--Ads--

ಅಂತರರಾಷ್ಟ್ರೀಯ ಮಟ್ಟದಲ್ಲಿ ಟಾರ್ಗೆಟ್ ಬಾಲ್ ಕಪ್ ಗೆದ್ದ ಶಿಡ್ಲಘಟ್ಟ ಪವನ್ ಕುಮಾರ್

On: May 8, 2026 6:14 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಅಂತರರಾಷ್ಟ್ರೀಯ ಮಟ್ಟದಲ್ಲಿ ಟಾರ್ಗೆಟ್ ಬಾಲ್ ಕಪ್ ಗೆದ್ದ  ಶಿಡ್ಲಘಟ್ಟ ಪವನ್ ಕುಮಾರ್

ಶಿಡ್ಲಘಟ್ಟ : ಅಂಜನಾದ್ರಿ ಬಡಾವಣೆಯ ಎ.ಪವನ್ ಕುಮಾರ್ ರಾಜ್ಯ, ರಾಷ್ಟ್ರ ಮಟ್ಟದ ಟಾರ್ಗೆಟ್ ಬಾಲ್‌ ಪಂದ್ಯಾವಳಿಯಲ್ಲಿ ಭಾಗವಹಿಸಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ನೇಪಾಳದ ಕಠ್ಮಂಡುವಿನಲ್ಲಿ ನಡೆದ 3ನೇ “ಅಂತರರಾಷ್ಟ್ರೀಯ ಟಾರ್ಗೆಟ್ ಬಾಲ್ ಅಚೀವರ್ಸ್ ಕಪ್ 2026” ರಲ್ಲಿ ಭೂತಾನ್ ದೇಶದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ತಂಡದಲ್ಲಿ ನಗರದ ನಿವಾಸಿ ಎ.ಪವನ್ ಕುಮಾರ್ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ನೇಪಾಳದ ಕಲ್ಮಂಡುವಿನಲ್ಲಿ ಮೇ 3 ರಿಂದ 7ರವರೆಗೆ ನಡೆದ 3ನೇ ಅಂತರರಾಷ್ಟ್ರೀಯ ಟಾರ್ಗೆಟ್ ಬಾಲ್‌ ಅಚೀವರ್ಸ್‌ ಕಪ್ 2026ರಲ್ಲಿ ಭಾರತ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಆಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ, ಚಾಂಪಿಯನ್ ಶಿಪ್ ಗೆದ್ದಿರುವುದು ಹೆಮ್ಮೆ ಎನಿಸಿದೆ , ಇನ್ನಷ್ಟು ಸಾಧನೆ ಮಾಡಲು ಉತ್ಸಾಹ ಮೂಡಿದೆ ,ನಮ್ಮ ತಂದೆ ,ತಾಯಿ ಹಾಗು ತರಬೇತುದಾರರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ’ ಎಂದು ಎ.ಪವನ್ ಕುಮಾರ್ ತಿಳಿಸಿದರು.

ನಗರದ ಅಂಜನಿ ಬಡಾವಣೆಯ ಮೀನಾಕ್ಷಿ ಅನಿಲ್ ಕುಮಾರ್ ದಂಪತಿಗಳ ಮಗನಾದ ಎ.ಪವನ್‌ ಕುಮಾರ್ ಶಾಲಾ ಶಿಕ್ಷಣವನ್ನು ವಾಸವಿ ವಿದ್ಯಾ ಸಂಸ್ಥೆಯಲ್ಲಿ, ಕಾಲೇಜು ಶಿಕ್ಷಣವನ್ನು ಜ್ಞಾನಜ್ಯೋತಿ ಮತ್ತು ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಮಾಡಿದ್ದು, ರೇವಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

WhatsApp

Join Now

Telegram

Join Now

Instagram

Join Now