--Ads--

ಧರ್ಮ ಸಂಸ್ಕೃತಿ  ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಸುಸ್ಥಿತಿಯಲ್ಲಿಡಲು ರಂಗಭೂಮಿ  ಶಕ್ತಿ ಹೊಂದಿದೆ

On: June 12, 2026 6:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ಧರ್ಮ ಸಂಸ್ಕೃತಿ  ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಸುಸ್ಥಿತಿಯಲ್ಲಿಡಲು ರಂಗಭೂಮಿ ಶಕ್ತಿ ಹೊಂದಿದೆ

ಧರ್ಮ ಸಂಸ್ಕೃತಿ ಸೌಹಾರ್ದತ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಸುಸ್ಥಿತಿಯಲ್ಲಿಡುವ  ಮುಖ್ಯ ಕಾರ್ಯವನ್ನು ರಂಗಭೂಮಿ ನಿರ್ವಹಿಸುವ ಶಕ್ತಿ ಹೊಂದಿದೆ ಎಂದು ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ನುಡಿದರು.
ಅವರು ಇಂದು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ  ಆಯೋಜಿಸಿದ್ದ ಶಿವಮೊಗ್ಗ ರಂಗಾಯಣ ನಿರ್ಮಿತ ಜನಪ್ರಿಯ ಕಥೆಗಾರ ಮತ್ತು ಕಾದಂಬರಿಕಾರ ಬೋಳುವಾರು ಮಹಮ್ಮದ್ ಕುಂಞ ಅವರ ದೀರ್ಘ ಕಾದಂಬರಿ ಆಧಾರಿತ ನಾಟಕ ಸ್ವಾತಂತ್ರ‍್ಯದ ಓಟ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮೀಣ ಪ್ರದೇಶದ ರಂಗಚಟುವಟಿಕೆಗಳು ಮನಸು-ಮನಸುಗಳನ್ನು ಬೆಸೆವ, ಜಾತಿ ಧರ್ಮಗಳನ್ನು ಬೇಧವನ್ನು ಹೊಡೆದೋಡಿಸುವ ನೆಲೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಆಗ ಮಾತ್ರ ಸಮಸಮಾಜ ನಿರ್ಮಾಣ ಕಾರ್ಯ ಸಾಧ್ಯ. ಇದು ನಾಡಿನಾದ್ಯಂತ ಪಸರಿಸಬೇಕಾದ ಅವಶ್ಯಕತೆ ಇದೆ.
ಕನ್ನಡದ ಕಥೆ-ಕಾದಂಬರಿಕಾರರು ಯಾರಿಗೂ ಕಡಿಮೆ ಇಲ್ಲದಂತೆ ಅದ್ಭುತವಾದ ವಿಚಾರಗಳನ್ನು ತಮ್ಮ ಬರಹಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅಂತವುಗಳನ್ನು ಹೀಗೆ ರಂಗಪಟ್ಟಿಗಳನ್ನಾಗಿ ನಿರ್ಮಿಸಿ ಹತ್ತಾರು ಕಡೆ ಪ್ರದರ್ಶನ ನೀಡಬೇಕಾದ ಅವಶ್ಯಕತೆ ಎಂದು ಕರೆನೀಡಿದರು.
ಯಾವುದೇ ಪ್ರಚಾರಕ್ಕೆ ತಲೆಕೆಡಿಸಿಕೊಳ್ಳದೆ, ಎಲೆಮರೆಯ ಕಾಯಿಯಂತೆ ಒಂದು ಸುಂದರ ಪರಿಸರದಲ್ಲಿ ಯಾರ ಸಹಾಯ ಸಹಕಾರಗಳನ್ನೂ ಬಯಸದೆ, ತಮ್ಮ ಬದುಕಿನ ಸರ್ವಸ್ವವನ್ನೂ ಧಾರೆಯೆರೆದು ಮುದ್ದುಶ್ರೀ ದಿಬ್ಬದಂತಹ ಅಪರೂಪದ ರಂಗ ಶಿಕ್ಷಣ ಕೇಂದ್ರವನ್ನು ತೆರೆದು ಸಮಾಜಕ್ಕೆ ಅರ್ಪಿಸಿರುವ ಡಾ, ಬೈರೇಗೌಡರು ನಾಡಿಗೆ ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು.
ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಾರ್ಯದರ್ಶಿ ಡಾ. ಎಂ. ಬೈರೇಗೌಡ ಮಾತನಾಡಿ ರಂಗಭೂಮಿಯ ಮೂಲಕವೇ ನಮ್ಮ ನೆಲದ ಸೊಗಡನ್ನು ಪಸರಿಸುವ ಕಾರ್ಯದಲ್ಲಿ ನಿರತರಾಗಲು ಸಾರ್ವಜನಿಕರು ಮತ್ತು ಸರ್ಕಾರದ ಸಹಭಾಗಿತ್ವ ಸಹಾಯ ಸಹಕಾರ ಈಗ ಅಗತ್ಯವಿದೆ. ಜನರ ಆಲೋಚನೆಗಳ ಅಭಿರುಚಿಯ ಅಭಿವೃದ್ಧಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಸಂಘ ಸಂಸ್ಥೆಗಳ ಮೇಲಿದೆ. ಹಾಗೆಯೇ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿ ಶೈಕ್ಷಣಿಕ ಬೆಳವಣಿಗೆಯಲ್ಲಿ ಮುಂಚೂಣಿಯಲ್ಲಿರುವ ರಂಗಭೂಮಿಗೆ ಕಾಯಕಲ್ಪ ಆಗಬೇಕಾಗಿದೆ.

