--Ads--

ಹಿರೀಕಾಟಿ ಬಳಿ ಕಾರು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ ಆರೋಪಿಗಳ ಬಂಧನ

On: June 6, 2026 3:25 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಹಿರೀಕಾಟಿ ಬಳಿ ಕಾರು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದ್ದ ಆರೋಪಿಗಳ ಬಂಧನ

ತಾಂಡವಪರ: ಜೂನ್ 05 : ಚಾಮರಾಜನಗರ ಲೋಕಸಭಾ ವ್ಯಾಪ್ತಿಗೆ ಬರುವ ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ ಗೇಟ್ ಬಳಿ ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಾಂಕ 21-05-2026 ರಂದು ಸಂಜೆ ಸುಮಾರು 6.45 ಗಂಟೆ ಸಮಯದಲ್ಲಿ ಮೈಸೂರು ಕಡೆಯಿಂದ ಕೇರಳ ಕಡೆ ತೆರಳುವಾಗ ಹಿಂದುಗಡೆ ಮೈಸೂರು ಕಡೆಯಿಂದ ಒಂದು ಇನೋವಾ ಕಾರಿನಲ್ಲಿ ಅರೋಪಿಗಳು ಬಂದು ಆಸೀಫ್ ಎಂಬುವರ ಅಪಹರಣ ಮಾಡಿದ ಪ್ರಕರಣದಲ್ಲಿ ಆರೋಪಿಗಳನ್ನುಎಡೆಮುರಿ‌ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿತರು ಹಾಗೂ ಕಳುವಾಗಿರುವ ಕಾರುಗಳು ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮುತ್ತುರಾಜ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ ಎನ್ ಶಶಿಧರ್, ಡಿವೈಎಸ್ಪಿ ಶ್ರೀಮತಿ ಸ್ನೇಹರಾಜ್ ರವರ ಮಾರ್ಗದರ್ಶನದಲ್ಲಿ ಬೇಗೂರು ವೃತ್ತದ ಆರಕ್ಷಕ ವೃತ್ತ ನಿರೀಕ್ಷಕ ಮೋಹಿತ್‌ ಸಹದೇವ್‌, ಪಿಎಸ್ಐ ನವೀನ್,ಪಿ.ಎಸ್.ಐ ಲೋಕೇಶ್, ಹಾಗೂ ಸಿಬ್ಬಂದಿಗಳಾದ ಪುಟ್ಟರಾಜು,ಅಜಿತ್ಕುಮಾರ್,ದಿವಾಕರ,ಶಂಕರಲಿಂಗೇಗೌಡ, ಸಚಿನ್,ಮಹದೇವಸ್ವಾಮಿ, ಮಹೇಂದ್ರ, ಸಿದ್ದರಾಮು, ರಾಜು, ಚಾಲಕರಾದ ಹರೀಶ್,ಶಿವಕುಮಾರ ರವರನ್ನು ಒಳಗೊಂಡ ಒಂದು ತಂಡವನ್ನು ರಚಿಸಲಾಗಿತ್ತು.

