--Ads--

ತವರು ಜಿಲ್ಲೆ ಮೈಸೂರಿಗೆ ಆಗಮಿಸಿದ ಮಾಜಿ ಸಿ ಎಂ ಸಿದ್ದರಾಮಯ್ಯನವರಿಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

On: June 27, 2026 5:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ತವರು ಜಿಲ್ಲೆ ಮೈಸೂರಿಗೆ ಆಗಮಿಸಿದ ಮಾಜಿ ಸಿ ಎಂ ಸಿದ್ದರಾಮಯ್ಯನವರಿಗೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ

ತಾಂಡವಪುರ ಜೂನ್ 27 ಹಿಂದುಳಿದ ವರ್ಗಗಳ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆ, ಮೈಸೂರಿಗೆ ಆಗಮಿಸಿದಾಗ ಮೈಸೂರು ಬೆಂಗಳೂರು ರಸ್ತೆ ಹೈವೇಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಅದ್ದೂರಿಯಾಗಿ ಬಾರಿ ಗಾತ್ರದ ಸೇಬಿನ ಹಾರ ಹೂವಿನ ಸುರಿಮಳೆಗೈವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿ ಬರಮಾಡಿಕೊಂಡರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿಗೆ ಆಗಮಿಸಿದಾಗ ಅಭಿಮಾನಿಗಳು ಕಾರ್ಯಕರ್ತರು ಶಾಸಕರುಗಳು ಅದ್ದೂರಿಯಾಗಿ ಸ್ವಾಗತ ಕೋರಿ ತೆರದ ವಾಹನದಲ್ಲಿ ಮೆರವಣಿಗೆ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರು

ಈ ಸಂದರ್ಭದಲ್ಲಿ ಕಾರ್ಯಕರ್ತರ ಅಭಿಮಾನಿಗಳ ಜಯ ಘೋಷಗಳನ್ನು ಕೂಗಿದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಹರ್ಷ ಚಿತ್ತರಾಗಿ ಕಾರ್ಯಕರ್ತರುತ್ತ ಕೈಬೀಸಿ ಪಕ್ಷದ ಕಾರ್ಯಕರ್ತರ ಮುಖಂಡರುಗಳಿಗೆ ಮತ್ತಷ್ಟು ಹುಮ್ಮಸ್ಸು ಬರುವಂತಾಯಿತು

ಈ ಸಂದರ್ಭದಲ್ಲಿ ಶಾಸಕರುಗಳಾದ ಡಾ ಎಚ್ ಸಿ ಮಹದೇವಪ್ಪ ,ಕೆ ಹರೀಶ್ ಗೌಡ ಮಾಜಿ ಶಾಸಕ ಎಮ್ ಕೆ ಸೋಮಶೇಖರ್, ಕಾಂಗ್ರೆಸ್ ಪಕ್ಷದ ವಕ್ತಾರ ಎಮ್ ಲಕ್ಷ್ಮಣ್ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ಆರ್ ಮೂರ್ತಿ ಪಂಚಾಯತಿ ಮಾಜಿ ಅಧ್ಯಕ್ಷ ಬಿಎಮ್ ರಾಮು ಲತಾ ಸಿದ್ದಶೆಟ್ಟಿ ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಿಪಾಳ್ಯ ಬಸವರಾಜು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ವ್ಯವಸ್ಥಾಪನೆ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜೆಗೆ ಆರ್ ಇಂದನ್ ಬಾಬು ಉದ್ಬೂರು ಕೃಷ್ಣ ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲರು ಆದ ಎಂ ಸಿ ಹುಂಡಿ ಶಿವಪ್ರಸಾದ್ ಚಿನ್ನಂಬಳ್ಳಿ ಸಿ ಆರ್ ಮಹದೇವ ಹೆಜ್ಜೆಗೆ ಗೋಪಾಲಕೃಷ್ಣಪಾಳ್ಯ ಸುರೇಶ್ ಸಕಳ್ಳಿ ಬಸವರಾಜು ಎಂ ದಕ್ಷಿಣ ಮೂರ್ತಿಮರೆಸೆ ಸಿದ್ದನಾಯ್ಕ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಜರಿದ್ದರು

###########################₹₹#

      ಇತಿಹಾಸ ಸೃಷ್ಟಿ! 