ಜನಬದುಕಿನ ರೀತಿ ರಿವಾಜುಗಳನ್ನು ತೆರೆದು ತೋರಿಸುವ ವಿಶೇಷ  ಶಕ್ತಿ ರಂಗಭೂಮಿಗಿದೆ. ಇಂತಹ ಅಭೂತಪೂರ್ವ ಶಕ್ತಿ ಪಡೆದಿರುವ ರಂಗ ಚಟುವಟಿಕೆಗಳನ್ನು ಮತ್ತು ರಂಗ ಪಠ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸಿ ಪ್ರಾತ್ಯಕ್ಷಿಕೆಗಳ ನಿರ್ಮಾಣ ಮಾಡಿದಲ್ಲಿ ರಂಗಭೂಮಿ ಎಂಬ ಪ್ರಬಲವಾದ ಮಾಧ್ಯಮವೊಂದು ಬಳಕೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ಶಿಕ್ಷಣ ತಜ್ಞರು ಕಾರ್ಯ ತತ್ಪರರಾಗಬೇಕೆಂದು ಅಗ್ರಹಿಸಿದರು.
ಶಿವಮೊಗ್ಗ ರಂಗಾಯಣದ ನಿರ್ದೇಶಕ ಪ್ರಸನ್ನ ಮಾತನಾಡಿ, ಇದು ಸರ್ಕಾರದ ಒಂದು ಮಹತ್ವದ ಯೋಜನೆ. ಈ ಯೋಜನೆಯ  ಫಲವು ಕನ್ನಡ ನಾಡಿನಾದ್ಯಂತ ಹಂಚಿಕೆಯಾಗಬೇಕಾಗಿದೆ ಎಂಬ ಮಹತ್ವಾಕಾಂಕ್ಷೆಯಿಂದ ತನ್ನ ಕೆಲಸವನ್ನು ಆರಂಭಿಸಿದೆ. ಈ ಬಗೆಯ ಗುರಿ ಇಟ್ಟುಕೊಂಡೇ ಈ ನಾಟಕ ನಿರ್ಮಿಸಲಾಗಿದೆ. ಈಗಾಗಲೇ ಹದಿನೈದಕ್ಕೂ ಹೆಚ್ಚು ಪ್ರದರ್ಶನಗಳನ್ನು ನಾಡಿನ ವಿವಿಧ ಭಾಗಗಳಲ್ಲಿ ಪ್ರದರ್ಶನಗೊಂಡು ಜನಮೆಚ್ಚುಗೆಗೆ ಪಾತ್ರವಾಗಿರುವ ಈ ಯೋಜನೆಗೆ ಜನಬೆಂಬಲ ದೊರೆತಿದೆ. ಈ ಬಗೆಯ ರಂಗ ಚಟುವಟಿಕೆಗಳಿಗೆ ಸರ್ಕಾರ ಧಾರಾಳವಾಗಿ ಅನುದಾನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುವ ತುರ್ತು ಅಗತ್ಯವಿದೆ ಎಂದು ಆಗ್ರಹಿಸಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ ಬಿ ಚೇತನ ಕುಮಾರ್  ವೇದಿಕೆಯಲ್ಲಿದ್ದರು.
ಮುದ್ದುಶ್ರೀ ದಿಬ್ಬದ ವಿಶಾಲ ಬಯಲು ರಂಗದಲ್ಲಿ ಪ್ರದರ್ಶನಗೊಂಡ ಸ್ವಾತಂತ್ರö್ಯದ ಓಟ ನಾಟಕವನ್ನು ಹಿರಿಯ ರಂಗನಿರ್ದೇಶಕ ನಟರಾಜ್ ಹೊನ್ನವಳ್ಳಿ ರಂಗಪಠ್ಯ ಸಿದ್ಧಪಡಿಸಿ, ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ. ಗೋಮಾರನಹಳ್ಳಿ ಮಂಜುನಾಥ್ ನಾಟಕವನ್ನು ರೂಪಾಂತರಿಸಿದ್ದಾರೆ. ಸಹನಿರ್ದೇಶನ ಸಲ್ಮಾ ದಂಡಿನ್. ಸಂಗೀತ ನಿರ್ದೇಶನ ರಾಘವ ಕಮ್ಮಾರ. ರಂಗಸಜ್ಜಿಕೆ ಮದುಸೂದನ್, ರಮೇಶ್ ಎಸ್ ಮೈಸೂರು, ಶಂಕರ್ ಕೆ. ಬೆಳಲಕಟ್ಟೆ. ಬೆಳಕಿನ ವಿನ್ಯಾಸ ಮಂಜುನಾರಾಯಣ್. ವಸ್ತçವಿನ್ಯಾಸ ಸಹನಾ ಪಿಂಜಾರ್ ಎಲ್ಲರ ಶ್ರಮ ಸ್ವಾತಂತ್ರö್ಯದ ಓಟ ನಾಟಕ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು. ಇಪ್ಪತ್ತೆöÊದಕ್ಕೂ ಹೆಚ್ಚು ಕಲಾವಿದರ ಮೂರುವರೆ ಗಂಟೆಗಳ ಈ ಪ್ರದರ್ಶನ ಜನಮೆಚ್ಚುಗೆಗೆ ಪಾತ್ರವಾಯಿತು.
Dr. M. Byregowda
9448102158

WhatsApp

Join Now

Telegram

Join Now

Instagram

Join Now