--Ads--

ಅಕ್ಷಯಪಾತ್ರೆ ಸಂಸ್ಥೆಯಿಂದ ಅತ್ಯಾಧುನಿಕ ಅಡುಗೆ ಮನೆ ಉದ್ಘಾಟನೆ ಸಾವಿರಾರು ಮಕ್ಕಳಿಗೆ ಸಿಗಲಿದೆ ಬಿಸಿಯೂಟದ ಆಸರೆ

On: June 9, 2026 3:23 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್..

ಅಕ್ಷಯಪಾತ್ರೆ ಸಂಸ್ಥೆಯಿಂದ ಅತ್ಯಾಧುನಿಕ ಅಡುಗೆ ಮನೆ ಉದ್ಘಾಟನೆ ಸಾವಿರಾರು ಮಕ್ಕಳಿಗೆ ಸಿಗಲಿದೆ ಬಿಸಿಯೂಟದ ಆಸರೆ

ಶಿಡ್ಲಘಟ್ಟ : ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳು, ಯುವಕರು ಸೇರಿದಂತೆ ಯಾರೇ ಆಗಲಿ
ಉತ್ತಮ ಆರೋಗ್ಯವು ನಮ್ಮದಾಗಬೇಕೆಂದರೆ ಉತ್ತಮ ಪೌಷ್ಟಿಕ ಆಹಾರ, ಹಣ್ಣು, ಹಂಪಲು ತರಕಾರಿ ಸೇವನೆ, ಉತ್ತಮ ದೈಹಿಕ ಚಟುವಟಿಕೆ ಮುಖ್ಯ ಎಂದು ಮಾಜಿ ಸಚಿವ  ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ದಿವಂಗತ.ಎನ್.ವಿ. ಕೃಷ್ಣಮೂರ್ತಿರಾವ್ ಮತ್ತು ದಿವಂಗತ.ಎನ್.ಆರ್.
ಪದ್ಮಾವತಮ್ಮ ಅವರ ಸ್ಮರಣಾರ್ಥ ಇನ್ಫೋಸೀಸ್‌ನ ಸುಧಾಮೂರ್ತಿ, ನಾರಾಯಣಮೂರ್ತಿ ಅವರ ನೆರವಿನಿಂದ ನಿರ್ಮಿಸಿದ “ಅಕ್ಷಯ ಪಾತ್ರೆ” ಅಡುಗೆಮನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಮತ್ತು ತರಗತಿಯಲ್ಲಿ ಮಕ್ಕಳ ಹಸಿವನ್ನು ಸಂಪೂರ್ಣವಾಗಿ ನೀಗಿಸಲು ಇಸ್ಕಾನ್ ಸಂಸ್ಥೆ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದು ,ದೇಶಾದ್ಯಂತ ಈ ಸಂಸ್ಥೆ ಆರಂಭಿಸಿರುವ 81ನೇ ಅಡುಗೆ ಮನೆಯಾಗಿದ್ದು, ಸಂಸ್ಥೆಯ ಬೆಳ್ಳಿಹಬ್ಬದ ವರ್ಷದಲ್ಲೇ ಈ ಘಟಕ ಉದ್ಘಾಟನೆಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ಸಾಕಷ್ಟು ಮಂದಿಗೆ ‘ಇಸ್ಕಾನ್‌’ ನ ಈ ಸೇವಾ ಕಾರ್ಯದ ಬಗ್ಗೆ ಹಾಗೂ ಅನುದಾನದ ಬಗ್ಗೆ ಸಾಕಷ್ಟು ಗೊಂದಲಗಳು ಇವೆ ಇಸ್ಕಾನ್‌ಗೆ ಸರ್ಕಾರದಿಂದ ಸಿಗುವುದಕ್ಕಿಂತಲೂ ಸಂಘ ಸಂಸ್ಥೆಗಳು, ದಾನಿಗಳು ಹೆಚ್ಚಿನ ನೆರವು ನೀಡುತ್ತಿದ್ದಾರೆ ಇಸ್ಕಾನ್ ಸಂಸ್ಥೆಯು ಲಾಭದ ಉದ್ದೇಶವಿಲ್ಲದೆ ಸೇವಾ ಮನೋಭಾವದಿಂದ ಈ ಎಲ್ಲಾ ಕಾರ್ಯಗಳನ್ನು ನಡೆಸುತ್ತಿದೆ ಎಂದರು.

ತಾಲ್ಲೂಕಿನಲ್ಲಿ 50 ಸರ್ಕಾರಿ ಶಾಲೆಗಳ 2350 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಇಸ್ಕಾನ್ ಸಂಸ್ಥೆ ವತಿಯಿಂದ ತಯಾರಿಸಿ ವಿತರಿಸಲಾಗುವುದು ,ಆಧುನಿತ ಯಂತ್ರಗಳ ಬಳಕೆ ಮಾಡಿ, ಸ್ವಚ್ಚತೆ ನೈರ್ಮಲ್ಯ ಕಾಪಾಡಿ ಕೊಂಡು ಉತ್ತಮ ಗುಣಮಟ್ಟದ, ಪೌಷ್ಟಿಕ ಆಹಾರವನ್ನು ತಯಾರಿಸಲಾಗುವುದು ಎಂದರು.