ಈ ತಂಡವು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಆರೋಪಿಗಳನ್ನು 1) ಅನೀಶ್ ಪಿ.ಎಸ್ ಬಿನ್ ಶಶಿ ಪಿ.ಆರ. 32 ವರ್ಷ, ಹಿಂದೂ ಈಳವ ಜನಾಂಗ, ಕಲ್ಲು ಡಿಸೈನ್ ಕೆಲಸ, ಪಳ್ಳಾಯಿ ಹೌಸ್, ಕೆ.ಕೆ ರೋಡ್, ಪೊಟ್ಟ, ಚಾಳುಕುಡಿ, ತ್ರಿಶೂರು ಜಿಲ್ಲೆ, ಕೇರಳ 2) ಅನೂಪ್ ಟಿ.ಜೆ ಬಿನ್ ಜೋಶ್, 29 ವರ್ಷ, ಕ್ರಿಶ್ಚಿಯನ್ ಜನಾಂಗ, ಪರ್ನಿಚರ್ಸ್ ವ್ಯಾಪಾರ, ತಕ್ಕೋಲ್ಕಾರನ್ ಹೌಸ್, ಕೆ.ಕೆ ರೋಡ್, ಪೊಟ್ಟ, ಚಾಳುಕುಡಿ, ತ್ರಿಶೂರು ಜಿಲ್ಲೆ, ಕೇರಳ 3) ರಾಹುಲ್ ಇ.ಪಿ ಬಿನ್ ಪ್ರದೀಪ್. ಇ.ಕೆ. 28 ವರ್ಷ, ಎಲೆಕ್ನಿಷಿಯನ್, ಹಿಂದೂ ಈಳವ ಜನಾಂಗ, ಎಲುವಂಗಲ್ ಹೌಸ್, ಪೊಟ್ಟ ಪೋಸ್ಟ್, ಚಾಳುಕುಡಿ ತಾ, ತ್ರಿಶೂರು ಜಿಲ್ಲೆ, 4) ಹೆನೋಕ್ ಆಂಟೋ ಬಿನ್ ಆಂಟೋ, 26 ವರ್ಷ, ಕ್ರಿಶ್ಚಿಯನ್ ಜನಾಂಗ, ಫುಡ್ ಡಿಲವರಿ ಕೆಲಸ, ಕೈತರನ್ ಹೌಸ್, ಕೆ.ಕೆ ರೋಡ್, ಪೊಟ್ಟ, ಚಾಳುಕುಡಿ, ತ್ರಿಶೂರು ಜಿಲ್ಲೆ, ಕೇರಳ 5) ಅನುರಾಜ್ ಪಿ.ಆರ್ ಬಿನ್ ರಾಜನ್, 35 ವರ್ಷ, ರಿಯಲ್ ಎಸ್ಟೇಟ್, ಹಿಂದೂ ಈಳವ ಜನಾಂಗ, ಪೊಟ್ಟಂಪರಂಬಿಲ್ ಹೌಸ್, ಕೆ.ಕೆ ರೋಡ್, ಪೊಟ್ಟ, ಚಾಳುಕುಡಿ, ತ್ರಿಶೂರು ಜಿಲ್ಲೆ, 6) ಅಮಲ್ ಪಿ.ಎ ಬಿನ್ ಅಯ್ಯಪ್ಪನ್, 26 ವರ್ಷ, ಹಿಂದೂ ಈಳವ ಜನಾಂಗ, ಫುಡ್ ಡಿಲವರಿ ಕೆಲಸ, ಪೊಟ್ಟಂಪರಂಬಿಲ್ ಹೌಸ್, ಕೆ.ಕೆ ರೋಡ್, ಪೊಟ್ಟ, ಚಾಳುಕುಡಿ, ತ್ರಿಶೂರು ಜಿಲ್ಲೆ, 8) ರಮೇಶ್ ಉಂಡಪ್ಪನ್ ಬಿನ್ ರಾಘವನ್ ಉಂಡಪ್ಪನ್, ಇರಿಂಗಪಿಲ್ಲಿ ಹೌಸ್, ಕೊಡಕರ ಗ್ರಾಮ, ತ್ರಿಶೂರು ಜಿಲ್ಲೆರವರನ್ನು ಬಂಧಿಸಿ ಆರೋಪಿತರಿಂದ ಕಳುವಾಗಿದ್ದ ಸುಮಾರು 8,20,000/-ರೂ ಮೌಲ್ಯದ ಸುಮಾರು ಕೆಎಲ್-05. ಎ.ಆರ್-8671 ನಂಬರಿನ ಬಿಳಿ ಬಣ್ಣದ ಮಾರುತಿ ಸ್ವಿಪ್ಟ್ ಕಾರು ಮತ್ತು ಕೆಎಲ್-45, ವಿ-2507 ನಂಬರಿನ ಬಿಳಿ ಬಣ್ಣದ ಇನ್ನೋವಾ ಕಾರು ಹಾಗೂ ಓಷ್ಟೋ ಕಂಪನಿಯ ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪತ್ತೆ ಕಾರ್ಯದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲದೇ ವೈರ್‌ಲೈಸ್ ವಿಭಾಗದ ಆರಕ್ಷಕ ನಿರೀಕ್ಷಕ, ನವೀನ್ ಕುಮಾರ್ ಹಾಗೂ ಸೈಬರ್ ವಿಭಾಗದ ವೆಂಕಟೇಶ್ ಎ,ಎಸ್,ಐ ಹಾಗೂ ಶಂಕರರಾಜು ಹೆಚ್,ಸಿ-60 ಭಾಗಿಯಾಗಿರುತ್ತಾರೆ.

ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಎಸ್ಪಿ ಮುತ್ತುರಾಜ್  ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿದರು.

WhatsApp

Join Now

Telegram

Join Now

Instagram

Join Now