ರಾಜ್ಯದಲ್ಲಿ ಕರವೇ ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ : ಕರವೇ ಅಧ್ಯಕ್ಷ ಮುನಿರಾಜ್(ಕುಟ್ಟಿ
ಶಿಡ್ಲಘಟ್ಟ : ಕನ್ನಡ ನಾಡು, ನುಡಿ, ನೆಲ ಮತ್ತು ಜಲದ ರಕ್ಷಣೆಗಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕರವೇ ಕನ್ನಡಿಗರ ಹಕ್ಕುಗಳ ಧ್ವನಿ ಹಾಗು ರಕ್ಷಣೆಯಾಗಿ ರಾಜ್ಯದಲ್ಲಿ ಕೆಲಸ ಮಾಡುತ್ತಿದೆ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಮುನಿರಾಜ್(ಕುಟ್ಟಿ) ತಿಳಿಸಿದರು.
ನಗರದ ಸಿದ್ದಾರ್ಥನಗರ ಬಡಾವಣೆಯ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ 60ನೇ ವರ್ಷದ ಹುಟ್ಟುಹಬ್ಬ ಆಚರಣೆ ಪ್ರಯುಕ್ತ ಸಸಿ ನೆಡುವ ಮೂಲಕ ಆಚರಿಸಿ, ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿಗಳು ಹಾಗು ಸಿಹಿ ಹಂಚಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
40 ವರ್ಷಗಳಿಂದ ಕನ್ನಡಿಗರಿಗಾಗಿ ನಾರಾಯಣಗೌಡರು ಹೋರಾಟ, ಚಳವಳಿ ನಡೆಸುತ್ತಿದ್ದಾರೆ ಕಾವೇರಿ ನದಿ ನೀರಿನ ವಿವಾದ, ಬೆಳಗಾವಿ ಗಡಿ ವಿವಾದ ಮತ್ತು ಕನ್ನಡ ನಾಮಫಲಕಗಳ ಕಡ್ಡಾಯ ಅಳವಡಿಕೆ ಸೇರಿ ಅನೇಕ ಮಹತ್ವದ ಹೋರಾಟಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕಿ ನಗೀನಾ, ಶಿಕ್ಷಕಿಯರಾದ ಕವಿತಾ,ಅರ್ಚನಾ, ಅನುಜಾ, ಕರವೇ ಜಿಲ್ಲಾ ಉಪಾಧ್ಯಕ್ಷ ಅಕ್ರಂಪಾಷಾ, ತಾಲ್ಲೂಕು ಉಪಾಧ್ಯಕ್ಷ ಸಾದಿಕ್, ನಗರ ಉಪಾಧ್ಯಕ್ಷರಾದ ಅರುಣ್ ಕುಮಾರ್, ಶ್ರೀರಾಮ್, ನಗರ ಕಾರ್ಯದರ್ಶಿ ಚನ್ನಕೃಷ್ಣಪ್ಪ, ಅಪ್ಸರ್‌ಪಾಷಾ, ಮಹಿಳಾ ಉಪಾಧ್ಯಕ್ಷೆ ಶಾರದಮ್ಮ, ಲಕ್ಷ್ಮೀ, ಮತ್ತಿತರರು ಪಾಲ್ಗೊಂಡಿದ್ದರು.