ವಿಜಯ ದರ್ಪಣ ನ್ಯೂಸ್…..
ಪೋಷಕರು ತಮ್ಮ ಮಕ್ಕಳಿಗೆ ಪೋಲಿಯೋ ತಡೆಗಟ್ಟಲು ಲಸಿಕೆ ಹಾಕಿಸಿಕೊಳ್ಳಿ :ಎನ್ ಚಂದ್ರು

ತಾಂಡವಪುರ ಜೂನ್ 29 ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರದ ಹದಿನಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸುಮಾರು ಒಂದು ಸಾವಿರದ 563 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಲಾಯಿತು
ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ತಾಂಡವಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್ ಚಂದ್ರುರವರು ಸರ್ಕಾರದ ಆದೇಶದಂತೆ ಮಕ್ಕಳ ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೆ ಪಲ್ಸ್ ಪೋಲಿಯೋ ರಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಮಕ್ಕಳಿಗೆ ತಗಲುವ ಪೋಲಿಯೋ ರೋಗಗಳನ್ ತಡೆಗಟ್ಟಲು ಈ ಲಸಿಕೆ ಸಹಕಾರಿಯಾಗಲಿದ್ದು ಪೋಷಕರು ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳುವ ಮೂಲಕ ಪೋಲಿಯೋ ಮುಕ್ತ ರಾಜ್ಯವನ್ನಾಗಿಸಲು ಸಹಕರಿಸಿ ಎಂದರು
ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹದಿನಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಗ್ರಾಮಗಳಲ್ಲಿನ ಬೂತ್ ಗಳಲ್ಲಿ ಪೋಲಿಯೋ ಲಸಿಕೆಯನ್ನು ಯಾವ ಯಾವ ಗ್ರಾಮಗಳಲ್ಲಿ ಎಷ್ಟು ಮಕ್ಕಳಿಗೆ ಲಸಿಕಿ ಹಾಕಲಾಯಿತು ಎನ್ನುವ ವಿವರ
1. ಹದಿನಾರು – 208
2. ಹದಿನಾರು ಮೋಳೆ – 95
3. ಮಲ್ಲರಾಜಯ್ಯನಹುಂಡಿ – 28
4. ಕೆಂಪಿಸಿದ್ದನಹುಂಡಿ – 196
5. ಹೆಜ್ಜಿಗೆ – 31
6. ಬಸವನಪುರ – 32
7. ಚಿಕ್ಕಯ್ಯನಛತ್ರ – 44
8. ಬಂಚಳ್ಳಿಹುಂಡಿ – 90
9. ತಾಂಡವಪುರ – 334
10. ಅಡಕನಹಳ್ಳಿ – 86
11. ಹೆಬ್ಯಾ – 65
12. ಹಳ್ಳಿದಿಡ್ಡಿ – 113
13. ಏಚಗಳ್ಳಿ – 56
14. ಮರಳೂರು – 113
15. ಗೊದ್ದನಪುರ – 72
ಒಟ್ಟು 15 ಗ್ರಾಮಗಳ 1563 ಮಕ್ಕಳಿಗೆ ಪೋಲಿಯೊ ಲಸಿಕೆ ನೀಡಲಾಗಿದ್ದು ಇಂದು ಸಹ ಬಿಟ್ಟು ಹೋಗಿರುವ ಮಕ್ಕಳಿಗೆ ಲಸಿಕೆಯನ್ನು ಮನೆ ಮನೆಗ ತೆರಳಿ ಹಾಕಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಎನ್ ಚಂದ್ರು ಆರೋಗ್ಯ ಕೇಂದ್ರದ ನಾಗೇಂದ್ರ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯ ಕಾರ್ಯಕರ್ತರು ಹಾಜರಿದ್ದರು










