--Ads--

ಜನ್ಮ ಕೊಟ್ಟ ತಾಯಿಯನ್ನು ಕೊಂದು ಪೊಲೀಸರಿಗೆ ಶರಣಾದ ಮಗಳು.

On: June 13, 2023 9:43 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್.                              ಬೆಂಗಳೂರು ಜೂನ್ 13

ತನ್ನ ತಾಯಿಯನ್ನು ಕೊಂದು ಆಕೆಯ ಶವವನ್ನು ಸೂಟ್​ಕೇಸ್​ನಲ್ಲಿಟ್ಟು ಪೊಲೀಸ್​ ಠಾಣೆಗೆ ಮಗಳೋರ್ವಳು ತಂದಿದ್ದು, ಪೊಲೀಸರು ಘಟನೆ ಕಂಡು ಬೆಚ್ಚಿಬಿದ್ದಿದ್ದಾರೆ.

ಮೈಕೊಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ ಮೆಂಟ್ ನಲ್ಲಿ ಬಂಗಾಳ ಮೂಲದ ಬೀವಾ ಪಾಲ್ (70) ಎಂಬ ಮಹಿಳೆಗೆ ಸೆನಾ ಸೇನ್ (39) ಎಂಬ ಸ್ವಂತ ಮಗಳು ಕೊಲೆ ಮಾಡಿದ್ದಾಳೆ.

ಅತ್ತೆಯೊಂದಿಗೆ ಪ್ಲಾಟ್ ನಲ್ಲಿ ವಾಸವಾಗಿದ್ದು, ತಾಯಿ ಮತ್ತು ಅತ್ತೆಗೆ ದಿನ ಜಗಳವಾಗುತ್ತಿತ್ತಂತೆ. ಇದ್ರಿಂದ ಬೇಸತ್ತ ಸೆನಾಲಿ ತಾಯಿ ನಿದ್ರೆ ಮಾತ್ರೆ ತಿಂದು ಸಾಯುವುದಾಗಿ ಹೇಳ್ತಿದ್ರಂತೆ. ಆದ್ರೆ ಇಂದು ಬೆಳಿಗ್ಗೆ ಸೆನಾಲಿಯೇ ತಾಯಿ 20 ನಿದ್ರೆ ಮಾತ್ರೆ ನೀಡಿ ಸಾಯಿಸಲು ಯತ್ನಿಸಿದ್ದಾಳೆ. ಈ ವೇಳೆ ತಾಯಿ ಹೊಟ್ಟೆ ನೋವು ಎಂದಾಗ ತಾಯಿಯ ಕುತ್ತಿಗೆಗೆ ವೇಲ್ ನಿಂದ ಬಿಗಿದು ಸಾಯಿಸಿದ್ದಾಳೆ. ಇದಾದ ಬಳಿಕ ಟ್ರ್ಯಾಲಿ ಸೂಟ್​ಕೇಸ್​ನಲ್ಲಿ ತಾಯಿಯ ಶವ ಮತ್ತು ತಂದೆಯ ಫೋಟೋ ಇಟ್ಟುಕೊಂಡು ಸ್ಟೇಷನ್​ಗೆ ಹೊತ್ತು ತಂದಿದ್ದಾಳೆ. ಟ್ರ್ಯಾಲಿ ಸೂಟ್​ಕೇಸ್​ನಲ್ಲಿ ತಾಯಿಯ ಶವದ ಜೊತೆಗೆ ತಂದೆಯ ಫೋಟೋ ಕೂಡ ಇಟ್ಟುಕೊಂಡು ಸ್ಟೇಷನ್​ಗೆ ಹೊತ್ತು ತಂದಿದ್ದಾಳೆ.

ಪ್ರತಿಷ್ಟಿತ ಅಪಾರ್ಟ್​ಮೆಂಟ್​ನಿಂದ ತಾಯಿಯ ಮೃತದೇಹವನ್ನು ಹೊತ್ತು ಮೈಕೊಲೇಔಟ್ ಪೊಲೀಸ್ ಠಾಣೆಗೆ ಆರೋಪಿ ಬಂದು ಶರಣಾಗಿದ್ದಾಳೆ. ಸೆನಾಲಿ ಸೇನ್ ಕೃತ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.ಆಕೆಯನ್ನು ಬಂಧಿಸಿದ್ದಾರೆ.ಆಕೆಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

 

 

WhatsApp

Join Now

Telegram

Join Now

Instagram

Join Now