಾರ್ವಜನಿಕರು ಕೂಡ ಇದಕ್ಕೆ ಸಹಕರಿಸಬೇಕು ನೀವು ಕೂಡ ಸಾರ್ವಜನಿಕರ ಜೊತೆ ಕೇಂದ್ರ ಸರ್ಕಾರದ ಗೈಡ್ ಲೈನ್ ಗಳನ್ನು ಸ್ಪಷ್ಟ ಮಾಹಿತಿಯನ್ನು ನೀಡಿ ಮನವೊಲಿಸಿಕೊಂಡು ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು

ಗ್ಯಾಸ್ ಏಜೆನ್ಸಿ ಪ್ರತಿನಿಧಿಗಳು ಮಾತನಾಡಿ ನಾವು ಕೂಡ ಹಲವಾರು ಗೈಡ್ ಲೈನ್ ಗಳನ್ನು ಅನುಸರಿಸಬೇಕು ನಮಗೂ ಕೂಡ 45 ದಿನ 35 ದಿನ 25 ದಿನ ಕಾಲಾವಕಾಶ ಇದೆ ಇದರ ಜೊತೆಗೆ ಓಟಿಪಿ ಕೂಡ ಬರಬೇಕು ನಂತರ ನಾವು ಸಿಲೆಂಡರ್ ಕೊಡಬೇಕಾಗುತ್ತದೆ ಆದ್ದರಿಂದ ನಾವು ಕೂಡ ಸಾರ್ವಜನಿಕರ ಜೊತೆ ಸ್ಪಂದಿಸಿ ಸ್ಪಷ್ಟ ನಿರ್ದೇಶನ ನೀಡಿ ಮಾಹಿತಿ ನೀಡುತ್ತಿದ್ದೇವೆ ಯಾರು ಕೂಡ ಗ್ರಾಮಗಳಿಂದ ಬರಬೇಡಿ ನಾವೇ ಅಲ್ಲಿಗೆ ಕಾನೂನು ಪ್ರಕಾರ ನೀಡುತ್ತೇವೆ ಎಂದು ತಿಳಿಸಿದ್ದೇವೆ ಆದರೂ ಕೂಡ ಸಣ್ಣಪುಟ್ಟ ಸಮಸ್ಯೆಗಳು ಬಂದಿದೆ ಸರ್ ಮುಂದಿನ ದಿನಗಳಲ್ಲಿ ಬಗೆಹರಿಸಿಕೊಂಡು ಹೋಗುತ್ತವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ತಾಸಿಲ್ದಾರ್ ಸ್ಮಿತಾ ರಾಮ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಇ ಓ ರಾಜೇಶ್ ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಂಜುನಾಥ್ ಬ್ಲಾಕ್ ಅಧ್ಯಕ್ಷರುಗಳಾದ ಸಿಎಂ ಶಂಕರ್ ಶ್ರೀಕಂಠ ನಾಯಕ ಸೇರಿದಂತೆ ಮುಂತಾದವರು ಹಾಜರಿದ್ದರು

WhatsApp

Join Now

Telegram

Join Now

Instagram

Join Now