ಈ ಹಿಂದೆ ಅಡುಗೆ ಸಿಬ್ಬಂದಿ ಅಡುಗೆ ಸಿದ್ಧಪಡಿಸುತ್ತಿದ್ದರು , ಇದೀಗ ಸುಧಾರಿತ ಬೃಹತ್ ಯಂತ್ರೋಪಕರಣಗಳ ಅಳವಡಿಸಿರುವುದರಿಂದ ಎಲ್ಲವೂ ಯಂತ್ರಗಳ ಮೂಲಕವೇ ನಡೆಯುತ್ತಿರುವುದು ನಾವು ನೋಡಬಹುದು ಎಂದು ನುಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಅಂತ್ಯವಿಲ್ಲದ ಅಪರಿಮಿತ ಆಹಾರವನ್ನು ಒದಗಿಸುವ ಸಾಮಥ್ಯವನ್ನು ಹೊಂದಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೂ ಆಹಾರವನ್ನುಣಿಸುವುದು ಸಾಧ್ಯವಾಗಿದೆ ತಾಲ್ಲೂಕಿನ 50 ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸುವ ಮೂಲಕ ಹಸಿವನ್ನು ನೀಗಿಸುವ ಸಮಾಜಮುಖಿ ಕೆಲಸವನ್ನು ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇಸ್ಕಾನ್ ದೇವಾಲಯದ “ಅಕ್ಷಯ ಪಾತ್ರೆ” ಸಂಸ್ಥೆಯು ಇಲ್ಲಿ 81ನೇ ಆಡುಗೆ ಮನೆಯನ್ನು ನಿರ್ಮಿಸಿದೆ ,ಕೇಂದ್ರ ಸರ್ಕಾರದ ‘ಪಿ.ಎಂ.ಪೂಷಣ್’ ಯೋಜನೆಯಡಿ ‘ವಿಕಸಿತ ಭಾರತಕ್ಕಾಗಿ ಪೌಷ್ಟಿಕ ಆಹಾರ’ ಎಂಬ ಆಶಯ ದೊಂದಿಗೆ ಪ್ರಾರಂಭಿಸಲಾಗಿದೆ ಎಂದರು.

ಅಕ್ಷಯ ಪಾತ್ರೆಯ ಸಹ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಶ್ರೀಚಂಚಲಪತಿ ಪ್ರಭು ಮಾತನಾಡಿ
“ಅಕ್ಷಯಪಾತ್ರೆ” ಸಂಸ್ಥೆಯು ವಿಶ್ವದಲ್ಲೇ ಅತಿ ದೊಡ್ಡ ತಂತ್ರಜ್ಞಾನ ಆಧಾರಿತ ಮತ್ತು ಸ್ವಯಂಚಾಲಿತ ಅಡುಗೆ ಮನೆಗಳ ಜಾಲವನ್ನು ಹೊಂದಿದೆ ,ಇಲ್ಲಿ ಅತ್ಯಂತ ಸುರಕ್ಷಿತ ಹಾಗೂ ಆರೋಗ್ಯಕರ ವಾತಾವರಣದಲ್ಲಿ, ಯಾವುದೇ ಮನುಷ್ಯನ ಸ್ಪರ್ಶವಿಲ್ಲದೆ ಅತ್ಯಾಧುನಿಕ ಯಂತ್ರಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಅಡುಗೆ ಸಿದ್ಧಪಡಿಸಲಾಗುತ್ತದೆ ಎಂದು ವಿವರಿಸಿದರು.

2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭವಾದ “ಅಕ್ಷಯಪಾತ್ರೆ” ಇಂದು ಜಾಗತಿಕ ಮಟ್ಟದಲ್ಲಿ ಬೃಹತ್ ಸಾಮಾಜಿಕ ಚಳವಳಿಯಾಗಿ ಬೆಳೆದು ನಿಂತಿದೆ,ಪ್ರಸ್ತುತ ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸಂಸ್ಥೆ ಸಕ್ರಿಯವಾಗಿದ್ದು, 25 ಸಾವಿರಕ್ಕೂ ಕ್ಕೂ ಹೆಚ್ಚು ಶಾಲೆ ಹಾಗೂ ಅಂಗನವಾಡಿಗಳ ಒಟ್ಟು 23.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿದಿನ ಪೌಷ್ಟಿಕಾಹಾರ ಒದಗಿಸುತ್ತಿದೆ ಎಂದು ನುಡಿದರು.

ಇದೇ ವೇಳೆ ಅಡುಗೆ ಮನೆ, ದಾಸ್ತಾನು ಕೊಠಡಿ, ತರಕಾರಿ, ದವಸ ದಾನ್ಯಗಳನ್ನು ಶುಚಿಗೊಳಿಸುವ ವಿಧಾನ, ಸ್ವಚ್ಚತೆ ನೈರ್ಮಲ್ಯ ಕಾಪಾಡಿಕೊಳ್ಳುವ ಬಗೆಯನ್ನು ಗಣ್ಯರು ಹಾಗು ಅಧಿಕಾರಿಗಳು ವೀಕ್ಷಿಸಿದರು, ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಅಕ್ಷಯ ಪಾತ್ರೆಯ ಸಹ ಸಂಸ್ಥಾಪಕರು ಹಾಗೂ ಉಪಾಧ್ಯಕ್ಷ ಶ್ರೀಚಂಚಲಪತಿ ಪ್ರಭು ,ಶ್ರೀಗುಣಾಕರ್ ರಾಮ್ ಪ್ರಭು,
ತಹಶೀಲ್ದಾರ್ ಗಗನ ಸಿಂಧು ,ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ನಗರಸಭೆ ಪೌರಾಯುಕ್ತೆ ಅಮೃತಗೌಡ, ಆನೂರು ಗ್ರಾ.ಪಂ. ಪಿಡಿಒ ಕಾತ್ಯಾಯಿನಿ ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now