ವಿಜಯ ದರ್ಪಣ ನ್ಯೂಸ್…..
ಡಿ ಕೆ.ಶಿವಕುಮಾರ್ ಸಿ.ಎಂ.ಆಗಲಿ ಎಂದು ಹರಕೆ
ತೀರಿಸಿದ ರಾಜೀವ್ ಗೌಡ

ಶಿಡ್ಲಘಟ್ಟ : ವಿಧಾನಸೌಧದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ ರಾಜೀವ್ ಗೌಡ, ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡು ನೀಡಿ, ಸಿಎಂ ಆಗಲೆಂದು ಹರಕೆ ಹೊತ್ತು ಮುಡಿ ನೀಡಿದ ವಿಷಯ ತಿಳಿಸಿದರು.
ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಹರಕೆ ಹೊತ್ತು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮುಡಿ ಅರ್ಪಿಸಿ, ವಿಶೇಷ ಪಲ್ಲಕಿ ಉತ್ಸವ ಪೂಜೆ ನೆರವೇರಿಸಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಡಿಕೆಶಿಗೆ ಲಡ್ಡು ಪ್ರಸಾದ ನೀಡಿದರು.
ತಮ್ಮ ಕುಟುಂಬಸ್ಥರು ಮತ್ತು ಬೆಂಬಲಿಗರೊಂದಿಗೆ ಮೆಟ್ಟಿಲು ಹತ್ತಿ ತಿರುಮಲಕ್ಕೆ ತೆರಳಿ ವಿಶೇಷ ಪೂಜೆ ಪಲ್ಲಕ್ಕಿ ಉತ್ಸವ ನೆರವೇರಿಸಿ ಬಂದಿರುವ ವಿಚಾರ ಕೇಳಿ ಡಿಕೆಶಿ ಖುಷಿ ಪಟ್ಟರು,ಯಾವುದೇ ಅಡ್ಡಿ ಆತಂಕವಿಲ್ಲದೆ ಸಿಎಂ ಆಗಿ ಉತ್ತಮ ಆಡಳಿತ ನೀಡುವುದಷ್ಟೆ ಅಲ್ಲ, 2028ರಲ್ಲೂ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನೀವೇ ಮುಖ್ಯಮಂತ್ರಿ ಆಗಬೇಕು ಎಂದು ಆಶಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನ ರಾಜೀವ್ ಗೌಡ ಹಾಗೂ ಕಾಂಗ್ರೆಸ್ ಮುಖಂಡರು ಹಾಜರಿದ್ದರು.









