ವಿಜಯ ದರ್ಪಣ ನ್ಯೂಸ್….
ಕೆ ಆರ್.ಪೇಟೆ ತಾಲ್ಲೂಕು ಬಿಜೆಪಿ ಮಹಿಳಾ ಘಟಕ ಅಧ್ಯಕ್ಷರಾಗಿ ಶಿಲ್ಪಾ ಮಂಜುನಾಥ್ ಆಯ್ಕೆ

ಕೆ.ಆರ್.ಪೇಟೆ: ತಾಲ್ಲೂಕಿನ ಬಿಜೆಪಿ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ಶ್ರೀಮತಿ ಶಿಲ್ಪರವರು ಆಯ್ಕೆಯಾಗಿದ್ದಾರೆ.
ತಾಲ್ಲೂಕು ಮಹಿಳಾ ವಿಭಾಗದಲ್ಲಿ ಹಲವಾರು ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದ ಶಿಲ್ಪಮಂಜುನಾಥ್ ರವರ ಕಾರ್ಯವೈಖರಿಯನ್ನು ಗುರುತಿಸಿ ಇಂದು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಗಳನವೀನ್ ರವರು ಶಿಲ್ಪ ಮಂಜುನಾಥ್ ರವರನ್ನು ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ತಾಲ್ಲೂಕು ಘಟಕದ ನೂತನ ಮಹಿಳಾ ಅಧ್ಯಕ್ಷರಾಗಿ ನೇಮಕ ಮಾಡಿ ಜಿಲ್ಲಾಧ್ಯಕ್ಷೆ ಮಂಗಳನವೀನ್ ರವರು ಆದೇಶ ಹೊರಡಿಸಿದ್ದಾರೆ.
ಮಾಜಿ ಸಚಿವ ನಾರಾಯಣಗೌಡರ ನಿವಾಸದ ಆವರಣದಲ್ಲಿ ಕರೆಯಲಾಗಿದ್ದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶ್ರೀಮತಿ ಶಿಲ್ಪರವರು ನೂತನವಾಗಿ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸಾರಂಗಿ ನಾಗರಾಜು ಘೋಷಣೆ ಮಾಡಿದರು.
ನಂತರ ಮಾತನಾಡಿದ ಅವರು ಬಿಜೆಪಿ ಪಕ್ಷವು ಮಹಿಳೆಯರಿಗಾಗಿ ನಿರಂತರವಾಗಿ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿದೆ ಆದುದರಿಂದ ಮಹಿಳೆಯರು ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬೂತ್ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜಪೇಟೆ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕೆ.ಸಿ ನಾರಾಯಣಗೌಡರವರನ್ನು ಮೊತ್ತೊಮ್ಮೆ ಶಾಸಕರಾಗಿ ಮತ್ತು ಸಚಿವರನ್ನಾಗಿ ಮಂಗಳನವೀನ್ ತಿಳಿಸಿದರು.
ಬಿಜೆಪಿ ನೂತನ ಮಹಿಳಾ ಅಧ್ಯಕ್ಷೆ ಶಿಲ್ಪಮಂಜುನಾಥ್ ಮಾತನಾಡಿ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬುದನ್ನು ನೋಡಬಹುದಾದರೆ ಬಿಜೆಪಿ ಪಕ್ಷದಿಂದ ಮಾತ್ರ ಸಾದ್ಯವಿದೆ. ನಾನು ತಾಲ್ಲೂಕು ಅಧ್ಯಕ್ಷಳಾಗುತ್ತೆನೆ ಎಂದು ನಾನು ಕನಸಿನಲ್ಲು ಕಾಣಿರಲಿಲ್ಲ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ನನ್ನನ್ನು ಗುರುತಿಸಿ ಪಕ್ಷದ ಅಧ್ಯಕ್ಷೆಯಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ ನನಗೆ ತಾಲ್ಲೋಕು ಘಟಕದ ಮಹಿಳಾ ಅದ್ಯಕ್ಷೆಯಾಗಲೂ ಕಾರಣರಾದ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ, ಮಾಜಿ ಸಚಿವ ಕೆಸಿ ನಾರಾಯಣಗೌಡ ಜಿಲ್ಲಾ ಅಧ್ಯಕ್ಷ ಇಂದ್ರೇಶ್ ಮಹಿಳಾ ಅಧ್ಯಕ್ಷೆ ಮಂಜುಳನವೀನ್, ಹಾಗೂ ತಾಲ್ಲೋಕಿನ ಎಲ್ಲಾ ಮುಖಂಡರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು,
ಇದೇ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಸಾರಂಗಿ ನಾಗರಾಜು, ಮಂಜುನಾಥ್, ರಾಮಯ್ಯ, ರಾಜು ಪತ್ರಕರ್ತರಾದ ಕೆ ಆರ್ ನೀಲಕಂಠ, ಮಂಡ್ಯ ಜಿಲ್ಲಾ ಮಹಿಳಾ ಘಟಕದ ವೀಣಾ, ಶೋಭ, ಪುಟ್ಟಮ್ಮ ಶೃತಿ. ಭಾಗ್ಯ. ದೇವಿರಮ್ಮ, ನಿರ್ಮಲ, ಸುಜಾತ, ಸುನಂದ ಸರೋಜಮ್ಮ, ಶಾಂತಮ್ಮ, ದೇವಮ್ಮ, ನಾಗಮಣಿ, ಸರೋಜ, ನಾಗಮ್ಮ, ರೂಪಶ್ರಿ, ಚೈತ್ರ, ನಾಗಮ್ಮ, ಲೋಲಾಕ್ಷಿ, ನೇತ್ರ, ಪ್ರಿಯ. ದೇವಕಿ ಚಂದ್ರಕಲಾ, ಸುನಂದ, ದಿವ್ಯ, ಸೇರಿಂದಂತೆ ಹಲವಾರು ಮುಖಂಡರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 2025-2026 ನೇ ಸಾಲಿನಲ್ಲಿ ಎಸ್.ಎಸ್.ಎಲ್ .ಸಿ ಹಾಗಾ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿ ಉತ್ತೀರ್ಣರಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.








