ವಿಜಯ ದರ್ಪಣ ನ್ಯೂಸ್….
ಒಂದು ಕಪ್ ಟೀ ಕುಡಿಯದೇ ಇದ್ದರೆ ಬಹುತೇಕರ ದಿನ ಶುರುವಾಗುವುದೇ ಇಲ್ಲ: ಚ.ಹಡಪದ್

ವಿಜಯಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದಲ್ಲಿ ಗಾಂಧಿ ಚೌಕದಲ್ಲಿರುವ ಶ್ರೀ ಬನಶಂಕರಿ ಟೀ ಸ್ಟಾಲ್ ಮಾಲೀಕ ರಂಜಿತ್ ಶೆಟ್ಟಿ ರವರನ್ನು ವಿಶ್ವ ಚಹಾ ದಿನ ಅಂಗವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್ ಅಭಿನಂದಿಸಿದರು .
ನಂತರ ಮಾತನಾಡುತ್ತಾ ಅವರು ಬೆಳಗ್ಗೆ ಎದ್ದು ಒಂದು ಕಪ್ ಟೀ ಕುಡಿಯದೇ ಇದ್ದರೆ ಬಹುತೇಕರ ದಿನ ಶುರುವಾಗುವುದೇ ಇಲ್ಲ. ಒಂದು ದಿನ ಚಹಾ ಕುಡಿಯದೇ ಇದ್ದರೆ ಅಂದೇನೋ ಕಳೆದುಕೊಂಡಂತೆ ಫೀಲ್ ಆಗುತ್ತದೆ. ಇದು ಟೀ ಬಹುತೇಕರ ಜೀವನವನ್ನು ಆವರಿಸಿಕೊಂಡ ಪರಿ. ಭಾರತದಲ್ಲಿ ಟೀ ಮಾಡದ ಮನೆ ಸಿಗುವುದು ತೀರಾ ಅಂದರೆ ತೀರಾ ಅಪರೂಪವೇನೋ.
ಟೀ ನಮ್ಮ ಸಂಸ್ಕೃತಿಯ ಭಾಗವಾಗಿಹೋಗಿದೆ. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಟೀ ಕೊಟ್ಟು ಸತ್ಕರಿಸುವ ಪದ್ಧತಿ ಈಗಲೂ ಇದೆ. ಚಹಾದ ವಿಚಾರವಾಗಿ ಸಾಕಷ್ಟು ಯುದ್ಧ ಪ್ರತಿಭಟನೆ. ಸಂಶೋಧನೆಯ ನಡೆದಿವೆ .
ಚಹಾಕೂಟ ಹೆಸರಿನ ಲ್ಲಿ ರಾಜಕೀಯ ಬದಲಾವಣೆ ಹೊಸ ಸಂಘ ಪ್ರಾರಂಭ ವಾಗಿವೆ ರವೀಂದ್ರನಾಥ ಟ್ಯಾಗೋರ್ ಪುಸ್ತಕ ದಲ್ಲಿ ಬ್ರಿಟಿಷರ ಕಾಲದ ಚಹಾ ಗೋಷ್ಠಿಯ ವಿಚಾರ ತಿಳಿಯುತ್ತದೆ ಅಮೆರಿದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಟಿ ಮಹತ್ವದ ಪಾತ್ರ ವಹಿಸುತ್ತದೆ ವರ್ಷ ಮೇ 21ರಂದು ವಿಶ್ವದಾದ್ಯಂತ ಚಹಾ ದಿನಾಚರಣೆ ಆಚರಿಸಲಾಗುತ್ತದೆ. ಟೀ ಉತ್ಪಾದಿಸುವ ದೇಶಗಳು ಈ ದಿನವನ್ನು ಆಚರಿಸುತ್ತವೆ. ಟೀ ಉತ್ಪಾದಿಸುವ ದೇಶಗಳಾದ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೇಟ್ನಾಂ, ಇಂಡೋನೇಷ್ಯಾ, ಕೀನ್ಯಾ, ಮಲೇಷ್ಯಾ, ಉಗಾಂಡಾ ಸೇರಿದಂತೆ ಹಲವು ದೇಶಗಳಲ್ಲಿ ಈ ದಿನವನ್ನು ಆಚರಿಸುವ ಪದ್ಧತಿ ಶುರುವಾಗಿತ್ತು.
ಚಹಾದ ಬಗ್ಗೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಸಲುವಾಗಿ ಈ ಆಚರಣೆ ಶುರುವಾಗಿತ್ತು. ಭಾರತದಲ್ಲಿ ಚಹಾ ಪ್ರಿಯರಿಗೆ ಟೀ ಕುಡಿಯಲು ಕಾರಣವೇ ಬೇಕಾಗಿಲ್ಲ. ಸ್ನೇಹಿತರು ಜೊತೆಯಾದಾಗ, ಕುಟುಂಬಸ್ಥರು ಜೊತೆಯಾದಾಗ, ದಣಿವಾದಾಗ, ಹೊರಗೆಲ್ಲೋ ಹೋಗಿದ್ದಾಗ ಟೀ ಹೀರುವುದು ಹೊಸದೇನು ಇಲ್ಲ. ಚೀನಾದ ಬಳಿಕ ಭಾರತ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಶವಾಗಿ ಹೊರಹೊಮ್ಮಿದೆ.
ಅಸ್ಸಾಂ, ಡಾರ್ಜಿಲಿಂಗ್, ಕರ್ನಾಟಕ ಹೀಗೆ ದೇಶದ ಪ್ರಮುಖ ರಾಜ್ಯಗಳು ಟೀ ಉತ್ಪಾದನೆಯಲ್ಲಿ ವಿಶ್ವದ ಗಮನ ಸೆಳೆದಿದೆ ಎಂದು ತಿಳಿಸಿದರು.
ಈ ಸರಳ ಕಾರ್ಯಕ್ರಮದಲ್ಲಿರಂಗಭೂಮಿ ಕಲಾವಿದ ಕೆ.ಎಚ್. ಚಂದ್ರಶೇಖರ್ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಎ ಬಿ ಪರಮೇಶ್ವರಯ್ಯ ನಗರ ಘಟಕ ಅಧ್ಯಕ್ಷ ಜೆ ಎನ್ ಶ್ರೀನಿವಾಸ್ ತಿಗಳ ವೈಭವ ಪತ್ರಕರ್ತ ಜೆ ಆರ್ ಮುನಿ ವೀರಣ್ಣ ,ಎಲೆಕ್ಟ್ರಿಕ್ ನಾಗರಾಜ್ ಮುರುಳಿ ಮಾಜಿ ಗ್ರಂಥ ಪಾಲಕ ರೇವಣ್ಣ, ನಾರಾಯಣಸ್ವಾಮಿ, ಜಯರಾಮ್ ಭಾಗವಹಿಸಿ ಅಭಿನಂದಿಸಿದರು.