 

ಬಂಧು-ಬಾಂಧವರೇ, 
ಬೆವರೊಡಲ ಮಕ್ಕಳೇ, 
ಎದೆಯ ಗುಡಿಯಲಿದ್ದರೆ ಸಾಕಲ್ಲವೇ?  
ನಮ್ಮ  ಬಾಬಾಸಾಹೇಬರು! 
ಅವರ ಮೂರ್ತಿಗಳ ಎಲ್ಲೆಡೆ  
ಕಡೆದು ನಿಲ್ಲಿಸಿ, ಅಂಧಭಕ್ತಿ  
ಮೆರೆಯುವುದು ಏತಕೆ ಬೇಕು. 
ಕಿಡಿಗೇಡಿಗಳ ಕೊಂಪೆಯಲ್ಲಿ ,  
ಫ್ಲೆಕ್ಸ್ ಬೋರ್ಡ್, ಬ್ಯಾನರುಗಳಲಿ,  
ಬಾಬಾಸಾಹೇಬರು ಅದ್ಯಾಕೆ ಬೇಕು?!  
ಪಟ್ಟಭದ್ರರ ಅನಾಗರೀಕತೆಗೆ, 
ರಾಜಕಾರಣಿಗಳ ಓಟಿನ ತೆವಲಿಗೆ  
ಬಾಬಾಸಾಹೇಬರ ನಿಷ್ಕಲ್ಮಶ ಮೂರ್ತಿ  
ಅದ್ಯಾಕೆ ಬಲಿಯಾಗಬೇಕು?! 
ಕಿಡಿಗೇಡಿಗಳ ಕೃತ್ಯ ಖಂಡಿಸಲು, 
ಪರ-ವಿರೋಧದ ಪರದೆ ಚರ್ಚೆಯಲಿ ಕುಳಿತು
ಮತಿಗೆಟ್ಟ ಆಂಕರ್ ಹಾವಳಿಯಲಿ ಬೆಂದು 
ನಿರಾಸೆಯ ನೋವಲ್ಲಿ ನರಳುವುದೇತಕೆ ಬೇಕು. 
ಪುಸ್ತಕ ಪ್ರೇಮಿಗಳು ನಾವಾಗಬೇಕು  
ಪುಸ್ತಕದಲಿ ಜ್ಞಾನ ತುಂಬಿಸಿಕೊಳ್ಳಬೇಕು  
ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳೇ  
ನಮಗೆ ದಾರಿ ದೀಪ; ಸ್ತೂಪ. 
ಸಂವಿಧಾನ ಸಂರಕ್ಷಣೆಯೇ  
ನಮ್ಮ ಬಾಳಿಗೆ ಬೆಳಕು; ಹೊಳಪು. 
ವೈಚಾರಿಕ ನಡೆಯಲ್ಲಿ , ವೈಜ್ಞಾನಿಕ ಬೆಳಕಲ್ಲಿ , 
ಬಾಬಾಸಾಹೇಬರ ನಿತ್ಯ ಕಾಣಬೇಕು. 
ಅವರ ಹೆಜ್ಜೆ  ಗುರುತಲ್ಲಿ  ನಮ್ಮ ಹೆಜ್ಜೆ ಬೆರೆಸಿ 
ಬುದ್ಧ ನೆಡೆಗೆ ನಮ್ಮ  ನಡಿಗೆ ಸಾಗಬೇಕು. 
ಧರ್ಮದ ಅಂಗಡಿ ಸುಟ್ಟು ಭಸ್ಮ ಮಾಡಿ, 
ಹೊಸ ಇತಿಹಾಸ  ಸೃಷ್ಟಿ ಮಾಡಬೇಕು. 
ಮಾನವತೆಯ  ಎಲ್ಲೆಲ್ಲೂ  ಬಿತ್ತಬೇಕು. 
  –ಲಕ್ಷೀಸುತ, ರಾಮನಗರ. 

WhatsApp

Join Now

Telegram

Join Now

Instagram

Join Now