ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ ರೈತರು.

ವಿಜಯ ದರ್ಪಣ ನ್ಯೂಸ್.                           ದೇವನಹಳ್ಳಿ , ಬೆಂಗಳೂರು ಗ್ರಾ.ಜಿಲ್ಲೆ

433ನೇ ದಿನಕ್ಕೆ ಕಾಲಿಟ್ಟ ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ‌ ಹೋರಾಟ.

ಕೆಐಎಡಿಬಿ ಗೆ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ ರೈತರು ನಡೆಸುತ್ತಿರುವ ಹೋರಾಟ 433ನೇ ದಿನಕ್ಕೆ ಕಾಲಿಟ್ಟಿದೆ .ಶೇ 60ರಷ್ಟು ರೈತರು ಭೂಸ್ವಾಧೀನ ವಿರುದ್ಧ ಸಹಿ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ ಅಲ್ಲದೆ ಭೂಸ್ವಾಧೀನ ಕೈಬಿಡುವುದಾಗಿ ಹಿಂದಿನ ಸರ್ಕಾರ ತಿಳಿಸಿತ್ತು.

ಅಂದು ಈಗಿನ ಸರ್ಕಾರದ ಮುಖ್ಯಮಂತ್ರಿ ದೇವನಹಳ್ಳಿ ಭೂಸ್ವಾಧೀನ ಹೋರಾಟಗಾರರ ಬೆಂಬಲಕ್ಕೆ ನಿಂತಿದ್ದರು. ಸಿದ್ದರಾಮಯ್ಯ ಖುದ್ದು ಹೋರಾಟ ಸ್ಥಳ ಚನ್ನರಾಯಪಟ್ಟಣಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದರು. ಈಗ ಅವರದೇ ರಾಜ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ ಆದ್ದರಿಂದ ರೈತರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪರ ಅವರಿಗೆ ಸರ್ಕಾರದ ಮೇಲೆ ಒತ್ತಡ ಏರಿ ಹಾಗೂ ಮೊದಲ  ವಿಧಾನ ಸಭಾ ಅಧಿವೇ಼ಶನದಲ್ಲೆ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣದ ಭೂಸ್ವಾಧೀನ‌ ಕೈಬಿಡಲು ಒತ್ತಡ ಹೇರಬೇಕು ಎಂದು ಮನವಿ ಮಾಡಿದ್ದಾರೆ.